ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ 23 ನೇ ವಾರ್ಡ್ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯ ಜನರು ಮತ ದಾನ ಬಹಿಷ್ಕಾರದ ನಿರ್ಧಾರ ಕೈಬಿಡುವಂತೆ ಮನವೊಲಿಸುವಲ್ಲಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಯಶಸ್ವಿಯಾದರು.
ಸ್ಥಳೀಯರ ದೂರು:ವಾರ್ಡ್‌ನ ಸಮುದಾಯ ಭವನದಲ್ಲಿ ಸಮಾವೇಶಗೊಂಡಿದ್ದ ವಾರ್ಡ್ ನಾಗರಿಕ ರೊಂದಿಗೆ ನಾವು ಪಟ್ಟಣದಲ್ಲಿ ವಾಸವಿದ್ದರೂ ಪುರಸಭೆ ಹೊರತು ಉಳಿದೆಲ್ಲಾ ಚುನಾವ ಣೆಗಳಲ್ಲಿ ವೀರನಪುರ ಗ್ರಾಮಕ್ಕೆ ತೆರಳಿ ನಮ್ಮ ಹಕ್ಕು ಚಲಾಯಿಸಬೇಕು. ಈಗ ಪುರಸಭೆ ಚುನಾ ವಣೆ ಬಂದಿದ್ದು, ವಾರ್ಡ್‌ನ 115 ಮಂದಿ ಹೆಸ ರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಕಾರಣ ನಾವು ಹಕ್ಕಿನಿಂದ ವಂಚಿತರಾಗಿದ್ದೇವೆ. ಹೀಗಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅವಕಾಶ ಮಾಡಿಸಿಕೊಡಿ, ಇಲ್ಲವಾದರೆ ನಾವುಗಳು ಹಕ್ಕು ಚಲಾಯಿಸುವುದಿಲ್ಲ ಎಂದು ವಾದಿಸಿದರು.
ಮನವೊಲಿಕೆ:ಚುನಾವಣೆ ಹೊಸ್ತಿಲಲ್ಲಿ ಕೈ ಬಿಟ್ಟಿರುವ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಅವಕಾಶವಿಲ್ಲ. ಹೀಗಾಗಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲೂ ಪಟ್ಟಣದಲ್ಲೇ ಹಕ್ಕು ಚಲಾಯಿಸುವ ಅವಕಾಶ ಮಾಡಿಸುವ ಬಗ್ಗೆ ಶಾಸಕರು ಭರವಸೆ ನೀಡಿದ ನಂತರ ವಾರ್ಡ್ ನ ನಾಗರಿಕರು ಬಹಿಷ್ಕಾರದ ನಿರ್ಧಾರ ಕೈ ಬಿಡುವುದಾಗಿ ತಿಳಿಸಿದರು.
ಬೆಂಬಲಿಸಿ:ವೀಣಾಮಂಜುನಾಥ್ ವಾರ್ಡ್ ನಿಂದ ಸ್ಪರ್ಧಿಸಿದ್ದು, ಅವರ ಸೇವೆಗೆ ಅವಕಾಶ ಮಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಯಂತೆ ಪುರಸಭೆ ಚುನಾವಣೆಗೂ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಆರ್.ರಮೇಶ್‌ನಾಯಕ, ನಾಯಕ ಸಮುದಾಯದ ಮುಖಂಡರಾದ, ಬಂಗಾರನಾಯಕ, ಜಯರಾಜು, ಗೋಪಾಲ್, ವಾರ್ಡ್‌ನ ಮುಖಂಡರಾದ ಚಿಕ್ಕಣ್ಣ, ನಾಗೇಶ್, ಚಿನ್ನಯ್ಯ, ಶಿವಲಿಂಗ, ಮಾದೇಶ, ಪ್ರಸಾದ್, ರಾಜು ಮತ್ತಿತರರು ಉಪಸ್ಥಿತರಿದ್ದರು.