Advertisement

ಶಾಸಕ ಗಣೇಶ್ ಕ್ಷೇತ್ರದಲ್ಲಿ ಮನೆ ಮಾಡಿರುವುದು ಭೂಮಿ ಪೂಜೆ ಟೋಕನ್ ಕಮಿಷನ್ ಗೆ: ಆಕ್ರೋಶ

05:39 PM Dec 24, 2021 | Team Udayavani |

ಕುರುಗೋಡು: ಕ್ಷೇತ್ರದ ಹಾಲಿ ಶಾಸಕರು ಪುರಸಭೆ ಚುನಾವಣೆಗೆ ಟಿಕೇಟ್ ಕೊಡುವುದಾಗಿ ನಂಬಿಸಿ ದಲಿತ ಸಮುದಾಯದ ಜನರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡು ಟಿಕೇಟ್ ಕೊಡದೆ ನಿಷ್ಠಾವಂತ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದು ಕಂಪ್ಲಿ ಪುರಸಭೆ ಸದಸ್ಯ ಹಾಗೂ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ. ಆರ್. ಹನುಮಂತ ವ್ಯಂಗ್ಯವಾಡಿದರು.

Advertisement

ಕುರುಗೋಡು ಪಟ್ಟಣದಲ್ಲಿ 15ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ವಿಧಾನಪರಿಷತ್ ಸದಸ್ಯ ವೈ. ಎಂ. ಶತೀಶ್ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಮತ ಯಾಚಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಛಲವಾದಿ ಸಮುದಾಯದಲ್ಲಿ ಅನೇಕ ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಅದರಲ್ಲಿ ಪುರಸಭೆ ಚುನಾವಣೆ ಗೆ ಟಿಕೆಟ್ ನೀಡುವುದಾಗಿ ನಂಬಿಸಿ ಕೊನೆಯಲ್ಲಿ ಟಿಕೆಟ್ ಕೊಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಶಾಸಕರು ಕುರುಗೋಡಲ್ಲಿ ಮನೆ ಮಾಡಿರುವುದು ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ 16000 ಟೋಕನ್ ಮತ್ತು ಗುತ್ತಿಗೆದಾರರ 3 ರಿಂದ 5 ರಷ್ಟು ಕಮಿಷನ್ ಪಡೆದುಕೊಳ್ಳುವುದಕ್ಕಾಗಿ ಎಂದರು.

ತಾಪಂ, ಜಿಪಂ ಇತರೆ ಅನುದಾನಗಳನ್ನು ಯಾರಾದರು ಭೂಮಿ ಪೂಜೆ ಮಾಡಲು ಮುಂದಾಗುತ್ತಾರೆ ಎಂಬ ಭಯದಿಂದ ಎರಡು ಕ್ಷೇತ್ರದಲ್ಲಿ ಮನೆ ಮಾಡಿದ್ದಾರೆ ಎಂದರು.

ಹಾಲಿ ಶಾಸಕ ಗಣೇಶ್ ಅವರು 3 ವರ್ಷ ಪೂರೈಸಿದರು ಕ್ಷೇತ್ರಕ್ಕೆ ಅವರು ತಂದ ಹೊಸ ಕಾಮಗಾರಿಗಳು ಏನಾದರು ಇದ್ದರೆ ತೋರಿಸಲಿ ಸುರೇಶ್ ಬಾಬು ಅವರು ಅಧಿಕಾರದಲ್ಲಿ ಇದ್ದಾಗ ಮಂಜೂರು ಮಾಡಿಸಿದ ಅನುದಾನವನ್ನು ಈಗಲೂ ನಾನು ತಂದ ಅನುದಾನ ಎಂದು ಕೊಂಡು ಪೂಜೆ ಮಾಡುತ್ತಿದ್ದಾರೆ ಎಂದರು.

Advertisement

ಸುರೇಶ್ ಬಾಬು ಅವರು ಶಾಸಕರಾಗಿದ್ದಾಗ ಕಂಪ್ಲಿ, ಕುರುಗೋಡು ಎರಡು ಕ್ಷೇತ್ರವನ್ನು ತಾಲೂಕಾಗಿ ಮಾಡಿ ಪುರಸಭೆ ಮೇಲ್ದರ್ಜೆಗೆ ಕೂಡ ಮಾಡಿದ್ದಾರೆ. ಆದರೆ ಕ್ಷೇತ್ರಕ್ಕೆ ಗಣೇಶ್ ಕೊಡುಗೆ ಏನಿದೆ ಹೇಳಿ ಎಂದು ಪ್ರೆಶ್ನೆ ಹಾಕಿದರು.

ಕಂಪ್ಲಿ ಪುರಸಭೆಯನ್ನು ಸುರೇಶ್ ಬಾಬು ಅವರು ಬಿಜೆಪಿ ವಶ ಮಾಡಿಕೊಂಡಿದ್ದಾರೆ. ಆದರೆ ಹಾಲಿ ಶಾಸಕ ಗಣೇಶ್ ಕ್ಷೇತ್ರದಲ್ಲಿ ಇದ್ದು ತೆಕ್ಕೆಗೆ ಪಡೆದುಕೊಳ್ಳಲು ಆಗಿಲ್ಲ ಈ ಬಾರಿ ಕೂಡ ಕುರುಗೋಡು ಪುರಸಭೆ ಬಿಜೆಪಿ ವಶ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next