Advertisement

ಪ್ರವಾಹ ಪೀಡಿತ ಗ್ರಾಮಗಳಿಗೆ ಶಾಸಕ ಕಂದಕೂರ ಭೇಟಿ

07:32 PM Oct 23, 2020 | Suhan S |

ಯಾದಗಿರಿ: ಗುರುಮಠಕಲ್‌ ಮತಕ್ಷೇತ್ರದಲ್ಲಿ ಹಿಂದೆಂದು ಕಂಡರಿಯದ ಮಳೆಯಾಗಿ ಲೆಕ್ಕಕ್ಕೆ ಸಿಗದ ಹಾನಿಯಾಗಿದ್ದು, ಸರ್ಕಾರ ಪರಿಹಾರ ಒದಗಿಸುವ ಕಾರ್ಯ ಶೀಘ್ರ ಆರಂಭಿಸಬೇಕೆಂದು ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಆಗ್ರಹಿಸಿದರು.

Advertisement

ಮತಕ್ಷೇತ್ರದ ಲಿಂಗೇರಿ, ಕೌಳೂರು ಹಾಗೂ ಮಲ್ಹಾರ್‌ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದಾಗಿರುವ ಹಾನಿ ಪರಿಶೀಲಿಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ, ಕೊಚ್ಚಿಕೊಂಡು ಹೋದ ರಸ್ತೆಗಳು ಹಾಗೂ ಸೇತುವೆಗಳು ಖುದ್ದಾಗಿ ವೀಕ್ಷಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಇದೇ ವೇಳೆ ಸಮಸ್ಯೆಗೊಳಗಾದ ಸಂತ್ರಸ್ತರ ಸಮಸ್ಯೆ ಆಲಿಸಿದರು. ಕ್ಷೇತ್ರದಲ್ಲಿ ಅಪರ ಪ್ರಮಾಣದ ಬೆಳೆ ಹಾನಿಯಾಗಿದ್ದಲ್ಲದೇ ಮನೆಯಲ್ಲಿದ್ದ ದವಸ-ಧಾನ್ಯಗಳೆಲ್ಲ ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದ್ದು, ಪರಿಸ್ಥಿತಿ ಅವಲೋಕಿಸಿರುವ ಮುಖ್ಯಮಂತ್ರಿಗಳು ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಮನೆ ಕುಸಿತ; ಪರಿಹಾರಕ್ಕೆ ಆಗ್ರಹ :

ಯಾದಗಿರಿ: ನಗರದ ಮುಸ್ಲಿಂಪುರ ಏರಿಯಾದಲ್ಲಿ ಭಾರೀ ಮಳೆಯಿಂದ ಮನೆ ಕುಸಿದು ಗಾಯಗೊಂಡ ಖಮರುನ್‌ ಬೇಗಂ ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ.

Advertisement

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಜಿಲ್ಲಾಧ್ಯಕ್ಷ ಮಹಮ್ಮದ್‌ ತಜಮುಲ್‌, ನಗರಸಭೆ ವ್ಯಾಪ್ತಿಯ ಮುಸ್ಲಿಂಪುರದಲ್ಲಿ ಮಳೆಯಿಂದಾಗಿ ವೃದ್ಧೆಯ ಮನೆ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರದ ನಿಯಮದಂತೆ ಕುಟುಂಬಕ್ಕೆ ಪರಿಹಾರ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next