Advertisement

ಬಡ-ದುರ್ಬಲರಿಗೆ ಶಾಸಕ ಉದಾಸಿ ನೆರವು

02:49 PM Apr 24, 2020 | Suhan S |

ಹಾನಗಲ್ಲ: ಪಟ್ಟಣದ ಶ್ರೀ ಕುಮಾರೇಶ್ವರ ಸಿದ್ಧ ಉಡುಪು ತಯಾರಿಕಾ ಘಟಕದಲ್ಲಿ 35 ಸಾವಿರ ಮಾಸ್ಕ್ಗಳನ್ನು ಸಿದ್ಧಪಡಿಸಿ ವಿತರಿಸಿದ ಶಾಸಕ ಸಿ.ಎಂ.ಉದಾಸಿ ತಾಲೂಕಿನ ಬಡ-ದುರ್ಬಲರಿಗೆ ಔಷಧಿ, ಮಾತ್ರೆಗಳ ವ್ಯವಸ್ಥೆ ಮಾಡಿದ್ದಾರೆ.

Advertisement

ನಿರಾಶ್ರಿತರಿಗೆ ಆಹಾರ ವಸ್ತುಗಳ ಕಿಟ್‌ಗಳನ್ನು ಸಿದ್ಧಪಡಿಸಿ ಕಾಲಕಾಲಕ್ಕೆ ವಿತರಿಸುತ್ತಿರುವ ಶಾಸಕ ಸಿ.ಎಂ. ಉದಾಸಿಯವರು ಪ್ರತಿ ಬಡಾವಣೆಗಳಲ್ಲಿ ಹಾಲು ವಿತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಪಡಿತರ ಚೀಟಿ ಇಲ್ಲದ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ತಾಲೂಕಿನಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ.

ಕೋವಿಡ್ 19 ನಿಯಂತ್ರಣಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು, ಪುರಸಭೆ, ಪೊಲೀಸ್‌, ಆಶಾ ಕಾರ್ಯಕರ್ತೆಯರು ಅಲ್ಲದೆ ಮಾಧ್ಯಮದವರನ್ನು ಗೌರವಿಸಿದ್ದನ್ನು ಇಲ್ಲಿ ನೆನಪಿಸಬೇಕು. ಸಿ.ಎಂ.ಉದಾಸಿ ಅಭಿಮಾನಿ ಬಳಗ ತಾಲೂಕಿನಲ್ಲಿ ಬಡ ಜನರಿಗೆ ಆಹಾರ ಸಾಮಗ್ರಿ, ಮಾಸ್ಕ್, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯ ದಿನೋಪಯೋಗಿ ವಸ್ತುಗಳನ್ನು ನೀಡಿರುವುದಲ್ಲದೆ, 50 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ನೀಡಿದ್ದಾರೆ. ಗುಳೆ ಬಂದವರಿಗೆ ಸುರಕ್ಷಿತ ವಸತಿ, ದಿನಸಿ ಹಾಗೂ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹ ಸಂಗತಿ.

ಹಾನಗಲ್ಲ ಪುರಸಭೆ ಪ್ರತಿನಿತ್ಯ ಪೌರ ಕಾರ್ಮಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದಲ್ಲದೆ ಸಾಂಕ್ರಾಮಿಕ ರೋಗ ತಡೆಯಲು ಎಲ್ಲ ರೀತಿ ಕ್ರಮಗಳನ್ನು ಕೈಗೊಂಡಿದ್ದಾರೆ. ತಾಲೂಕಿನ ಎಲ್ಲ ಕಡೆ ಕೋವಿಡ್ 19 ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಹೊರ ದೇಶ-ಬೇರೆ ರಾಜ್ಯ-ಜಿಲ್ಲೆಗಳಿಂದ ಬರುವವರನ್ನು ಕೂಡಲೇ ತಪಾಸಣೆಗೊಳಪಡಿಸಿ ರೋಗ ಹರಡದಂತೆ ಕ್ರಮ ಜರುಗಿಸಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಕೆಲವರನ್ನು ಕೋವಿಡ್ 19  ಶಂಕಿತರೆಂದು ಪರೀಕ್ಷೆಗೊಳಪಡಿಸಲಾಗಿದ್ದು, ಅವರು ಕೊರೊನಾ ಸೋಂಕಿತರಲ್ಲ ಎಂದು ದೃಢಪಟ್ಟಿರುವುದು ಸಮಾಧಾನದ ಸಂಗತಿ.

ಈ ಎಲ್ಲದರ ನಡುವೆ ಯೋಜನೆಗಳು ಸರಾಗವಾಗಿ ನಡೆಯಲು ಅವಕಾಶ ಮಾಡಲಾಗಿದೆ. ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರದಂತೆ ಕ್ರಮ ಜರುಗಿಸಲಾಗಿದೆ. ರೋಗ ಹರಡದಂತೆ ನಿಗಾ ವಹಿಸಿ ತಾಲೂಕಿನ ಎಲ್ಲ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಸಿ.ಎಂ.ಉದಾಸಿ ಜನರ ಆರೋಗ್ಯ ಕಾಪಾಡಲು ಕಾಳಜಿ ವಹಿಸಿದ್ದಾರೆ. ಇದೆಲ್ಲದರ ನಡುವೆ ಕೃಷಿ-ತೋಟಗಾರಿಕಾ ಚಟುವಟಿಕೆಗಳಿಗೆ ಅನಾನುಕೂಲವಾಗದಂತೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಹಕಾರಿಯಾಗುವಂತೆ ಅನುಮತಿ ಪತ್ರಗಳನ್ನು ನೀಡಿ ರೈತರಿಗೆ ಅನಾನುಕೂಲವಾಗದಂತೆ ಕ್ರಮ ಜರುಗಿಸಿದ್ದಾರೆ.

Advertisement

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಅಗತ್ಯ ಕೃಷಿ ಸಾಮಗ್ರಿಗಳ ಖರೀದಿ ಗೆ ಅನುವು ಮಾಡಿಕೊಟ್ಟಿದ್ದಾರೆ. ತಮ್ಮ ಇಡೀ ರಾಜಕೀಯ ಜೀವನವನ್ನು ಸದಾ ಜನರ ನಡುವೆಯೇ ಬಿಡುವಿಲ್ಲದೆ ನಿರ್ವಹಿಸಿರುವ ಶಾಸಕ ಸಿ.ಎಂ.ಉದಾಸಿ, ಅಧಿ ಕಾರಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರಿಯಾಗಿ ಬಳಸಿಕೊಂಡ ಅವರ ಬುದ್ಧಿವಂತ ನಡೆ ಮೆಚ್ಚುವಂತಹದ್ದು.

Advertisement

Udayavani is now on Telegram. Click here to join our channel and stay updated with the latest news.

Next