Advertisement

ಅಧಿವೇಶನ ಶಾಸ್ತ್ರ ಸಮಾಪ್ತಿ, ಚರ್ಚೆಗೆ ಬರ!

06:00 AM Dec 22, 2018 | Team Udayavani |

ಬೆಳಗಾವಿ: ಹತ್ತು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಕಲಾಪ ನಡೆದಿದ್ದೇ ಏಳು ದಿನ. ಅಷ್ಟೂ ದಿನ “ಬರ’ದ್ದೇ ಚರ್ಚೆ.
ಸರ್ಕಾರದ ಉತ್ತರವೂ ಪರಿಪೂರ್ಣವಾಗಲಿಲ್ಲ. ಪ್ರತಿಪಕ್ಷದ ಧರಣಿಯೂ ನಿಲ್ಲಲಿಲ್ಲ. ಸುಮಾರು 15 ಕೋಟಿ ರೂ.ವರೆಗೆ ವೆಚ್ಚ ಮಾಡಿ ಸುವರ್ಣಸೌಧದಲ್ಲಿ ನಡೆಸಿದ ಅಧಿವೇಶನದ ಒಟ್ಟಾರೆ ಫಲಶೃತಿ ಇದು. ಉತ್ತರ ಕರ್ನಾಟಕದಲ್ಲಿ ಕಲಾಪ ಶಾಸ್ತ್ರ ಮುಗಿಸಿದ ತೃಪ್ತಿ ಸರ್ಕಾರಕ್ಕೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾಗಾಗಿ ಹೋರಾಟ ಮಾಡಿದ ಹೆಮ್ಮೆ ಬಿಜೆಪಿಗೆ. ಒಟ್ಟಾರೆ, ಆಡಳಿತ-ಪ್ರತಿಪಕ್ಷದ ಪ್ರತಿಷ್ಠೆಗೆ ಈ ಬಾರಿಯ ಕಲಾಪವೂ ಬಂದ್ರು, ಹೋದ್ರು ಎಂಬಂತೆ ಬರ್ಖಾಸ್ತುಗೊಂಡಿತು.

Advertisement

ಪ್ರತಿಪಕ್ಷ ನಾಯಕರಿಗೆ ಅಪಮಾನ ಮಾಡಿದ್ದೀರಿ, ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ, ಕ್ಷಮೆ ಕೇಳುವ ತಪ್ಪು ಮಾಡಿಲ್ಲ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಹಗ್ಗಜಗ್ಗಾಟ ಹಾಗೂ ಪ್ರತಿಷ್ಠೆಗೆ ವಿಧಾಸಭೆಯಲ್ಲಿ ಎರಡೂವರೆ ದಿನದ ಕಲಾಪ ವ್ಯರ್ಥವಾಯಿತು. ಉತ್ತರ ಕರ್ನಾಟಕದ ಸಮಸ್ಯೆ- ಆಭಿವೃದ್ದಿ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂಬ ಒತ್ತಾಯದ ಪರ-ವಿರೋಧದ ಗದ್ದಲ ಪರಿಷತ್‌ನ ಎರಡು ದಿನಗಳ ಕಲಾಪ ನುಂಗಿಹಾಕಿತು. ಹೀಗಾಗಿ, ಉತ್ತರ ಕರ್ನಾಟಕದ ಸಮಸ್ಯೆ-ಅಭಿವೃದಿಟಛಿ ಚರ್ಚೆ ಮರೀಚಿಕೆಯಾಗಿ ಕೃಷ್ಣಾ , ಮಹದಾಯಿ, ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದ ಸ್ಥಿತಿಗತಿ, ಹೈದರಾಬಾದ್‌ ಕರ್ನಾಟಕ ಅಭಿವೃದ್ದಿ ಮೌಲ್ಯ ಮಾಪನ ಇವೆಲ್ಲದರ ಕುರಿತು ಚರ್ಚೆಯೇ ಆಗಲಿಲ್ಲ. ಕೊನೆಯ ದಿನ ಹತ್ತು ನಿಮಿಷಗಳಲ್ಲಿ ಮೂರು ವಿಧೇಯಕ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆದು ಸದನ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು ಸರ್ಕಾರಕ್ಕೆ ಅಧಿವೇಶನ ಮುಗಿಸಲು ಇದ್ದ ಆತುರ-  ಕಾತುರಕ್ಕೆ ಸಾಕ್ಷಿ. ಹೀಗಾಗಿಯೇ ಉತ್ತರ ಕರ್ನಾಟಕ ಭಾಗದ ಅದರಲ್ಲೂ ಬೆಳಗಾವಿಯ ಜನರಿಗೆ ರಾಜ್ಯ ವಿಧಾನಮಂಡಲ ಅಧಿವೇಶನದ ಬಗ್ಗೆ ಆಸಕ್ತಿಯೇ ಕಂಡುಬರಲಿಲ್ಲ. ಎಂಟು ವರ್ಷಗಳ ಹಿಂದೆ ಈ ಭಾಗದಲ್ಲಿ ಅಧಿವೇಶನ ನಡೆಸುವ ತೀರ್ಮಾನ ವಾದಾಗ, ಅದಕ್ಕಾಗಿಯೇ ನೂರಾರು ಕೋಟಿ ರೂ. ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣವಾದಾಗ ಇಲ್ಲಿನ ಜನರೂ ಸಾಕಷ್ಟು ನಿರೀಕ್ಷೆ
ಇಟ್ಟುಕೊಂಡಿದ್ದರು. ನಮ್ಮ ಭಾಗಕ್ಕೆ ಸರ್ಕಾರವೇ ಪ್ರತಿಪವರ್ಷ ಬರುತ್ತದೆ. ನಮ್ಮ ಭಾಗದ ಅಭಿವೃದಿಟಛಿಯ ಚರ್ಚೆಗೆ ಹತ್ತು ದಿನ ಕಲಾಪ ನಡೆಯುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಆದರೆ, ಪ್ರತಿವರ್ಷದಂತೆ ಈ ಬಾರಿಯೂ ಹತ್ತು ದಿನ ಜಾತ್ರೆಗೆ ಸೀಮಿತವಾದಂತಾಯಿತು.

ತುಸು ಸಂತಸ: ಅಧಿವೇಶನದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ದಿ ಆಯುಕ್ತರ ಕೇಂದ್ರ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಪ್ರತ್ಯೇಕ ಮಂಡಳಿ ಸೇರಿ ಏಳು ಇಲಾಖೆಗಳ ಒಂಬತ್ತು ಕಚೇರಿಗಳ ಸ್ಥಳಾಂತರ ತೀರ್ಮಾನ ಈ ಭಾಗದ ಜನರಿಗೆ ಸ್ವಲ್ಪ ಮಟ್ಟಿಗೆ ಸಂತಸ ತರುವ ವಿಚಾರ. ಆದರೆ, ಅವೆಲ್ಲವೂ ಸುವರ್ಣಸೌಧದಲ್ಲಿಯೇ ಕಾರ್ಯನಿರ್ವ ಹಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಚರ್ಚೆಯೇ ಆಗಲಿಲ್ಲ
ಸಾಲ ನೀಡಿರುವ ಖಾಸಗಿ ಲೇವಾದೇವಿದಾರರಿಂದ ರೈತರಿಗೆ ವಿಮುಕ್ತಿ ಕೊಡಿಸುವ ಕರ್ನಾಟಕ ಋಣ ಪರಿಹಾರ ವಿಧೇಯಕ,
(ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿಗೆ ಕಳುಹಿಸಿರುವುದು) ಹಾಗೂ ರೈತರು ಕೃಷಿಗಾಗಿ ಪಡೆದುಕೊಂಡಿರುವ ಸಾಲದ ಮೊತ್ತಕ್ಕಿಂತ (ಅಸಲು) ಬಡ್ಡಿ ಹೆಚ್ಚು ವಿಧಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಅವರು ವಿಧಾನ ಪರಿಷತ್‌ನಲ್ಲಿ ಮಂಡಿಸಿರುವ ಕರ್ನಾಟಕ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವ ನಿಷೇಧ ವಿಧೇಯಕಗಳ( ಖಾಸಗಿ) ಬಗ್ಗೆ ಚರ್ಚೆಯೇ ಆಗಲಿಲ್ಲ.

15ರಿಂದ 18 ಕೋಟಿ ರೂ. ವೆಚ್ಚ?
ಕಳೆದ ಬಾರಿ ಅಧಿವೇಶನಕ್ಕೆ 22 ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ ಅದನ್ನು 15 ಕೋಟಿ ರೂ.ಗೆ ಇಳಿಸುವ ಪ್ರಯತ್ನ ನಡೆದಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ. ಆದರೆ, ದರ ಹೆಚ್ಚಳ ಮತ್ತಿತರ ಕಾರಣಗಳಿಂದ 15 ರಿಂದ 18 ಕೋಟಿ ರೂ. ಈ ಅಧಿವೇಶನಕ್ಕೂ ವೆಚ್ಚವಾಗಬಹುದು. ವಸತಿ, ಸಾರಿಗೆ, ಊಟೋಪಚಾರದ ಲೆಕ್ಕ ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದು ತಿಳಿಸುತ್ತಾರೆ. ಅಧಿವೇಶನಕ್ಕೆ ಹಾಜರಾಗುವ ಪ್ರತಿ ಸದಸ್ಯರಿಗೆ 2 ಸಾವಿರ ರೂ. ಭತ್ಯೆ, ಅಧಿಕಾರಿ, ಸಿಬ್ಬಂದಿ ಭತ್ಯೆ ಸೇರಿ ಒಂದು ದಿನಕ್ಕೆ ಕನಿಷ್ಠ 1.50 ಕೋಟಿ ರೂ. ಅಧಿವೇಶನಕ್ಕೆ ವೆಚ್ಚ ದ ಅಂದಾಜು ಮಾಡಲಾಗಿದೆ.  

Advertisement

ಎಸ್.  ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next