Advertisement

ಶಾಸಕ ಶ್ರೀನಿವಾಸ್‌ ಮಂತ್ರಿಯಾಗಲಿ: ಜಿ.ಟಿ.ದೇವೇಗೌಡ

08:12 PM Feb 03, 2021 | Team Udayavani |

ಮಂಡ್ಯ: ಉತ್ತಮ ಕೆಲಸಗಾರರಾಗಿರುವ ಶಾಸಕ ಎಂ. ಶ್ರೀನಿವಾಸ್‌ ಅವರು ಒಂದು ಬಾರಿಯಾದರೂ ಮಂತ್ರಿಯಾಗಲೇಬೇಕೆಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

Advertisement

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಹನಕೆರೆ ಎಂ.ಶ್ರೀನಿವಾಸ್‌ ಪ್ರತಿಷ್ಠಾನದ ವತಿಯಿಂದ ಶಾಸಕ ಎಂ.ಶ್ರೀನಿವಾಸ್‌ ಅವರ 70ನೇ ವರ್ಷದ ಹುಟ್ಟುಹಬ್ಬದ  ಅಂಗವಾಗಿ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಹಾಗೂ ಎಂ.ಶ್ರೀನಿವಾಸ್‌ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಅರಸಮ್ಮ ಮೆಣಸೇಗೌಡ ಹಿರಿಯ ನಾಗರಿಕರ ಆನಂದಾಶ್ರಮದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಶ್ರೀನಿವಾಸ್‌ ಅವರೇ ಸಾಟಿ: ಶ್ರೀನಿವಾಸ್‌ ಅವರಿಗೆ ಶ್ರೀನಿವಾಸ್‌ ಅವರೇ ಸಾಟಿ. ಪ್ರಸ್ತುತ ರಾಜಕೀಯದಲ್ಲಿ ಭಾಷಣ ಹೆಚ್ಚಾಗಿ ಮಾಡುತ್ತಾರೆ. ಆದರೆ, ಶ್ರೀನಿವಾಸ್‌ ಅವರು ನಿತ್ಯ ನಿರಂತರವಾಗಿ ಕೆಲಸ ಮಾಡುತ್ತಾರೆ. ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡುತ್ತಾರೆ. ಅವರ ಕೆಲಸಗಳು ಇಂದಿಗೂ ಮಾದರಿಯಾಗಿದೆ.ಉತ್ತಮ ಕೆಲಸ ಮಾಡುತ್ತಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಪ್ಪು ಚುಕ್ಕೆ ಇಲ್ಲ: ಒಕ್ಕಲಿಗರ ಸಂಘದಲ್ಲಿ 30 ವರ್ಷ ನಿರ್ದೇಶಕರಾಗಿದ್ದರು. ಎಲ್ಲರ ಮೇಲೆ ಆಪಾದನೆ ಬಂದರೂ ಅವರ ವಿರುದ್ಧವೇ ಹೋರಾಟ ಮಾಡಿದವರು. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನ್ಯಾಯಯುತವಾಗಿ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು. ಜನರ ಆಪಾದನೆಗೆ ಒಳಗಾಗಿಲ್ಲ. ಕಪ್ಪು ಚುಕ್ಕೆ ಇಲ್ಲ. ಮುಂದಿನ ಚು ನಾವಣೆಯಲ್ಲಿ ಸ್ಪರ್ಧಿಸಿ ಮಂತ್ರಿಯಾಗಲೇಬೇಕು. ಇಂಥ ವ್ಯಕ್ತಿಗಳು ಇನ್ನೂ ಇರಬೇಕು. ರಾಜಕಾರಣದಲ್ಲಿ ಎಲ್ಲ ವಿದ್ಯೆಗಳು ಇರಬೇಕು. ನಾಯಕರ ಕಿವಿಗೆ ಚುಚ್ಚಬೇಕು. ಆಗ ಮಾತ್ರ ಎಲ್ಲ ಹುದ್ದೆಗಳು ಸಿಗಲಿವೆ ಎಂದು ಹೇಳಿದರು. ಸುಳ್ಳು ಹೇಳುವವರಿಗೆ ಪ್ರಾತಿನಿಧ್ಯ: ಇತ್ತೀಚಿನ ರಾಜಕಾರಣಿಗಳು ಅಧಿಕಾರ ಸಿಕ್ಕ ನಂತರ ಅವರ ಬೆಳವಣಿಗೆ ಶ್ರಮಿಸುತ್ತಿದ್ದವರಿಗೆ ಪ್ರಾತಿನಿಧ್ಯ ಕೊಡುವುದಿಲ್ಲ. ಸುಳ್ಳು ಹೇಳುವವರಿಗೆ ಹೆಚ್ಚು ಪ್ರಾತಿನಿಧ್ಯ ಕೊಡಲಾಗುತ್ತಿದೆ ಎಂದು ರಾಜಕೀಯ ವ್ಯವಸ್ಥೆ ಬಗ್ಗೆ ಟೀಕಿಸಿದರು.

ಕೆ.ವಿ.ಶಂಕರಗೌಡರ ಆದರ್ಶ ಪಾಲನೆ: ಶಾಸಕ ಶ್ರೀನಿವಾಸ್‌ ಅವರು ಕಷ್ಟದಿಂದ ಬಂದವರು. ರೈತ ಹೋರಾಟದಿಂದ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದರು. ನೀರಾವರಿ ಪ್ರದೇಶ ಇಲ್ಲದೇ ಇರುವ ಕಾಲದಲ್ಲಿ ಬರಗಾಲದ ಅನುಭವವಾಗಿದೆ. ಸ್ವಂತ ಊರಿನಲ್ಲೇ ವಿದ್ಯಾಭ್ಯಾಸ ಮಾಡಿದರು. ಹೆಚ್ಚು ಮೆರಿಟ್‌ ಪಡೆದು ವೈದ್ಯರಾಗಲು ಬಂದಿದ್ದರು. ಆದರೆ ವಕೀಲರಾಗಿ ಶಿಕ್ಷಣ ಪಡೆದರು.  ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಕೆ.ವಿ.ಶಂಕರಗೌಡರ ಆದರ್ಶ ನೋಡಿ ರಾಜಕೀಯಕ್ಕೆ ಬಂದರು. ಹಿರಿಯರ ಆದರ್ಶಗಳನ್ನು  ಗೂಡಿಸಿಕೊಂಡಿದ್ದರು ಎಂದರು.

Advertisement

ಕಾವೇರಿ, ಕಾರ್ಖಾನೆ ಹೋರಾಟ: ರೈತ ಹೋರಾಟದಲ್ಲಿ ಭಾಗಿಯಾಗಿ ಮೈಷುಗರ್‌ ಕಾರ್ಖಾನೆಯನ್ನು ಉಳಿಸಲು ಹೋರಾಟ,  ಕಾವೇರಿ ಹೋರಾಟ ಮಾಡಿದರು. ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದಾರೆ. ರೈತ ಹೋರಾಟಗಾರ ನಂಜುಂಡಸ್ವಾಮಿ ಅವರ ಜತೆ ಹೋರಾಟದಲ್ಲಿ ಭಾಗಿಯಾಗಿದ್ದರು. ವೈಜಾnನಿಕ ಹೋರಾಟಗಾರರಾಗಿದ್ದ ನಂಜುಂಡಸ್ವಾಮಿ ಅವರ ಜತೆ ಸೇರಿಕೊಂಡರು ಎಂದು ಹೇಳಿದರು.

 ಇದನ್ನೂ ಓದಿ :ಬಂಡವಾಳಶಾಹಿ ಪರ ಕೇಂದ್ರ ಬಜೆಟ್‌ : ಕೆಪಿಸಿಸಿ ವಕ್ತಾರ ಚಲುವರಾಯಸ್ವಾಮಿ

ಮೆಡಿಕಲ್‌ ಕಾಲೇಜು ತಂದವರು: ಮಂಡ್ಯ ವಿಶ್ವ ವಿದ್ಯಾಲಯ ಆಗಲಿಕ್ಕೆ ಬಹಳ ಕಷ್ಟಪಟ್ಟರು. ವಿಳಂಬವಾಗಿದ್ದ ವಿವಿಯನ್ನು ಶೀಘ್ರದಲ್ಲಿಯೇ ಮಾಡಬೇಕು ಎಂದು ಮಂಜೂರು ಮಾಡಿದರು. ಅಲ್ಲದೆ, ಮಂಡ್ಯಕ್ಕೆ ಮೆಡಿಕಲ್‌ ಕಾಲೇಜು ತಂದ ಕೀರ್ತಿ ಎಂ.ಶ್ರೀನಿವಾಸ್‌ ಅವರಿಗೆ ಸಲ್ಲುತ್ತದೆ. ಆದ್ದರಿಂದ ಅವರು ಕೆಲಸ ಮಾಡುತ್ತಾರೆ. ಇದರಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಬಡವರು, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸಿದ್ದಾರೆ. ಕಲಾ, ಶಿಕ್ಷಣ ಪ್ರೇಮಿಯಾಗಿ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.

ಸಮಾರಂಭದಲ್ಲಿ ಶಾಸಕ ಎಂ.ಶ್ರೀನಿವಾಸ್‌  ಅವರನ್ನು ಅಭಿನಂದಿಸಲಾಯಿತು. ಕೆ.ಆರ್‌.ಪೇಟೆ ರೋಬೋ ಮಂಜೇಗೌಡ ಅವರಿಗೆ ಅರಸಮ್ಮ, ಮೆಣಸೇಗೌಡ ಕೃಷಿ ಪ್ರಶಸ್ತಿ, ಬೆಂಗಳೂರಿನ ಸಮಾಜ ಸೇವಕ ವಿ.ಲಕ್ಷ್ಮೀನಾರಾಯಣ್‌ ಅವರಿಗೆ ಎಂ.ಶ್ರೀನಿವಾಸ್‌ ಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ್‌, ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಕೀಲಾರ, ಕರ್ನಾಟಕ   ಘದ ಅದ್ಯಕ್ಷ ಪೊ›.ಜಯಪ್ರಕಾಶ್‌ ಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಪ್ರತಿಷ್ಠಾನದ ಉಪಾಧ್ಯಕ್ಷ ಜಿ.ಎನ್‌. ಶಿವರುದ್ರಪ್ಪ, ಕಾರ್ಯದರ್ಶಿ ಎಚ್‌.ಬಿ.ನಾಗಪ್ಪ, ಖಜಾಂಚಿ ಎಚ್‌.ಎಂ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ. ಎಂ.ಕೃಷ್ಣೇಗೌಡ ಕೀಲಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next