ಮಾಗಡಿ: ನೈಸ್ ರಸ್ತೆ ಜಂಕ್ಷನ್ ನಿಂದ ಮಾಗಡಿ ಮಾರ್ಗದ ತಾಳೇಕರೆ ಹ್ಯಾಂಡ್ ಪೋಸ್ಟ್ ವರೆಗೆ ಚತುಷ್ಪìಥ ರಸ್ತೆಕಾಮಗಾರಿತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅಲ್ಲಿನ ವಾಸ್ತವ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.
ತಾಲೂಕಿನ ಕಲ್ಯಾ ಬಳಿ ಕೆಶಿಫ್ ರಸ್ತೆ ಕಾಮಗಾರಿ ಖುದ್ದು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಹಾಗೂಗುತ್ತಿಗೆದಾರರ ನಡುವೆ ಗೊಂದಲವಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ತಮ್ಮ ಹೊಲಗದ್ದೆ ತೋಟಗಳಿಗೆ ಹೋಗಲು ರೈತರಿಗೆ ಮುಂದೆ ಆಗುವ ಅನಾನುಕೂಲ ತಪ್ಪಿಸಲು ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಗತ್ಯಕ್ರಮಕೈಗೊಂಡಿದ್ದೇನೆ ಎಂದರು.
ಸುಮಾರು1,560ಕೋಟಿ ರೂ. ಯೊಜನೆ ರಸ್ತೆ ಇದಾಗಿದೆ. ನನ್ನ ವ್ಯಾಪ್ತಿಯಲ್ಲಿ 480 ಕೋಟಿ ರೂ. ವೆಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದೆ. ಗುಣಮಟ್ಟದ ಕಾಮಗಾರಿ ನಡೆಯಬೇಕು. ಈ ಯೋಜನೆ ಗುತ್ತಿಗೆದಾರರಿಗೆ ತಾಕೀತು ಮಾಡುವಂತೆ ತಿಳಿಸಿದ್ದು, ಕೆಶಿಫ್ನವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂದರು.
ಸೋಮೇಶ್ವರಸ್ವಾಮಿ ಗುಡಿ ಸರ್ಕಲ್, ಕಲ್ಯಾ ಹೊಸಪಾಳ್ಯ, ತಾಳೇಕೆರೆ ಹ್ಯಾಂಡ್ ಪೋಸ್ಟ್ ಹೈಲೆಟ್ ಸರ್ಕಲ್ ಮಾಡಲಾಗುವುದು. ತಾಳೇ ಹ್ಯಾಂಡ್ ಪೋಸ್ಟ್ ನಿಂದ ರಾಷ್ಟ್ರೀಯ ಹೆದ್ದಾರಿಗೆ ಹೋಗುವಾಗ ಅಪಘಾತ ಗಳು ಹೆಚ್ಚಾಗುತ್ತಿದ್ದು, ಇದನ್ನು ಸ್ಥಾಪ್ಪಿಸಲು ಸರ್ವೀಸ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುವುದು.
ಸಂಸದರನ್ನು ಬಿಡುವ ಪ್ರಶ್ನೆಯೇ ಇಲ್ಲ; ಸಂಸದರ ಶ್ರಮದಿಂದಲೇ ರಸ್ತೆ ಕಾಮಗಾರಿ ಪ್ರಾರಂಭಗೊಂಡಿರುವುದು. ನಾನು ಈಗ ರೈತರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಚತುಷ್ಪìಥ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ನಾನು ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಸೇರಿ ರಸ್ತೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕರು ವಿವರಿಸಿದರು.