Advertisement

ಪುರುಷೋತ್ತಮ ಪೂಜಾರಿ ಮನೆಗೆ ಶಾಸಕ ಕಾಮತ್ ಭೇಟಿ; ವಾರದೊಳಗೆ ಹೊಸ ರಿಕ್ಷಾ ನೀಡುವ ಭರವಸೆ

03:18 PM Jan 17, 2023 | Team Udayavani |

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಕಳೆದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

Advertisement

ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಎಆರ್ ಟಿಒ ಸ್ಥಳಕ್ಕೆ ಕರೆಯಿಸಿ ಪರ್ಮಿಟ್ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು. ಒಂದು ವಾರದೊಳಗೆ ಹೊಸ ರಿಕ್ಷಾ ದಾಖಲೆ ಸಮೇತ ನೀಡುವ ವ್ಯವಸ್ಥೆ ಆಗುವಂತೆ ಸೂಚಿಸಿದರು. ಆಟೋ ರಿಕ್ಷಾದ ವೆಚ್ಚ ತಾನೇ ಪಾವತಿಸುವುದಾಗಿ ಶಾಸಕರು ತಿಳಿಸಿದರು.

ಇದನ್ನೂ ಓದಿ:ಕಿವೀಸ್ ವಿರುದ್ಧದ ಸರಣಿಯಿಂದ ಹೊರಬಿದ್ದ ಶ್ರೇಯಸ್ ಅಯ್ಯರ್: ತಂಡ ಸೇರಿದ ಆರ್ ಸಿಬಿ ಬ್ಯಾಟರ್

ರಿಕ್ಷಾ ಜತೆಗೆ ಬಿಜೆಪಿ ವತಿಯಿಂದ ಐದು ಲಕ್ಷ ರೂ ನೀಡಲಾಗುವುದು. ಸರಕಾರದಿಂದ ಬರಬೇಕಾದ ಪರಿಹಾರವೂ ಶೀಘ್ರ ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next