ಚಿಕ್ಕೋಡಿ: ‘ಬಿಜೆಪಿಯವರು ಹರಾಮ್ ಕೋರ್ ಮಕ್ಳು ನನ್ನನ್ನು ಲಿಂಗಾಯತ ಹೋರಾಟಕ್ಕೆ ಹೋಗಬೇಡ ಅಂದಿದ್ದರು’.. ಇದು ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ,ಮಾಜಿ ಸಚಿವ ಉಮೇಶ್ ಕತ್ತಿ ಅವರು ಪಕ್ಷದ ವಿರುದ್ಧ ತಮ್ಮ ಅಸಮಧಾನವನ್ನು ಹೊರ ಹಾಕಿದ ಪರಿ.
ಬಿಜೆಪಿ ತೊರೆಯುತ್ತಿದ್ದಾರೆ ಎನ್ನುವ ಸುದ್ದಿಗೆ ಸ್ಪಷ್ಟೀಕರಣ ನೀಡಲು ಶುಕ್ರವಾರ ಮನೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕತ್ತಿ ಈ ಹೇಳಿಕೆ ನೀಡಿದ್ದಾರೆ.
‘ನಾನು ಹುಟ್ಟಿನಿಂದ ಲಿಂಗಾಯತ. ಸಾಯುವಾಗಲೂ ಲಿಂಗಾಯತ. ಬಿಜೆಪಿಯವರು ಹಿಂದೂ ಅಂತ ಹೇಳುತ್ತಾರೆ, ಆದರೆ ನಾನು ಲಿಂಗಾಯತ ಅಂತ ಹೇಳುತ್ತೇನೆ. ನಮ್ಮಪ್ಪ ವೀರಶೈವ ಧರ್ಮದಲ್ಲಿ ಹುಟ್ಟಿ ಬಂದವರು ಲಿಂಗಾಯತರಾಗಿ ಬದುಕಿದವರು.ವಿರಶೈವ -ಲಿಂಗಾಯತ ಬೇರೆಯಲ್ಲ’ ಎಂದರು.
ನಾನು ಪ್ರತಿಕ್ರಿಯೆ ನೀಡುವುದಿಲ್ಲ
‘ಕತ್ತಿ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಉಲ್ಟಾ ಹೊಡದ ಕತ್ತಿ
ನಾನು ಬಿಜೆಪಿಯವರಿಗೆ ಹರಾಮ್ ಕೋರ್ ಎಂದಿಲ್ಲ.ಕಬ್ಬು ಬೆಳೆಗಾರರ ಹಣಕ್ಕೆ ಸಂಬಂಧಿಸಿ ಹೇಳಿದ್ದೇನೆ. ಬಿಜೆಪಿಯನ್ನು ಯಾವುದೇ ಕಾರಣಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ನಾನೊಬ್ಬ ಹಿಂದು ಎಂದು ಉಲ್ಟಾ ಹೊಡೆದಿದ್ದಾರೆ.