Advertisement

ಸಚಿವರನ್ನು ತರಾಟೆಗೆ ತೆಗೆದುಕೊಂಡ ಶಾಸಕ

12:30 AM Feb 01, 2019 | Team Udayavani |

ಕೋಲಾರ: ಬರ ನಿರ್ವಹಣೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ
ನಡೆದ ಜಿಪಂ ಕೆಡಿಪಿ ಸಭೆಯಲ್ಲಿ ಬಂಗಾರಪೇಟೆ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವ
ಕೃಷ್ಣಬೈರೇಗೌಡರ ವಿರುದ್ಧ ಕೂಗಾಡಿದ ಘಟನೆ ನಡೆಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯುತ್ತಿದ್ದಾಗ ಬಂಗಾರಪೇಟೆ ತಾಲೂಕಿನ ವ್ಯಾಪ್ತಿಗೆ ಬರುವ ಬಂಗಾರಪೇಟೆ
ಮತ್ತು ಕೆಜಿಎಫ್ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರ ಬರ ನಿರ್ವಹಣೆಗೆ ಕೇವಲ 50 ಲಕ್ಷ ರೂ.ಕೊಟ್ಟಿರುವ ಬಗ್ಗೆ
ಆಕ್ಷೇಪಿಸಿ, ತಾವು ಬಿಪಿಎಲ್‌ ಎಂಎಲ್‌ಎ ಅಲ್ಲ, ಎಪಿಎಲ್‌ ಎಂಎಲ್‌ಎ ಎಂದು ಜೋರು ಧ್ವನಿಯಲ್ಲಿ ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡರು, 2 ಕಂತುಗಳಲ್ಲಿ ಒಂದು ಕೋಟಿ ರೂ.ಬಿಡುಗಡೆ ಮಾಡಿದ್ದೇವೆ. ಅನುದಾನ ಸಾಕಾಗಿಲ್ಲ ಎಂದರೆ ಸರ್ಕಾರವನ್ನು ಕೇಳಿ. ಅನುದಾನ ಹೆಚ್ಚಿಗೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಕೂಗಾಡುವುದು ಸರಿಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next