Advertisement

ಒಂದು ವಾರ ಸದನದಿಂದ ಸಂಗಮೇಶ್ ಅಮಾನತು:  ನಾನು ಯಾವುದಕ್ಕೂ ಹೆದರುವುದಿಲ್ಲಎಂದ ಶಾಸಕ

02:30 PM Mar 04, 2021 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ ಕಲಾಪದ ವೇಳೆ ಅಂಗಿ ಬಿಚ್ಚಿದ ಪ್ರಸಂಗಕ್ಕೆ ಸಂಬಂಧಿಸಿದಂತೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಅಮಾನತು ಮಾಡಲಾಗಿದೆ.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ಇವರುಗಳು ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮು ದ್ವೇಷ ಹಬ್ಬುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ನನ್ನ ಪುತ್ರ, ತಮ್ಮನ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಸದನದಲ್ಲಿ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದೆ ಎಂದಿದ್ದಾರೆ.

ಸ್ಪೀಕರ್ ನನಗೆ ಮಾತನಾಡಲು ಅವಕಾಶ ಕೊಡಬೇಕಿತ್ತು. ಅವರು ಪಕ್ಷಪಾತಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ವಿಧಾನಮಂಡಲ ಅಧಿವೇಶನದಲ್ಲಿ ಅಂಗಿ ಬಿಚ್ಚಿದ ಶಾಸಕ ಸಂಗಮೇಶ್! ಕಿಡಿಕಾರಿದ ಸ್ಪೀಕರ್

ಒಂದು ವಾರವಲ್ಲ ಇಡೀ ಸದನ ನನ್ನನ್ನ ಅಮಾನತು ಮಾಡಲಿ. ದಿನವೂ ನಾನು ಸದನಕ್ಕೆ ಬರುತ್ತೇನೆ ,ನ್ಯಾಯ ಕೇಳುತ್ತೇನೆ. ರಾಜ್ಯದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಇಲ್ಲಿ ಪ್ರಜಾಪ್ರಭುತ್ವ ಇದೆಯಾ? ಸ್ಪೀಕರ್ ಬಿಜೆಪಿ ಏಜೆಂಟ್ ಆಗಿದ್ದಾರಾ? ನನ್ನನ್ನ ಮಾನಸಿಕವಾಗಿ ಕುಗ್ಗಿಸಲು ಈ ಕೆಲಸ ಮಾಡ್ತಿದ್ದಾರೆ. ಆದರೆ ಕ್ಷೇತ್ರದ ಜನರ ಮನಸ್ಸಲ್ಲಿ ನಾನಿದ್ದೇನೆ. ಜನರ ಸೇವೆಯನ್ನ ಮಾಡುತ್ತಿದ್ದೇವೆ ಎಂದರು.

Advertisement

ಭದ್ರಾವತಿಯಲ್ಲಿ ಬಿಜೆಪಿ ‌ನೆಲಕಚ್ಚಿದೆ. ಅಲ್ಲಿ 15 ವಿಧಾನಸಭಾ ಚುನಾವಣೆ ನಡೆದಿವೆ. ಇಲ್ಲಿವರೆಗೆ ಬಿಜೆಪಿ ತಳವೂರಲು ಸಾಧ್ಯವಾಗಿಲ್ಲ. ಅದಕ್ಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಆರೋಪ ಮಾಡಿದರು.

ನಾನು ಕೂಡ‌ ಹಿಂದೂ, ದೇಶದಲ್ಲಿ ಇರುವ ಎಲ್ಲರೂ ಭಾರತೀಯರೇ. ಶ್ರೀರಾಮನ ನಿಜವಾದ ಭಕ್ತರು ಕಾಂಗ್ರೆಸ್ ನವರು. ಇವರಂತೆ ಡೋಂಗಿ ಭಕ್ತಿಯನ್ನು ನಾವು ತೋರಿಸಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ ಆರೋಪಿಸಿದರು.

ಇದನ್ನೂ ಓದಿ: ನನ್ನ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ:ಸಿಎಂ ಕುಟುಂಬದ ವಿರುದ್ಧ ಶಾಸಕ ಸಂಗಮೇಶ್ ಆರೋಪ

ನಮ್ಮ‌ ಮನೆ ಮುಂದೆ 500 ಪೊಲೀಸರನ್ನು ಇಟ್ಟಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಬೇಕಾ? ಅವರ ಕನಸು ಯಾವತ್ತೂ ಉದ್ಧಾರವಾಗಲ್ಲ, ಬಿಜೆಪಿಯವರಿಗೆ ಭದ್ರಾವತಿಯಲ್ಲಿ ಅಭ್ಯರ್ಥಿಯೇ ಇಲ್ಲ, ಕೋಮುವಾದಿಗಳನ್ನು ಭದ್ರಾವತಿಯವರು ಸಹಿಸಲ್ಲ ಎಂದು ಶಾಸಕ ಸಂಗಮೇಶ್ ಆಕ್ರೋಶ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next