Advertisement

ಸರ್ಕಾರದಿಂದ ಯೋಜನೆಗಳ ಹೊಳೆಯೇ ಹರಿಯುತ್ತಿದೆ: ಸವದಿ

06:09 PM Feb 26, 2023 | Team Udayavani |

ರಬಕವಿ-ಬನಹಟ್ಟಿ: ಸಸಾಲಟ್ಟಿ ಏತ ನೀರಾವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾರಣ. ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳೊಂದಿಗೆ ಕ್ಷೇತ್ರದ ಚಿತ್ರಣ ಬದಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಾಕಷ್ಟು ಅನುದಾನ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಿ ಯೋಜನೆಗಳ ಹೊಳೆಯೇ ಹರಿಸಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಪ್ರಶಂಸೆ ವ್ಯಕ್ತಪಡಿಸಿದರು.

Advertisement

ಅವರು ಭಾನುವಾರ ಬನಹಟ್ಟಿಯ ಎಸ್‌ಆರ್‌ಎ ಮೈದಾನಲ್ಲಿ ನಡೆದ ಸಸಾಲಟ್ಟಿ ಏತ ನೀರಾವರಿ ಶಂಕು ಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆಗಾಗಿ ಕ್ಷೇತ್ರದಲ್ಲಿ 600 ಕೋಟಿ ರೂ.ಗಳಷ್ಟು ಅನುದಾನ ಬಳಕೆಯಾಗಿದೆ. 41 ಕೋಟಿ ರೂ.ಗಳಲ್ಲಿ ಕಿನಾಲ್ ರಸ್ತೆ, 60 ಕೋಟಿ ರೂ.ಗಳಲ್ಲಿ ರೈತರ ಜಮೀನು ರಸ್ತೆ ಸುಧಾರಣೆ, 180 ಕೋಟಿ ರೂ.ಗಳಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ 187 ಕಾಮಗಾರಿ ಮೂಲಕ ನೇಕಾರ ಕ್ಷೇತ್ರವಾಗಿರುವ ತೇರದಾಳಕ್ಕೆ ನೇಕಾರ ಸಮ್ಮಾನ್ ಯೋಜನೆಯಡಿ 60 ಕೋಟಿ ರೂ.ಗಳಷ್ಟು 1.5 ಲಕ್ಷ ನೇಕಾರರಿಗೆ ತಲಾ 5 ಸಾವಿರ ರೂ.ಗಳಷ್ಟು ಖಾತೆಗೆ ನೇರವಾಗಿ ಜಮೆಯಾಗಿದೆ ಎಂದರು.

ರಬಕವಿ ನಗರದ ಐಟಿಐ ಕಾಲೇಜಿನ ಟ್ರೇನಿಂಗ್ ಸೆಂಟರ್ ಕಟ್ಟಡ ಮತ್ತು ಮೂಲಭೂತ ಸೌಕರ್ಯಕ್ಕಾಗಿ ರೂ. 30.00 ಕೋಟಿ ಅನುದಾನ ಸೇರಿದಂತೆ ತೇರದಾಳ ನಗರದಲ್ಲಿ ರೂ. 20.00 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ, ರೂ. 22.46 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಹಾಲಿಂಗಪೂರ (ತೇರದಾಳ) ಕಟ್ಟಡ ನಿರ್ಮಾಣ, ಮಹಾಲಿಂಗಪೂರ ತೇರದಾಳ ವಿದ್ಯಾರ್ಥಿ ವಸತಿ ನಿಲಯಗಳು, ಶಾಲಾಕಾಲೇಜುಗಳ ಕಟ್ಟಡಗಳು ಸೇರಿದಂತೆ ಸುಮಾರು 80.70 ಕೋಟಿ ವೆಚ್ಚದಲ್ಲಿ 309 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಹಾಗೂ ರಬಕವಿ ಮತ್ತು ಮಹಾಲಿಂಗಪೂರ ನಗರದಲ್ಲಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ಮುಂಜೂರು, ಚಿಮ್ಮಡ, ಕುಲಹಳ್ಳಿ, ಢವಳೇಶ್ವರ,  ಪದವಿ ಪೂರ್ವ ಕಾಲೇಜುಗಳು, ಯರಗಟ್ಟಿ ಮತ್ತು ಕಲಹಳ್ಳಿ ಪ್ರೌಢ ಶಾಲೆಗಳನ್ನು ಮುಂಜೂರಿಸಲಾಗಿದೆ. ರಾಜ್ಯ ಸರ್ಕಾರವು ಬಾಗಲಕೋಟೆ ಜಿಲ್ಲೆಗೆ ವಿಶ್ವ ವಿದ್ಯಾಲಯವನ್ನು ಘೋಷಣೆ ಮಾಡಿದ ಪ್ರಯುಕ್ತ ತೇರದಾಳ ಮತಕ್ಷೇತ್ರದ ಪಕ್ಕದಲ್ಲೇ ಇರುವ ಜಮಖಂಡಿ ನಗರದಲ್ಲಿ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ಯಶಸ್ವಿಯಾಗಿರುತ್ತೇನೆ. ಇದರಿಂದ ತೇರದಾಳ ಮತಕ್ಷೇತ್ರದ ವಿದ್ಯಾರ್ಥಿಗಳು ಸ್ಥಳಿಯವಾಗಿ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಅಲ್ಲದೆ ಉಚಿತ ವಿದ್ಯುತ್, 2 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೇಕಾರರಿಗೆ ಸಹಕಾರಿಯಾಗಿದ್ದು, ಇದೀಗ ಜವಳಿ ಪಾರ್ಕ್ ಜೊತೆಗೆ ನೇಕಾರರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಅತ್ಯಂತ ಸ್ವಾಗತಾರ್ಹ ಎಂದು ಸವದಿ ಸಂತಸಪಟ್ಟರು.

Advertisement

ಕ್ಷೇತ್ರಾದ್ಯಂತ ದೇವಸ್ಥಾನ ಹಾಗು ಸಮುದಾಯ ಭವನಗಳ ನಿರ್ಮಾಣಕ್ಕೆ 37.5 ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೊಳಿಸಿ ಶೇ.೯೦ ರಷ್ಟು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಸವದಿ ಹೇಳಿದರು.

ಮುಂದಿನ ವಾರದಲ್ಲಿ ಕುಲಹಳ್ಳಿ-ಹುನ್ನೂರ ಹಾಗು ವೆಂಕಟೇಶ್ವರ ಏತ ನೀರಾವರಿಗೆ ಸಚಿವ ಗೋವಿಂದ ಕಾರಜೋಳರಿಂದ ಉದ್ಘಾಟನೆಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next