Advertisement

ಶಾಸಕರ ಗ್ರಾಮ ವಾಸ್ತವ್ಯ ಜನರ ದಿಕ್ಕು ತಪ್ಪಿಸುವ ಕಾರ್ಯ

12:48 PM Apr 13, 2018 | Team Udayavani |

ಮಾಲೂರು: ಇಲ್ಲಿನ ಶಾಸಕ ಕೆ.ಎಸ್‌.ಮಂಜುನಾಥಗೌಡರು ತಮ್ಮ ಆಡಳಿತದ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫ‌ಲರಾಗಿದ್ದು, ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕೋಚಿಮುಲ್‌ ನಿರ್ದೇಶಕ ಕೆ.ವೈ.ನಂಜೇಗೌಡ ಆರೋಪಿಸಿದರು.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಜೆಡಿಎಸ್‌ ಮುಖಂಡರಾದ ತಬಲಾ ರಾಮಪ್ಪ, ಸುಬ್ರಹ್ಮಣ್ಯ, ಶ್ಯಾಮಣ್ಣ, ಚೇತನ್‌ ಕುಮಾರ್‌, ಜನಾರ್ದನ್‌, ಚಾನ್‌ ಬಾಯ್‌, ಮುರಳಿ, ವೆಂಕಟೇಶ್‌, ಅಶೋಕ್‌ ರೆಡ್ಡಿ, ಶ್ಯಾಮ್‌ ಕುಮಾರ್‌, ಮಂಜುನಾಥ್‌, ರವಿಕುಮಾರ್‌, ಪ್ರಸಾದ್‌, ಅಮರ್‌, ಸಿ.ಪಿ.ಹರೀಶ್‌, ದಯಾನಂದ್‌, ಚೇತನ್‌, ಚಿನ್ನಪ್ಪ, ಕೋಡೂರು ಕೃಷ್ಣ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸದ ಶಾಸಕರು, ಪ್ರಸಕ್ತ ತಾಲೂಕಿನ ಹಳ್ಳಿಗಳಲ್ಲಿ ರಾತ್ರಿ ಕಳೆಯುವ ಮೂಲಕ ತಮ್ಮೊಂದಿಗೆ ಸದಾ ಇರುವುದಾಗಿ ಹೇಳಿಕೆ ನೀಡುತ್ತಾ ಚುನಾವಣೆ ತಂತ್ರವನ್ನು ಆರಂಭಿಸಿದ್ದಾರೆ. ಆದ್ದರಿಂದ, ತಾಲೂಕಿನ ಜನತೆ ಸ್ಥಳೀಯ ಮುಖಂಡರಿಗೆ ಬೆಂಬಲ ನೀಡುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. 

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಶತಸಿದ್ಧ: ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಹಳ್ಳಿಯಿಂದಲೂ ಯುವಕರು ಪಕ್ಷವನ್ನು ಬೆಂಬಲಿಸುತ್ತಿರುವುದಿಂದ ಕಾಂಗ್ರೆಸ್‌ ಪಕ್ಷ ತಾಲೂಕಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಶತಸಿದ್ಧ ಎಂದರು.

ಪಕ್ಷದ ಸಿದ್ಧಾಂತಗಳು ಮತ್ತು ರಾಜ್ಯ ಕಾಂಗ್ರೆಸ್‌ ಸರಕಾರದ ಜನಪರ ಆಡಳಿತ ಹಾಗೂ ಸಾಮಾಜಿಕ ಕಳಕಳಿಯನ್ನು ಗಮನಿಸಿರುವ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

Advertisement

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡ ಸುಬ್ರಹ್ಮಣ್ಯ ಮಾತನಾಡಿ, ಕಳೆದ 5 ವರ್ಷಗಳಿಂದ ಜೆಡಿಎಸ್‌ನಲ್ಲಿದ್ದೆವು. ಅಲ್ಲಿ ಶಾಸಕರ ಏಕಚಕ್ರಾಧಿಪತ್ಯದಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಸಹಕಾರ ನೀಡಿಲ್ಲ.

ಆದ್ದರಿಂದ, ಬೇಸತ್ತು ಸ್ಥಳೀಯರಾದ ನಂಜೇಗೌಡರನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀನಾರಾಯಣ್‌, ಮಾಜಿ ಕಾರ್ಯದರ್ಶಿ ಎಸ್‌.ಎನ್‌.ರಘುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾದ ಸಿ.ರಾಜಣ್ಣ, ಟಿ.ಮುನಿಯಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಚ್‌.ಚನ್ನರಾಯಪ್ಪ, ಪ್ರದೀಪ್‌ರೆಡ್ಡಿ,

ಎಂ.ಜಿ.ಮಧುಸೂದನ್‌, ಅಶ್ವತ್ಥರೆಡ್ಡಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಕೋಟೆ ತಿಮ್ಮನಾಯಕನಹಳ್ಳಿ ಮುನಿರಾಜು, ಮೋಹನ್‌ ಕೃಷ್ಣ, ಎಂ.ಪಿ.ವಿ.ಮಂಜು, ನವೀನ್‌, ಜಾಕಿ ಮಂಜು, ವಿ.ಶ್ರೀನಿವಾಸ್‌, ಕೋಳಿ ನಾರಾಯಣ್‌, ಕೋಳಿ ನವೀನ್‌, ಬಾಬುರೆಡ್ಡಿ, ರಾಜಗೋಪಾಲರೆಡ್ಡಿ, ಬೀಡಿ ಮಂಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next