ಬಂಗಾರಪೇಟೆ: ಪುರಸಭೆಯ ಕೆರೆಕೋಡಿಯ ಅಭಿವೃದ್ಧಿ, ವಾರ್ಡ್‌ಗೆ ಪಟ್ಟಣದಿಂದ ತಲುಪಲು ರಸ್ತೆ ಹಾಕಿಸಿದವನು ನಾನು. ಆದರೆ, ಫೋಟೋಗೆ ಫೋಸ್ ನೀಡಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿರುವುದು ಮತ್ತೂಬ್ಬರು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಹಾಲಿ ಸದಸ್ಯ ಕಪಾಲಿ ಶಂಕರ್ ವಿರುದ್ಧ ಮಾತಿನ ಚಾಟಿ ಬೀಸಿದರು.
ಪಟ್ಟಣದ ಕೆರೆಕೋಡಿ ವಾರ್ಡ್‌ನಲ್ಲಿ 12 ಲಕ್ಷ ರೂ. ವೆಚ್ಚದ ರಸ್ತೆಯ ಅಭಿವೃದ್ಧಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೆಕೋಡಿ ವಾರ್ಡ್‌ನಲ್ಲಿ ನಾನೇ ಬಂದು ಎಲ್ಲವನ್ನೂ ಮಾಡಿದ್ದೇನೆ ಎಂದು ಇಲ್ಲಿನ ಪುರಸಭೆ ಸದಸ್ಯರು ಸುಳ್ಳು ಪ್ರಚಾರ ಪಡೆದುಕೊಂಡರೆ ಹೊರತು, ಅವರ ಕೊಡುಗೆ ಶೂನ್ಯವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಒಂದು ರೂಪಾಯಿ ಕೆಲಸ ಮಾಡಿಲ್ಲ: ಶಾಸಕರು ಹಾಗೂ ಪುರಸಭೆಯಿಂದ ಮಾಡುತ್ತಿರುವ ರಸ್ತೆಗೆ ಇಲ್ಲಿನ ಸದಸ್ಯರು ದೊಡ್ಡದಾಗಿ ಡಾಂಬರು ಹಾಕುತ್ತಿರುವ ಬಗ್ಗೆ ಫೋಟೋ ಹಿಡಿದು ಫೇಸ್‌ಬುಕ್, ವಾಟ್ಸ್ ಆ್ಯಪ್ ನಲ್ಲಿ ಹರಿದುಬಿಟ್ಟು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಇಲ್ಲಿನ ಸದಸ್ಯರು ಕೆರೆಕೋಡಿ ವಾರ್ಡ್‌ನ ಜನತೆಗೆ ಯಾವ ಮಂಕು ಬೂದಿ ಎರಚಿದರೋ ಗೊತ್ತಿಲ್ಲ. ಕಣ್ಣುಮುಚ್ಚಿ ಮತ ಹಾಕಿದ್ದೀರಿ. ಅದಕ್ಕೆ ಒಂದು ರೂ. ಕೆಲಸನೂ ಮಾಡಿಲ್ಲ ಎಂದು ಕಪಾಲಿ ಶಂಕರ್ ವಿರುದ್ಧ ಆರೋಪಿಸಿದರು.
ಹೈಮಾಸ್ಟ್ ದೀಪ ಅಳವಡಿಕೆ: ಕೆರೆಕೋಡಿ ವಾರ್ಡ್‌ನ ಮುಖಂಡರ ಬೇಡಿಕೆಯಂತೆ ಕುಡಿಯುವ ನೀರಿನ ಅಭಾವ, ರಸ್ತೆ, ಬೀದಿ ದೀಪ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಪುರಸಭೆಯಿಂದ ಮಾಡುತ್ತ ಬಂದಿದ್ದೇವೆ. ಕೆರೆಕೋಡಿ ವಾರ್ಡ್‌ನ ಅಭಿವೃದ್ಧಿ ಕಾಂಗ್ರೆಸ್ ಆಡಳಿ ತದಿಂದ ಮಾತ್ರ ಸಾಧ್ಯ, ನಿಮ್ಮಬೇಡಿಕೆ ಯಂತೆ ಐಮಾಸ್ಟ್ ಲೈಟ್ ಅನ್ನು ಶೀಘ್ರದಲ್ಲೆಸ್ವಂತ ಖರ್ಚಿನಲ್ಲಿ ಅಳವಡಿ ಸಿಕೊಳ್ಳಲಾಗುವುದು ಎಂದು ಹೇಳಿದರು.
ಪುರಸ ಭೆಯಿಂದ ಮನೆ ಇಲ್ಲದವರಿಗೆ 2.70 ಲಕ್ಷ ರೂ. ನೀಡು ತ್ತಿರುವುದಾಗಿ ಮತ್ತು ನಿವೇಶನಇಲ್ಲದವರಿಗೆ ಖುದ್ದು ನಾನೇ ಪರಿಶೀ ಲಿಸಿನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿಪುರಸಭಾ ಅಧ್ಯಕ್ಷೆ ಫರ್ಜಾನಾ ಸುಹೇಲ್, ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾ ಕರ್, ಪುರಸಭೆ ಸದಸ್ಯರಾದಷಪಿ, ವೆಂಕಟೇಶ್, ಗೋ ವಿಂದ, ಆರೋಕ್ಯರಾಜನ್,ಎಸ್.ನಾರಾಯಣ್, ವೆಂಕಟ ರಾಮ್, ಕಣ್ಣನ್ ಮುಂತಾದವರು ಹಾಜರಿದ್ದರು.