Advertisement
ಕೋವಿಡ್ ಪರಿಸ್ಥಿತಿ ನಿಮ್ಮಕ್ಷೇತ್ರದಲ್ಲಿ ಹೇಗಿದೆ?
Related Articles
Advertisement
ಕೋವಿಡ್ ವಿಚಾರದಲ್ಲಿ ನಿಮ್ಮಕೊಡುಗೆ ಏನು?
ಪ್ರತಿ ವಾರವೂ ಅಧಿಕಾರಿಗಳ ಸಭೆ ಕರೆದು ತಹಶೀಲ್ದಾರ್, ತಾಪಂ, ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೆವು. ಅವರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿದಿನವೂ ಮನೆಮನೆಗೆ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. 2 ತಿಂಗಳಿಂದ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ನಮ್ಮ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದೇನೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಕ್ಯಾಂಪ್ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಫೀವರ್ ಕ್ಯಾಂಪ್ ಮಾಡಿದಂತೆ ವ್ಯಾಕ್ಸಿನ್ ಕ್ಯಾಂಪ್‌ಗಳನ್ನು ತೆರಯಲಾಗುವುದು. ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನನ್ನ ವೈಯಕ್ತಿಕ ಹಣದಲ್ಲಿ ರೂ. 5 ಲಕ್ಷ ವೆಚ್ಚದ ಎಚ್‌ಎಂಎಎನ್‌ಸಿ ಯಂತ್ರವನ್ನು ಕೆಂಪಣ್ಣ ಆಸ್ಪತ್ರೆಗೆ ವೈಯಕ್ತಿವಾಗಿ ವಿತರಿಸಲಾಯಿತು. ಖಾಸಗಿ ಆಸ್ಪತ್ರೆಗೆ ಬಿಪಾಪ್ ಆಕ್ಸಿಜನ್ ಯಂತ್ರ ವೈಯಕ್ತಿಕವಾಗಿ ನೀಡಲಾಗಿದೆ. ಆಕ್ಸಿಜನ್ ಕಾನ್ಸೆನ್ ಟ್ರೇಟರ್, ಪಿಎಸ್‌ಆರ್ ಅನುದಾನ ಹಾಗೂ ದಾನಿಗಳ ಸಹಕಾರದಿಂದ 60-70 ಲಕ್ಷಬೆಲೆಬಾಳುವ ಆಕ್ಸಿಜನ್ ಕನ್ವರ್ಟರ್, ಮೆಡಿಕಲ್ ಸಾಮಗ್ರಿಗಳು, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಔಷಧಿಗಳು, ಐಸಿಯುನಲ್ಲಿಆಕ್ಸಿಜನ್‌ಲಿಕ್ವಿಡ್‌ಗಳನ್ನುನೀಡಲಾಗಿದೆ. ವಾರಿಯರ್ಗಳಿಗೆ ದಿನಸಿ ಕಿಟ್ ವಿತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ?
ಹೊಸಕೋಟೆ ತಾಲೂಕಿನಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದೆ. ಎಂವಿಜೆ ಆಸ್ಪತ್ರೆ, ಜಡಿಗೇನಹಳ್ಳಿಯಲ್ಲಿನ ಕೇರ್ ಸೆಂಟರ್‌ಗೆ ಭೇಟಿ ನೀಡಿ ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ಸಮಸ್ಯೆ ಪರಿಶೀಲಿಸಿ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಒಬ್ಬ ವ್ಯಕ್ತಿಯಾಗಿ ಸೋಂಕಿತರಿಗೆ ನಿಮ್ಮ ಸಲಹೆ?
ಕೋವಿಡ್ ಸೋಂಕು ಬಂದಕೂಡಲೇ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ಧೈರ್ಯದಿಂದಕಾಲಕಾಲಕ್ಕೆಔಷಧೋಪಚಾರಗಳನ್ನು ಪಡೆದು ಗುಣಮುಖರಾಗಬೇಕು. ಕೊರೊನಾ 2ನೇ ಅಲೆ ಭೀಕರವಾಗಿದ್ದು ತೀವ್ರವಾಗಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ, ಎಚ್ಚರಿಕೆ ಇರಲಿ. ಕಡ್ಡಾಯವಾಗಿ ಲಸಿಕೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯಿರಿ. ಸರ್ಕಾರದ ಮಾರ್ಗಸೂಚಿ ಪಾಲಿಸಿ.
ಪೊಲೀಸ್, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರನ್ನು ಪ್ರತಿಯೊಬ್ಬರನ್ನು ಸ್ಮರಿಸಬೇಕು. ಸರ್ಕಾರ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಡವಿದೆ. ತಜ್ಞರು 2ನೇ ಅಲೆ ಬರುತ್ತಿದೆ ಎಂದರೂ ಸೋಂಕಿತರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್, ರೆಮಿಡಿಸಿವರ್ ಚುಚ್ಚುಮದ್ದು ಹೀಗೆ ನೀಡುವುದರಲ್ಲಿ ಸರ್ಕಾರ ವಿಫಲವಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದರು. ಲಸಿಕೆಗಳಿಗೂ ಪರದಾಡುವಂತಾಗಿದೆ.- ಶರತ್ ಬಚ್ಚೇಗೌಡ, ಶಾಸಕರು, ಹೊಸಕೊಟೆ ವಿಧಾನಸಭಾ ಕ್ಷೇತ ● ಎಸ್. ಮಹೇಶ್