Advertisement

ಪ್ರಧಾನಿ ಬಗ್ಗೆ ಶಾಸಕರ ಟೀಕೆ: ಆಕ್ರೋಶ

10:07 PM Sep 14, 2019 | Team Udayavani |

ಅರಸೀಕೆರೆ: ತಾವೊಬ್ಬ ಶಾಸಕಾಂಗದ ಜನಪ್ರತಿನಿಧಿ ಎಂಬುದನ್ನ ಮರೆತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕುಚೋದ್ಯ ಹೇಳಿಕೆ ನೀಡುತ್ತಿರುವ ಕೆ.ಎಂ.ಶಿವಲಿಂಗೇಗೌಡರು ಇನ್ನೂ ಮುಂದಾದರೂ ಎಚ್ಚೆತ್ತುಕೊಳ್ಳದಿದ್ದರೆ ತಾಲೂಕು ಬಿಜೆಪಿ ಪಕ್ಷದವತಿಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಜಿ.ವಿ.ಟಿ.ಬಸವರಾಜು ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಗುತ್ತಿಗೆದಾರರಾಗಿದ್ದ ಶಾಸಕರು ಬೇನಾಮಿ ಹೆಸರಿನಲ್ಲಿ ಕಾಮಗಾರಿಗಳನ್ನು ಹಾಗೂ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಅವರು ವಾಸಿಸುತ್ತಿರುವ ಮನೆ ಜಾಗವು ಸಾರ್ವಜನಿಕ ಮೀಸಲು ಸ್ಥಳವೆಂದು ದೂರು ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಆಪಾದಿಸಿದರು.

ಮೋದಿಗೆ ಜನಾದೇಶವಿದೆ: ದೇಶದ ಜನತೆಯ ಸ್ಪಷ್ಟ ಆದೇಶದಂತೆ ಸತತ ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರ ಜನಪರ ಆಡಳಿತ ಮತ್ತು ನಾಯಕತ್ವದ ಗುಣವನ್ನು ದೇಶವಾಸಿಗಳಷ್ಟೇ ಅಲ್ಲದೇ ಅನೇಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನ ಮೋದಿಯವರಿಗೆ ನೀಡಿ ಗೌರವಿಸಿದ್ದಾರೆ.

ಅಭಿವೃದ್ಧಿಗೆ ಬಿಜೆಪಿ ಚಿಂತನೆ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಾಲೂಕು ಬಿಜೆಪಿ ಘಟಕ ತನ್ನದೇ ಆದ ರೀತಿ ಚಿಂತನೆ ನಡೆಸಿದೆ. ಇದಕ್ಕೆ ಸಂಬಂದಿಸಿದಂತೆ ಹಾಗೂ ಈ ಹಿಂದೆ ಕ್ಷೇತ್ರದಲ್ಲಿ ಅಭಿವೃದ್ಧಿಕಾಮಗಾರಿ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ಸಂಭಂದ ಪಟ್ಟ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಜಿ.ಎನ್‌.ಮನೋಜ್‌ಕುಮಾರ್‌ ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಕಾರ್ಯದರ್ಶಿಗಳಾದ ಶ್ರೀನಿವಾಸ್‌,ಯೋಗೀಶ್‌, ನಗರ ಘಟಕದ ಕಾರ್ಯದರ್ಶಿಗಳಾದ ಕೆ.ಆರ್‌.ಮುರಳೀಧರ್‌, ರವಿಕುಮಾರ್‌, ಮುಖಂಡರಾದ ಶಿವರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಶಾಸಕ ಸ್ಥಾನಕ್ಕೆ ಅಗೌರವ: ಈ ಹಿಂದೆ ಮೋದಿ ವಿರುದ್ದ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಶಿವಲಿಂಗೇಗೌಡರು ಇನ್ನೂ ತಮ್ಮ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮೋದಿ ವಿರುದ್ಧ ಸಲ್ಲದ ಹೇಳಿಕೆಗಳನ್ನು ನೀಡುವ ಮನಸ್ಥಿತಿಯಿಂದಾಗಿ ಶಾಸಕ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ ಎಂದು ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

ತೆಂಗು ಬೆಳೆಗಾರರಿಗೆ ಸರ್ಕಾರ ನೀಡಿರುವ ಪರಿಹಾರದ ಅನುದಾನ ನೀಡುವಲ್ಲೂ ಶಾಸಕರು ತಾರತಮ್ಯನೀತಿ ಅನುಸರಿಸಿದ್ದಾರೆ. ಜೆಡಿಎಸ್‌ ಕಾರ್ಯಕರ್ತರಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದೆ.ಇನ್ನಿತರ ರೈತರಿಗೆ ಸಲ್ಪಸ್ವಲ್ಪ ನೀಡಿದ್ದಾರೆ. ನೂರಾರು ರೈತರು ತೋಟಗಾರಿಕೆ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದಾರೆ.
-ಜಿ.ವಿ.ಟಿ.ಬಸವರಾಜು, ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next