Advertisement

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೆಚ್ಚುಗೆ

04:56 PM Aug 06, 2021 | Team Udayavani |

ಸಿರಿಗೆರೆ : ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘಗಳು ರಾಜ್ಯದಲ್ಲಿ ಮಾದರಿಯಾದ ಸೇವೆಯನ್ನು ಮಾಡುತ್ತಿವೆ ಎಂದು ಚಿತ್ರದುರ್ಗದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೆಚ್ಚುಗೆಯ ಮಾತುಗಳನ್ನಾಡಿದರು.

Advertisement

ಶೀಬಾರದ ಎಸ್.ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕಿನ ಸ್ವ-ಸಂಘಗಳಿಗೆ ಲಾಭಾಂಶ ಹಂಚಿಕೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸಂಸ್ಥೆಯು ಗಳಿಸಿರುವ ಲಾಭದಲ್ಲಿ ೬೨೦ ಕೋಟಿ ರೂ.ಗಳನ್ನು ಲಾಭಾಂಶದ ರೂಪದಲ್ಲಿ ಸ್ವ-ಸಂಘದ ಸದಸ್ಯರುಗಳಿಗೆ ವಿತರಿಸುತ್ತಿರುವುದು ದೇಶಕ್ಕೇ ಮಾದರಿಯಾದ ಕ್ರಮವಾಗಿದೆ ಎಂದರು.

ಇದನ್ನೂ ಓದಿ : ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 215 ಅಂಕ ಕುಸಿತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಕಳೆದ 9 ವರ್ಷದಿಂದ ಯಶ್ವಸಿಯಾಗಿ ನಿರ್ವಹಣೆ ಮಾಡುತ್ತಿದೆ. ತಾಲೂಕಿನ ಜನರು ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು  ಹಾಗೂ ಪಡೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕೆಂದು ತಿಳಿಸಿದರು. ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬಂದಿರುವ ಲಾಭಂಶದ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕಿವಿಮಾತು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಜನರನ್ನು ಸಾಮಾಜಿಕವಾಗಿ, ಅರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಈ ಭಾಗದಲ್ಲಿ ನಿರಂತರವಾಗಿ ಮಾಡುತ್ತಿವೆ. ಪಾಲುದಾರ ಸದಸ್ಯರ ಪ್ರಾಮಾಣಿಕತೆಯೇ ಯೋಜನೆಯ ಯಶ್ವಸಿಗೆ ಸಾಧ್ಯ ಅಗಿದೆ. ದೀರ್ಘ ಕಾಲ ಸಂಘದ ಜೊತೆ ಒಡನಾಟ ಇಟ್ಟುಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂದರು.

Advertisement

ಈ ವರ್ಷದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಘಗಳ ಪಾರದರ್ಶಕ ವ್ಯವಹಾರ ಹಾಗೂ ಸರ್ಕಾರದ ಅನುದಾನದಲ್ಲಿ ರಾಜ್ಯದಲ್ಲಿ 620 ಕೋಟಿ ಲಾಭಂಶ ವಿತರಣೆ ಸಾಧ್ಯ ಅಗಿದೆ ಹಾಗೂ ಚಿತ್ರದುರ್ಗ ಜಿಲ್ಲೆಯ 9200 ಸ್ವ- ಸಹಾಯ ಸಂಘಗಳಿಗೆ 29 ಕೋಟಿ ಲಾಭಂಶ ವಿತರಣೆ ಮಾಡಲಾಗುತ್ತಿದೆ ಎಂದರು.

ಚಿತ್ರದುರ್ಗ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಟಿ.ಕೆ. ಸಾಯಿಕುಮಾರ್, ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಜನಜಾಗೃತಿ ವೇದಿಕೆಯ ಸದಸ್ಯರಾದ ಕೆ.ಅರ್ ಮಂಜುನಾಥ್, ರೂಪ ಜನಾರ್ದನ್, ಮಠದ ಕುರುಬರಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಬೈಯಣ್ಣ, ಯೋಜನಾಧಿಕಾರಿ ಎ‌.ಜಿ .ಪ್ರವೀಣ್, ಜಿಲ್ಲಾ ಪ್ರಬಂಧಕ ಪ್ರಕಾಶ್, ಸಮನ್ವಯಾಧಿಕಾರಿ ಕಿರಣ್, ಮೇಲ್ವಿಚಾರಕರರಾದ ಸತೀಶ್.ಜಿ, ಶಶಿಧರ್, ಮೌನೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ : ಪಂದ್ಯ ಸೋತು ದುಃಖದಲ್ಲಿದ್ದ ಮಹಿಳಾ ಹಾಕಿ ತಂಡದ ಸದಸ್ಯರಿಗೆ ಪ್ರಧಾನಿ ಮೋದಿ ಕರೆ !

Advertisement

Udayavani is now on Telegram. Click here to join our channel and stay updated with the latest news.

Next