Advertisement
ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸುತ್ತಿರುವ ಉದ್ಯೋಗಾ ರ್ಥಿಗಳು ಶಾಸಕರ ಕಚೇರಿ ಶ್ರಮಿಕ ಸಂಪರ್ಕಿಸಿದಲ್ಲಿ ಅವರಿಗೆ ಹೊಂದಾಣಿಕೆ ಯಾಗುವ ಸೂಕ್ತ ಉದ್ಯೋಗದ ವ್ಯವಸ್ಥೆ ಕಲ್ಪಿಸಲಿದೆ. ಪ್ಲೇಸ್‌ಮೆಂಟ್ ಅಗತ್ಯತೆ ಇರುವ ಪ್ರತಿಷ್ಠಿತ ಕಂಪೆನಿಗಳ ಮುಖ್ಯಸ್ಥರನ್ನು ಬೆಳ್ತಂಗಡಿ ಕರೆಸಿ ಸಂದರ್ಶನ ನಡೆಸಿ ಅಗತ್ಯ ತರಬೇತಿ ನೀಡಿ ನೇಮಕಾತಿಗೆ ಸಹಾಯ ಮಾಡುವ ಪ್ರಯತ್ನ ನಡೆದಿದೆ. ಮಾತ್ರವಲ್ಲದೆ ಕಚೇರಿಯಲ್ಲಿ ಮಾಹಿತಿ ಸಂಗ್ರಹಣೆಗೆ ಇಬ್ಬರನ್ನು ನೇಮಿಸಲಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ಮಕ್ಕಳು ಸಂಕಷ್ಟ ಎದುರಿಸಬಾರದು ಎಂಬ ಉದ್ದೇಶದಿಂದ, ನಿರುದ್ಯೋಗಿಗಳ ತಳಮಳಗಳನ್ನು ಅರಿತ ಶಾಸಕ ಹರೀಶ್ ಪೂಂಜ ಅವರು ಅರ್ಹ ಉದ್ಯೋಗಾರ್ಥಿಗಳಿಗೆ ಕಲಿಕೆಗೆ ತಕ್ಕ ಗಳಿಕೆಯ ಭರವಸೆಯ ನೀಡುವ ಈ ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ಉದ್ಯೋಗಾಂಕ್ಷಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು shramikabeltangadi.jobs@gmail.com ಗೆ ಕಳುಹಿಸಬಹುದು.
Related Articles
ನಾನು ಕೆ.ಪಿ.ಟಿ. ಮಂಗಳೂರಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮ ಪೂರ್ಣಗೊಳಿಸಿ ಉದ್ಯೋಗ ಆಕಾಂಕ್ಷೆಯಿಂದ ಶಾಸಕರ ಕಚೇರಿಗೆ ನನ್ನ ವಿವರ ನೀಡಿದ್ದೆ. ಸಂದರ್ಶನಕ್ಕೆ ಕರೆದಿದ್ದರು. 11 ಮಂದಿಯಲ್ಲಿ 3 ಮಂದಿ ಆಯ್ಕೆಯಾಗಿದ್ದೇವೆ. ನಮಗೆ ಶಾಸಕರ ಪ್ರಯತ್ನದಿಂದ ಉದ್ಯೋಗ ಭರವಸೆ ಸಿಕ್ಕಿರುವುದು ಖುಷಿಯಾಗಿದೆ.
– ಸುಜೀತಾ ಎಸ್., ಉಜಿರೆ
Advertisement
ವಿಸ್ತರಣೆ ಚಿಂತನೆಈಗಷ್ಟೇ ವಿದ್ಯಾಭ್ಯಾಸ ಮುಗಿಸಿದವರಿಗೆ ಮಾತ್ರ ಸದ್ಯ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಚಿಂತನೆ ಇದೆ. ಮಾತ್ರವಲ್ಲದೆ ಬೆಳ್ತಂಗಡಿ ತಾ|ನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶವಿದೆ.
– ಹರೀಶ್ ಪೂಂಜ, ಶಾಸಕರು