Advertisement

ಪತ್ರಕರ್ತರ ಭವನ ನಿರ್ಮಾಣಕ್ಕೆ ಬದ್ಧ – ಶಾಸಕ ಸಿದ್ದು ಸವದಿ

05:55 PM Jul 16, 2023 | Team Udayavani |

ರಬಕವಿ-ಬನಹಟ್ಟಿ: ಮುಂದಿನ ದಿನಗಳಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದು, ಸೂಕ್ತ ದಾಖಲಾತಿಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಗಮನ ನೀಡಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಭಾನುವಾರ ರಬಕವಿ ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ನಡೆದ ರಬಕವಿ ಬನಹಟ್ಟಿ ತಾಲ್ಲೂಕು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಿಕಾ ರಂಗ ಸಂವಿಧಾನದ ನಾಲ್ಕನೆಯ ಅಂಗವಾಗಿದ್ದು, ಶಾಸಕಾಂಗ ಮತ್ತು ಕಾರ್ಯಂಗವನ್ನು ತಿದ್ದುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪತ್ರಕರ್ತರು ಶೋಷಿತ ವರ್ಗದ ಧ್ವನಿಯಾಗಿ ಕಾರ್ಯ ಮಾಡಬೇಕು. ಪತ್ರಕರ್ತರನ್ನು ಗೌರವಿಸುವ ಕಾರ್ಯಗಳು ನಡೆಯಬೇಕು. ಸದೃಢ ಭಾರತದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ತೇರದಾಳ ಮತಕ್ಷೇತ್ರದ ಮುಖಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಉತ್ತಮ ಜ್ಞಾನವನ್ನು ಪಡೆಯುವ ನಿಟ್ಟಿನಲ್ಲಿ ಪತ್ರಿಕೆಗಳು ಮಾರ್ಗದರ್ಶನ ಮಾಡುವ ಕಾರ್ಯಗಳನ್ನು ಪತ್ರಿಕೆಗಳು ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರ ಸಂಘದ ಅಧ್ಯಕ್ಷ ಆನಂದ ಧಲಬಂಜನ ಮಾತನಾಡಿ, ಪತ್ರಕರ್ತರ ದಿನಾಚರಣೆಯನ್ನು ಸಮಾಜವು ಆಚರಣೆ ಮಾಡುವಂತಾಗಬೇಕು. ಪತ್ರಕರ್ತರಿಗೂ ಸಾಮಾಜಿಕ ಭದ್ರತೆ ಅಗತ್ಯವಾಗಿದೆ. ಪತ್ರಕರ್ತರು ಮತ್ತು ಪತ್ರಿಕೆಗಳು ಬೆಳೆಯುವ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವಜ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಂಕರ ಕಲ್ಯಾಣಿ , ಮಲ್ಲಿಕಾರ್ಜುನ ತುಂಗಳ ಮತ್ತು ಯಶವಂತ ವಾಜಂತ್ರಿ ಮಾತನಾಡಿದರು.

Advertisement

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.

ಧರೆಪ್ಪ ಉಳ್ಳಾಗಡ್ಡಿ, ಸಿದ್ದರಾಜ ಪೂಜಾರಿ, ನೀಲಕಂಠ ದಾತಾರ, ಜಿ.ಎಸ್. ವಡಗಾವಿ, ಪ್ರೊ.ಬಸವರಾಜ ಕೊಣ್ಣೂರ, ಶಿವಾನಂದ ಬಾಗಲಕೋಟಮಠ, ಶಿವಾನಂದ ದಾಶ್ಯಾಳ, ಮ.ಕೃ.ಮೇಗಾಡಿ, ಗೌರಿ ಮಿಳ್ಳಿ, ಮಹಾದೇವ ಕವಿಶೆಟ್ಟಿ, ವೆಂಕಟೇಶ ನಿಂಗಸಾನಿ, ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ, ಮೃತ್ಯುಂಜಯ ರಾಮದುರ್ಗ, ಪಿಎಸ್‌ಐ ರಾಘವೇಂದ್ರ ಖೋತ, ಕಿರಣ ಆಳಗಿ, ಅರುಣ ಯಾದವಾಡ, ಶಿವಾನಂದ ಮಹಾಬಳಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next