Advertisement

ಹೊನ್ನಾಳಿ-ನ್ಯಾಮತಿಯ ಕೋವಿಡ್ ವಾರಿಯರ್ಸ್‌ಗೆ ಶಾಸಕ ರೇಣು ಕೃತಜ್ಞತೆ

06:32 AM Jun 02, 2020 | mahesh |

ಹೊನ್ನಾಳಿ: ಕೋವಿಡ್ ಮಹಾಮಾರಿಯಿಂದ ದೇಶ ತತ್ತರಿಸಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ. ಮೆಘಾ ಪ್ಯಾಕೇಜ್‌ ಘೋಷಣೆ ಮಾಡಿ ಸಹಾಯದ ಹಸ್ತ ಚಾಚಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಹಿರೇಕಲ್ಮಠದ ಆವರಣದಲ್ಲಿ ಸೋಮವಾರ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಕೋವಿಡ್ ವಾರಿಯರ್ಸ್‌ಗಳಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಕಾರ್ಯಕ್ರಮ ಹಾಗೂ ಪ್ರೇರಣಾಪೂರ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸೋಂಕಿನ ವಿರುದ್ಧ ಹೋರಾಟ ನಿರಂತರ. ಮುಂದಿನ ದಿನಗಳಲ್ಲಿ ನಾವುಗಳು ಬಹು ಎಚ್ಚರದಿಂದ ಹೆಜ್ಜೆ ಇಡಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಬಹು ದೊಡ್ಡ ಅವಘಡ ಜರುಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕೊರೊನಾ ಸಂಕಷ್ಟ ಮುಗಿದಿಲ್ಲ. ನಾವೆಲ್ಲರೂ ಯುದ್ದೋಪಾದಿಯಲ್ಲಿ ಹೋರಾಟ ಮಾಡಬೇಕಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಹಾಯಕಿಯರು, ವೈದ್ಯರು ಸೇರಿದಂತೆ ಇತರ
ಕೊರೊನಾ ವಾರಿಯರ್ಸ್‌ಗಳು ಮುಂದಿನ ದಿನಗಳಲ್ಲಿ ವ್ಯಾಪಕ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಕೋವಿಡ್ ವಾರಿಯರ್ಸ್‌ಗಳಿಗೆ ಇಂದು
ಹಮ್ಮಿಕೊಂಡಿರುವುದು ಪ್ರೇರಣಾ ಕಾರ್ಯಕ್ರಮ ಹಾಗೂ ಇದು ಆರಂಭವೂ ಹೌದು ಕೋವಿಡ್ ಸಂಪೂರ್ಣ ತೊಲಗಿದ ಮೇಲೆ ನ್ಯಾಮತಿ ತಾಲೂಕಿನಲ್ಲಿ
ಎಲ್ಲ ವಾರಿಯರ್ಸ್‌ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಡಾ| ಒಡೆಯರ್‌ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಹನುಮಂತರಾಯ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ನಾಗರಾಜ್‌, ಜಿಲ್ಲಾ ನೋಡಲ್‌ ಅಧಿಕಾರಿ ಮೀನಾಕ್ಷಿ ಕೋವಿಡ್ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್‌
ತುಷಾರ್‌ ಬಿ.ಹೊಸುರು ಸ್ವಾಗತಿಸಿದರು. ಕೋವಿಡ್ ವಾರಿಯರ್ಸ್‌ಗೆ ಪುಷ್ಪವೃಷ್ಟಿ ಮಾಡಲಾಯಿತು. ಇದಕ್ಕೂ ಮುನ್ನ ಶಾಸಕರು, ಅಧಿಕಾರಿಗಳು ಹಾಗೂ
ಕೋವಿಡ್ ವಾರಿಯರ್ಸ್‌ಗಳು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next