Advertisement

ಸೈಲ್‌ ವಿರುದ್ಧ ಮತ್ತೂಂದು ಸಮನ್ಸ್‌

07:45 AM May 01, 2018 | |

ಪಣಜಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕಾರವಾರ ಶಾಸಕ ಸತೀಶ್‌ ಸೈಲ್‌ ವಿರುದ್ಧ ಗೋವಾ ಎಸ್‌ಐಟಿ ಮತ್ತೂಂದು ಸಮನ್ಸ್‌ ಜಾರಿಗೊಳಿಸಿದ್ದು ಮೇ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 

Advertisement

ಸತೀಶ್‌ ಸೈಲ್‌ ಗೋವಾದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿಯಿಂದ ಅಕ್ರಮ ಅದಿರು ವ್ಯವಹಾರ ನಡೆಸಿರುವುದು ಎಸ್‌ಐಟಿ ತಂಡಕ್ಕೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಮೊದಲ ಸಮನ್ಸ್‌ಗೆ ಸೈಲ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ ಎರಡನೇ ಸಮನ್ಸ್‌ಗೆ ವಿಚಾರಣೆಗೆ ಹಾಜರಾಗುವ ಮುನ್ನ ಪಣಜಿಯ ಸೆಷನ್ಸ್‌ ನ್ಯಾಯಾಲಯದಿಂದ ಜಾಮೀನು ಪಡೆದು ರಾಯಬಂದರದಲ್ಲಿ ರುವ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಅಂದು ಸುಮಾರು ಎರಡು ಗಂಟೆ ಸೈಲ್‌ ವಿಚಾರಣೆ ನಡೆಸಲಾಗಿತ್ತು. ಇದೀಗ ಎಸ್‌ಐಟಿ ತಂಡ ಸೈಲ್‌ ವಿರುದ್ಧ ಮತ್ತೂಂದು ಸಮನ್ಸ್‌ ಜಾರಿಗೊಳಿಸಿದೆ. ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ ³ರ್ಧಿಸಿರುವ ಸತೀಶ್‌ ಸೈಲ್‌ಗೆ ಗೋವಾದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next