Advertisement

ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್

02:27 PM Jun 05, 2021 | Team Udayavani |

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೈಕಮಾಂಡ್ ಭೇಟಿಗೆ ಇಡಿ ತನಿಖೆ ಕಾರಣ. ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಇಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ.

Advertisement

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಕೋವಿಡ್ ನಿರ್ವಹಣೆ ಬಗ್ಗೆ ಹೈಕಮಾಂಡ್ ಶಹಬ್ಬಾಶ್ ಪಡೆಯಲು ದೆಹಲಿಗೆ ಹೋಗಿಲ್ಲ. ಬದಲಾಗಿ ಮಾರಿಷಸ್ ನಲ್ಲಿರುವ ಸಾವಿರಾರು ಕೋಟಿ ರೂ. ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಇಡಿ ತ‌ನಿಖೆ ನಡೆಸುತ್ತಿದೆ. ಮೂರು ದಿನಗಳಿಂದ ಇಡಿ ತನಿಖೆ ನಡೆಸುತ್ತಿದೆ‌. ಪಿಐ ಮೋಟರ್ಸ್ ಎನ್ನುವ ಕಂಪನಿಗೆ ಹಣ ಹೇಗೆ ವರ್ಗಾವಣೆ ಆಯಿತು ಎಂದು ತನಿಖೆ ನಡೆಯುತ್ತಿದೆ. ಈ ಕಾರಣಕ್ಕಾಗಿ ವಿಜಯೆಂದ್ರ ದೆಹಲಿಗೆ ಹೋಗಿದ್ದರು. ಆದರೆ ಮಾಧ್ಯಮಗಳು ಇಂಥ ಸತ್ಯದ ವರದಿಗಳ‌ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಕುಟುಕಿದರು.

ದೆಹಲಿಯಲ್ಲಿ ಜೆಪಿ ನಡ್ಡಾ ಜೊತೆ ವಿಜಯೇಂದ್ರ ಹತ್ತು ನಿಮಿಷ ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ನನಗೆ ಮಾಹಿತಿ ಬಂದಿದೆ ಎಂದರು.

ಇದನ್ನೂ ಓದಿ:ಐಎಎಸ್ ಅನ್ನು ಇವತ್ತು ಧನ ಕಾಯುವವನು ಮಾಡುತ್ತಾನೆ : ರೋಹಿಣಿ ವಿರುದ್ಧ ಎ ಮಂಜು ಕಿಡಿ

ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಯಾಕೆ ಕರೆಯುತ್ತಿಲ್ಲ. ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಮುಖ್ಯಮಂತ್ರಿಗಳಿಗೆ ಯಾಕೆ ಹೆದರಿಕೆ ಎಂದು ಪ್ರಶ್ನಿಸಿದ‌ ಯತ್ನಾಳ್, ಯಡಿಯೂರಪ್ಪ ತಾವು ಇರಿಸಿಕೊಂಡಿರುವ ಮೂವರು ಹೊಗಳು ಬಟ್ಟರಿಂದ ಭವಿಷ್ಯದಲ್ಲಿ ಭಾರಿ ದೊಡ್ಡ ಅಪಾಯವಿದೆ. ಅವಮಾನಕರ ರೀತಿಯಲ್ಲಿ ರಾಜಕೀಯ ನಿವೃತ್ತಿ ಆಗುವ ಸ್ಥಿತಿ ಎದುರಾಗಲಿದೆ‌ ಎಂದು ಎಚ್ವರಿಸಿದರು.

Advertisement

ಮುಂದೆ ನಡೆಯುವ ಅನಾಹುತಗಳಿಗೆ ಕಾರಣವಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next