ಮೈಸೂರು: ”ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣುವುದು.ಗೋಪುರಗಳು ಮಸೀದಿ ಮಾದರಿಯಲ್ಲಿ ಇವೆ ಎಂದು ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬೇಕು” ಎಂದು ಶಾಸಕ ತನ್ವೀರ್ ಸೇಠ್ ಸೋಮವಾರ ಕಿಡಿ ಕಾರಿದ್ದಾರೆ.
ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡುವೆ ಎಂದು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ವಿಚಾರಕ್ಕೆ
ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿ, ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು. ಗೋಪುರದ ರೀತಿ ಕಾಣುವುದೆಲ್ಲಾ ಮುಸ್ಲಿಮರದ್ದು ಅನ್ನುವುದಾದರೆ ನಾವು ಏನು ಮಾಡುವುದು? ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದರು ಎಂಬುದು ನನಗೆ ಗೊತ್ತಿಲ್ಲ
ಗುಂಬಜ್ ಮಾದರಿಯ ಬಸ್ ನಿಲ್ದಾಣ ಒಡೆದು ಹಾಕುವುದಾದರೆ, ಅದೆಷ್ಟು ಒಡೆದು ಹಾಕುತ್ತಾರೆ ಒಡೆದು ಹಾಕಲಿ ಎಂದರು.
”ಟಿಪ್ಪು ನಿಜ ಕನಸುಗಳು” ನಾಟಕ ಕೃತಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಡುಗಡೆಯಾದ ಪುಸ್ತಕ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸುತ್ತೇನೆ. ಇಂದು ಪಿಎಎಲ್ ಹಾಕುತ್ತೇವೆ.ಎಲ್ಲಿ ಯಾವಾಗ ಎಂಬುದನ್ನು ವಕೀಲರು ನೋಡಿಕೊಳ್ಳುತ್ತಾರೆ’ ಎಂದರು.
ಶಾಲೆಗಳಲ್ಲಿ ಕೇಸರಿ ಬಣ್ಣ ಹಾಕುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ,ವಿನಾಕಾರಣ ನಾವು ಸೃಷ್ಟಿ ಮಾಡುವುದಲ್ಲ. ಅದನ್ನ ರಕ್ಷಣೆ ಮಾಡಬೇಕೇ ಹೊರತು ಹಾಳು ಮಾಡಬಾರದು.ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.
‘ಟಿಪ್ಪು ಜಯಂತಿ ನಾವು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಆ ದಿನಾಂಕದಂದು ನಾವು ಮಾಡುತ್ತಾ ಬಂದಿದ್ದೇವೆ. ಟಿಪ್ಪು ಜಯಂತಿ ಒಂದು ದಿನ ಮಾಡುತ್ತೇವೆ . ಅವರು ಈ ರೀತಿ ಮಾಡುವುದರಿಂದ ವರ್ಷ ಪೂರ್ತಿ ಆಚರಣೆ ಮಾಡುತ್ತಾರೆ’ ಎಂದರು.