Advertisement

ಹಾಳು ಬಿದ್ದ ಕಟ್ಟಡ ತೆರವಿಗೆ ಶಾಸಕರ ಸೂಚನೆ

12:35 PM Jul 03, 2019 | Suhan S |

ತೇರದಾಳ: ನಗರದ ಅಂಚೆ ಕಚೇರಿ ಎದುರಿಗಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾಳು ಬಿದ್ದಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡ ತೆರವುಗೊಳಿಸಿ, ಶಾಲೆಯ ಮಕ್ಕಳಿಗೆ ಆಟದ ಮೈದಾನ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಹಾಳು ಬಿದ್ದಿರುವ ಕಟ್ಟಡ ಪರಿಶೀಲಿಸಿದ ಅವರು, ನಗರದಲ್ಲಿ ಹಾಳು ಬಿದ್ದಿರುವ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿ, ಸಂಬಂಧಿಸಿದ ಇಲಾಖೆ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.

ಪಾಳು ಬಿದ್ದಿರುವ ಕಟ್ಟಡದಲ್ಲಿ ಮೊದಲು ಆರೋಗ್ಯ ಕೇಂದ್ರವಿತ್ತು. ಬಿಎಸ್‌ಎನ್‌ಎಲ್ ಕಚೇರಿ, ಬಳಿಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗ್ರಂಥಾಲಯಕ್ಕಾಗಿ ಬಳಸಲಾಗುತ್ತಿತ್ತು. ಕಟ್ಟಡದ ಒಂದು ಕಡೆಯಲ್ಲಿ ಅಂಗನವಾಡಿ ಕೇಂದ್ರಕ್ಕಾಗಿ ಕೂಡ ಬಳಸಲಾಗುತ್ತಿತ್ತು. ಆದರೆ ಕೊಠಡಿಗಳ ಬಾಗಿಲು ಮುರಿದಿದ್ದರಿಂದ ಕಳ್ಳತನ ಕೂಡ ಆಗಿತ್ತು. ನಂತರ ಅಂಗನವಾಡಿ ಕೇಂದ್ರವನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದರು. ಗಂಗಾಧರ ದೇವರು, ಮುಖಂಡರಾದ ಮಹಾವೀರ ಕೊಟಕನೂರ, ಶಂಕರ ಕುಂಬಾರ, ಅಲ್ಲಪ್ಪ ಬಾಬಗೊಂಡ, ಕೇದಾರಿ ಪಾಟೀಲ, ಸುರೇಶ ಪರೀಟ, ಧಶರಥ ಅಕ್ಕೆನ್ನವರ, ಸಂತೋಷ ಜಮಖಂಡಿ, ಕುಮಾರ ಸರಿಕರ, ಸದಾಶಿವ ಹೊಸಮನಿ, ಸಚಿನ ಕೊಡತೆ, ಕಾಶಿನಾಥ ರಾಠೊಡ, ಸಂಗಮೇಶ ಕಾಲತಿಪ್ಪಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next