Advertisement

ಕೋಟ್ಯಾಂತರ ಲೂಟಿಯ ಇಡಿ ತನಿಖೆ ಬಗ್ಗೆ ಚರ್ಚೆ ಮಾಡದೆ, ಸಿಡಿ ಚರ್ಚೆ ಮಾಡ್ತೀರಾ?: ವಿಶ್ವನಾಥ್

03:34 PM Mar 25, 2021 | Team Udayavani |

ಮೈಸೂರು: ಸದನದಲ್ಲಿ ಕೋಟ್ಯಾಂತರ ರೂ. ಲೂಟಿ ಆಗಿರುವ ಇಡಿ ತನಿಖೆ ಬಗ್ಗೆ ಚರ್ಚೆ ಮಾಡುವುದಿಲ್ಲ, ಸಿಡಿ ಬಗ್ಗೆ ಚರ್ಚೆ ಮಾಡ್ತೀರಾ? ಸಿಡಿಯೇ ಹೆಚ್ಚಾಯ್ತಾ ನಿಮಗೆ ಎಂದು ಹಳ್ಳಿಹಕ್ಕಿ, ಎಂಎಲ್ ಸಿ ಹೆಚ್.ವಿಶ್ವನಾಥ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ಮುಗಿದ ಸದನ ಮುಗಿಯಿತು. ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಬಜೆಟ್ ಅಧಿವೇಶ ಅಂದರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಅದು ಯಾವುದೇ ಚರ್ಚೆ ಆಗಲೇ ಇಲ್ಲ. ಈ ಬಜೆಟ್ ಅಧಿವೇಶನ ಜನತಂತ್ರ ವ್ಯವಸ್ಥೆಯ ಅಣಕ ಎಂದು ಟೀಕಿಸಿದರು.

ಇದು ಸರ್ಕಾರದಷ್ಟೆ ಅಲ್ಲ ವಿರೋಧ ಪಕ್ಷದ ತಪ್ಪೂ ಇದೆ. ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತೆದೆಯೋ ಅಲ್ಲಿ ಸರ್ಕಾರ ಚೆನ್ನಾಗಿದೆ. ಆದರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಹೊಣೆಗೇಡಿತನ ಪ್ರದರ್ಶನ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕಾರಣವೇ ಹೆಚ್ಚಾಯ್ತು. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ. 2.5 ಲಕ್ಷ ಕೋಟಿ ಬಜೆಟ್ ನ್ನು ಚರ್ಚೆಯೇ ಇಲ್ಲದೆ ಮುಗಿಸಿದ್ದಾರೆ ಎಂದರು.

ಇದನ್ನೂ ಓದಿ:ಮಾಸ್ಕ್ ಧರಿಸದೆ ಓಡಾಡುವವರಿಗೆ ಮಾಸ್ಕ್ ವಿತರಿಸಿದ ಉಡುಪಿ ಪೊಲೀಸರು

ಸದನದಲ್ಲಿ ಇಬ್ಬರು ಮಾಜಿ ಸಿಎಂಗಳ ಜವಬ್ದಾರಿ ಏನು? ನಿಮಗೆ ಸಿಡಿಯೇ ದೊಡ್ಡದಾಯಿತೆ? ಸಂಬಂಧಪಟ್ಟ ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ ಇನ್ನೇನಿದೆ. ಆರು ಮಂತ್ರಿಗಳ ಮೇಲೆ ಚರ್ಚೆ, ಸುಧಾಕರ್ ಮೇಲೆ ಚರ್ಚೆ. ಇದೇ ಬೇಕಾಗಿತ್ತಾ ನಿಮಗೆ? ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆನಾ ಮಾಡುವುದು. ಈ ಬಗ್ಗೆ ಜವಬ್ದಾರಿ ಇಲ್ಲವೇನೋ ಎನ್ನುವ ರೀತಿ ನಡೆದುಕೊಂಡಿದ್ದೀರಿ ಎಂದು ಸಿದ್ದರಾಮಯ್ಯ ಮತ್ತು ಎಚ್ ಡಿಕೆ ವಿರುದ್ಧ ಟೀಕೆ ಮಾಡಿದ್ದಾರೆ.

Advertisement

30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿಗಿದೆ, ಆದಾದರೂ ಸರಿಯಾಗಿ ನಡೆದಿದೆಯೇ? ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದರು. ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದರೆ ಉಪಯೋಗ ಇಲ್ಲ ಎಂದು ಹೇಳಿದರು.  ಇಂತವರೆಲ್ಲ ವಿರೋಧ ಪಕ್ಷದಲ್ಲಿದ್ದರೆ ಇನ್ನೇನಾಗುತ್ತದೆ! ನೀವು ರಾಜಕಾರಣ ಮಾಡಿ ಭಾರಿ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳುತ್ತೀರಾ? ಜನ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಇದನ್ನೂ ಓದಿ: ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆ: ಸಾ.ರಾ.ಮಹೇಶ್

ಸಚಿವ ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರು ನಿನ್ನೆಯೇ ಕ್ಷಮೆ ಕೇಳಿದ್ದಾರೆ. ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅದು ಮುಗಿದು ಹೋಗಿದೆ ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ವಿರೋಧ ಪಕ್ಷಗಳು ಇದನ್ನು ಉಪಚುನಾವಣೆಗೆ ಬಳಸಿಕೊಳ್ಳುತ್ತಿವೆ ಎಂದರು.

ನಾವಿದ್ದಾಗ ಭಾರಿ ಚಿನ್ನ ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು. ಈಗ ಎಲ್ಲವು ಹೋಗಿದೆ, ನಾವು ವಾಪಸ್ ಬರುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಇದರಿಂದ ಪ್ರಯೋಜನ ಇಲ್ಲ. ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ ಮಾಡಿದ್ದು ವ್ಯವಸ್ಥೆಯ ಅಣಕ ಎಂದು ಹೆಚ್.ವಿಶ್ವನಾಥ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next