Advertisement

ಕಡು ಬಡವರನ್ನು ಗುರುತಿಸಿ ಮನೆ ಹಂಚಿಕೆ ಮಾಡಿ : ಶಾಸಕ ಸೋಮಲಿಂಗಪ್ಪ ಸೂಚನೆ

04:22 PM Jan 18, 2022 | Team Udayavani |

ಕುರುಗೋಡು: ಸರಕಾರ ಗ್ರಾಪಂಗಳಿಗೆ ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆ ಅಡಿಯಲ್ಲಿ ನೀಡಿರುವ 40 ಆಶ್ರಯ ಮನೆಗಳನ್ನು ಕಡು ಬಡವರಿಗೆ ಹಾಗೂ ಮನೆ ಬಿದ್ದವರಿಗೆ ಮತ್ತು ಅತಿ ಹೆಚ್ಚು ಜನ ಒಂದೇ ಮನೆಯಲ್ಲಿ ವಾಸವಾಗಿರುವ ಕುಟುಂಬಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡುವಂತೆ ಸದಸ್ಯರುಗಳಿಗೆ ಶಾಸಕ ಎಂ. ಎಸ್. ಸೋಮಲಿಂಗಪ್ಪ ಸೂಚನೆ ನೀಡಿದರು.

Advertisement

ಸಮೀಪದ ಎಂ. ಸೂಗೂರು ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ 2021- 22 ನೇ ಸಾಲಿನ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು,  ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾಸವಾಗಿರುವ ಕಡುಬಡವರನ್ನು ಗುರುತಿಸಿ ಅವರಿಂದ ಅರ್ಜಿ ಸ್ವೀಕರಿಸಿ ಅಂತವರಿಗೆ ಮನೆ ನೀಡಲು ಮುಂದಾಗಬೇಕು ಸದಸ್ಯರು ಎಂದರು.

ಅದೇ ರೀತಿ ಬೇಸಿಗೆ ಗಾಲ ಸಮೀಪಿಸುತ್ತಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಗ್ರಾಪಂ ಆಡಳಿತ ಮುನ್ನಚ್ಚರಿಕೆ ಕ್ರಮ ವಹಿಸಬೇಕು ಅಲ್ಲದೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ವಿಷಯ ಸಾರ್ವಜನಿಕರಿಂದ ದೂರು ಬಂದಿದೆ ಅದನ್ನು ನಿಭಾಯಿಸಲು ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಮುಂದಾಗಬೇಕು ಎಂದು ತಿಳಿಸಿದರು.

ಇದರ ಜೊತೆಗೆ ಚರಂಡಿ, ಬೀದಿ ದೀಪಾ, ಸಿಸಿ ರಸ್ತೆ, ರಸ್ತೆ ದುರಸ್ತಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು. ತಾಲೂಕು ಸೇರಿದಂತೆ ಪ್ರತಿಯೊಂದು ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಸಭೆ ಕೊನೆಯದಲ್ಲಿ ಗ್ರಾಮದ ಮುಖಂಡರು ಶಾಸಕರ ಅತ್ತಿರ ಎಂ. ಸೂಗೂರು ಗ್ರಾಪಂ ಯನ್ನು ಕಂಪ್ಲಿ ತಾಲೂಕಿಗೆ ಸೇರ್ಪಡೆ ಮಾಡುವ ಕುರಿತು ಚರ್ಚೆ ನಡೆಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಗ್ರಾಮದ ಮುಖಂಡರುಗಳು ಒಗ್ಗೂಡಿ ಒಮ್ಮತವನ್ನು ತಿಳಿಸಬೇಕು. ಈಗಾಗಲೇ ಒಂದು ಕಡೆಯಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದರೆ ಇನ್ನೊಂದು ಕಡೆ ವಿರೋಧವಾಗಿ ಬರುತ್ತಿದೆ ಅತರ ಆಗೋದು ಬೇಡಾ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next