Advertisement

ಕಾಮಗಾರಿ  ವಿಳಂಬ ಮಾಡಿದರೆ ಕಠಿಣ ಕ್ರಮ: ಶಾಸಕಿ ರೂಪಾಲಿ ಎಚ್ಚರಿಕೆ

07:39 PM Apr 21, 2021 | Team Udayavani |

ಅಂಕೋಲಾ: ಸಾರ್ವಜನಿಕ ಕಾಮಗಾರಿಗಳ ಭೂಮಿ ಪೂಜೆ, ಅಡಿಗಲ್ಲು ಸಮಾರಂಭ ನಡೆಸಿ ಕಾಮಗಾರಿ ಪ್ರಾರಂಭಿಸದೆ ಅನಗತ್ಯ ವಿಳಂಬ ಮಾಡುತ್ತಿರುವುದು ಕಂಡುಬಂದರೆ ಅಂಥವರ ಗುತ್ತಿಗೆಯನ್ನೇ ರದ್ದುಮಾಡಿ ಬೇರೆಯವರಿಂದ ಕೆಲಸ ಪ್ರಾರಂಭಿಸಬೇಕಾಗಬಹುದು ಎಂದು ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದರು.

Advertisement

ತಾಪಂ ಸಭಾಭವನದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾರ್ವಜನಿಕ ಕಾಮಗಾರಿಯಲ್ಲಿ ವಿಳಂಬ ನೀತಿ ಸರಿಯಲ್ಲ. ಇದರಿಂದ ಜನರಿಗೆ ತೊಂದರೆ ಆಗಬಾರದು. ಅದರಲ್ಲೂ ಲೋಕೋಪಯೋಗಿ ಇಲಾಖೆಯಲ್ಲಿನ ಕಾಮಗಾರಿಗಳು ವಿಳಂಬವಾಗುತ್ತಿರುವ ಆರೋಪ ಕೇಳಿಬರುತ್ತಿದ್ದು ಇಲಾಖೆ ಎಂಜಿನೀಯರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನ ಎಲ್ಲ ಸ್ಮಶಾನಗಳ ಅಭಿವೃದ್ಧಿಗಾಗಿ ಹಣ ನೀಡುತ್ತೇವೆ ಒಳ್ಳೆಯ ಸೌಕರ್ಯಗಳನ್ನು ಹಾಗೂ ರಸ್ತೆಯನ್ನು ನಿರ್ಮಾಣ ಮಾಡಲು ಎಲ್ಲ ಪಂಚಾಯತ ಅಧ್ಯಕ್ಷರು ಹಾಗೂ ಪಿಡಿಓಗಳು ಕ್ರಮ ಕೈಗೊಳ್ಳಿ ಎಂದರು.

ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಶಾಸಕರು ನರೇಗ ಯೋಜನೆಯ ಅನುಷ್ಠಾನದಲ್ಲಿ ತಾಲೂಕು ನಾಲ್ಕನೇ ಸ್ಥಾನದಲ್ಲಿರುವದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ತಾಲೂಕು ವೈದ್ಯಾಧಿಕಾರಿ ನಿತಿನ್‌ ಹೊಸ್ಮಲಕರ ಕೋವಿಡ್‌ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತ 45 ರಿಂದ 60 ವರ್ಷದ 3196 ಹಾಗೂ 60 ವರ್ಷ ಮೇಲ್ಪಟ್ಟ 4260 ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ ಎಂದರು. ತಾಲೂಕು ಆಸ್ಪತ್ರೆಯಲ್ಲಿ ಸ್ತಿÅàರೋಗ ತಜ್ಞರಿಲ್ಲದಿರುವುದರ ಬಗ್ಗೆ ವಿಚಾರಿಸಿದ ಶಾಸಕಿ ಜಿಲ್ಲಾ ವೈದ್ಯಾಧಿಕಾರಿಗಳನ್ನು ಫೋನ್‌ನಲ್ಲಿ ಸಂಪರ್ಕಿಸಿ ಸಮಸ್ಯೆ ಬಗೆಹರಿಸಬೇಕು ಎಂದು ವಿನಂತಿಸಿದರು.

ಮೀನುಗಾರಿಕಾ ಇಲಾಖೆಯಿಂದ 55 ಮೀನುಗಾರರಿಗೆ ಲೈಫ್‌ ಜಾಕೆಟ್‌ಗಳನ್ನು ವಿತರಿಸಲಾಯಿತು. ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಸಾಲ ನೀಡಲು ಬ್ಯಾಂಕ್‌ಗಳು ನಿರಾಸಕ್ತಿ ತೋರಿಸುತ್ತಿರುವುದರ ಬಗ್ಗೆ ಸದ್ಯದಲ್ಲೇ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆಯಲು ಸೂಚಿಸಿದರು. ತಹಶೀಲ್ದಾರ್‌ ಉದಯ ಕುಂಬಾರ, ತಾಪಂ ಇಒ ಪಿ.ವೈ. ಸಾವಂತ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಉಪಾಧ್ಯಕ್ಷೆ ತುಳಸಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next