Advertisement

ಕಾಲುವೆ ಕುಸಿದ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ-ಪರಿಶೀಲನೆ

02:17 PM Mar 13, 2022 | Team Udayavani |

ಹುಣಸಗಿ: ನಾರಾಯಣಪುರ ಎಡದಂಡೆ ಕಾಲುವೆ ಕುಸಿತಗೊಂಡ ಸ್ಥಳಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಶನಿವಾರ ಭೇಟಿ ನೀಡಿ ತಾತ್ಕಾಲಿಕ ಕಾಮಗಾರಿ ವೀಕ್ಷಿಸಿದರು.

Advertisement

ನಂತರ ಮಾತನಾಡಿದ ಅವರು, ಈಗಾಗಲೇ ತಾತ್ಕಾಲಿಕವಾಗಿ ಮರಳಿನ ಚೀಲ ತುಂಬಿ ತಡೆಗಟ್ಟಲು ಪ್ರಯತ್ನಿಸಲಾಗಿದ್ದು, ರೈತರಿಗೆ ಆದಷ್ಟು ನೀರು ಹರಿಸಲು ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆ ಹಂಗಾಮಿನಲ್ಲಿ ರೈತರಿಗೆ ವರದಾನ ಆಗುವಂತೆ ತಾತ್ಕಾಲಿಕ ಕಾಮಗಾರಿ ನಡೆಸಿಯೇ ನೀರು ಹರಿಸಬೇಕಿದೆ. ನಂತರ ಉಳಿದ ಅವಧಿಯಲ್ಲಿ ವಿನೂತನವಾಗಿ ಪರ್ಯಾಯ ಕಾಲುವೆ ಕಟಿಂಗ್‌ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕಾಲುವೆ ಪ್ರತಿಯೊಂದು ಭಾಗದಲ್ಲಿ ಸ್ಥಿತಿಗತಿ ವೀಕ್ಷಿಸಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಕೆಬಿಜೆಎನ್ನೆಲ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ ಅವರು, ಇನ್ನೆರಡು ದಿನಗಳಲ್ಲಿ ತಾತ್ಕಾಲಿಕ ಕಾಮಗಾರಿ ಮುಗಿಯಲಿದ್ದು, ಯಾವುದೇ ಕಾರಣಕ್ಕೂ ರೈತರು ಆತಂಕ ಪಡುವ ಅಗತ್ಯವಿಲ್ಲ. ನೀರು ಹರಿಸಲು ತೊಂದರೆ ಇಲ್ಲ. ಸದ್ಯ ಕಾಮಗಾರಿ ಪೂರ್ಣಗೊಂಡ ನಂತರ ಶಾಶ್ವತ ಪರಿಹಾರಕ್ಕೆ ಮುಂದಾಗುವುದಾಗಿ ಹೇಳಿದರು.

ಈ ವೇಳೆ ಸಿದ್ದನಗೌಡ ಕರಿಭಾವಿ, ಕೃಷ್ಣಾರೆಡ್ಡಿ ಮುದನೂರು, ಇಇ ಶಂಕರ ನಾಯ್ಕೊಡಿ, ಎಇ ರವಿಕುಮಾರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next