Advertisement

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಅತಂಕದಲ್ಲಿ ಕುಟುಂಬ

07:44 PM Nov 01, 2022 | Team Udayavani |

ಹೊನ್ನಾಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್‌ ಅವರ ಪುತ್ರ ಎಂ.ಆರ್‌. ಚಂದ್ರಶೇಖರ ನಾಪತ್ತೆಯಾಗಿದ್ದಾನೆ.

Advertisement

ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದ್ದ ಚಂದ್ರಶೇಖರ ಭಾನುವಾರದಿಂದಲೇ ಕಾಣೆಯಾಗಿದ್ದು, ಮಂಗಳವಾರ ರಮೇಶ್‌ ಅವರು ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಚಂದ್ರಶೇಖರ ಮೊಬೈಲ್‌ ಸ್ವಿಚ್‌ಆಫ್‌ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಸುದ್ದಿ ತಿಳಿದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಜನರು ಶಾಸಕರ ಮನೆಗೆ ಬರುತ್ತಿದ್ದಾರೆ. ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next