Advertisement
ಇದೇ ಸಂದರ್ಭ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ರೋಗಿಗಳ ಜತೆ ಮಾತನಾಡಿ ಸರಿಯಾದ ಚಿಕಿತ್ಸೆ ದೊರೆಯುತ್ತಿದೆಯೇ ಎಂದು ಪ್ರಶ್ನಿಸಿ, ಆರೋಗ್ಯ ಕೇಂದ್ರದ ಕೊರತೆಗಳನ್ನು ಪರಿಹರಿಸುವ ಕ್ರಮ ಮಾಡುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ಹೊಸದಾಗಿ ಮೆಕನೈಸ್ಡ್ ಲಾಂಡ್ರಿ, ಶವಾಗಾರ ಫ್ರೀಜರ್, ಬ್ಲಿಡ್ ಸ್ಟೊರೇಜ್ ರೆಫ್ರಿಜರೇಟರ್, 75 ಕೆ.ವಿ. ಜನರೇಟರ್, ಪೊಲೀಸ್ ಸೆಕ್ಯೂರಿಟಿ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ| ಸದಾಶಿವ ಶ್ಯಾನುಭೋಗ್ ಶಾಸಕರಲ್ಲಿ ಬೇಡಿಕೆ ಸಲ್ಲಿಸಿದರು. ಅದರ ಲಿಸ್ಟ್ ಮಾಡಿ ಕೊಡುವಂತೆ ತಿಳಿಸಿದ ಶಾಸಕರು, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಫೋನಾಯಿಸಿ ಪೊಲೀಸ್ ಸೆಕ್ಯೂರಿಟಿ ಬಗ್ಗೆ ಪ್ರಸ್ತಾವಿಸಿ ದರು. ಬಂಟ್ವಾಳ ವೃತ್ತ ನಿರೀಕ್ಷಕ ರಲ್ಲಿಯೂ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಆರೋಗ್ಯ ಕೇಂದ್ರದಲ್ಲಿ ಅರಿವಳಿಕೆ ತಜ್ಞರು, ವೈದ್ಯಕೀಯ ತಜ್ಞರು, ಮಕ್ಕಳ ತಜ್ಞರ ಹುದ್ದೆ ಖಾಲಿ ಇದ್ದು, ಅದಕ್ಕೆ ನೇಮಕಾತಿ ಆಗುವಂತೆ ಶಾಸಕರಲ್ಲಿ ಮನವಿ ಸಲ್ಲಿಸಲಾಯಿತು. ಅದರ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತನಾಡುವ ಬಗ್ಗೆ ಶಾಸಕರು ಭರವಸೆ ನೀಡಿದರು.
Related Articles
ಇದೇ ಸಂದರ್ಭ ಜತೆಯಲ್ಲಿದ್ದ ಮಂಗಳೂರು ಎ.ಜೆ. ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ| ಪ್ರಶಾಂತ್ ಮಾರ್ಲರು ಬಯೋಕೆಮಿಸ್ಟ್ ಎನಲೈಜರ್ ಲ್ಯಾಬ್ ಮತ್ತು ಅವಶ್ಯ ಸಾಮಗ್ರಿಗಳನ್ನು ನೀಡುವ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜತೆಗೆ ತತ್ಕಾಲಕ್ಕೆ ಮಕ್ಕಳ ತಜ್ಞ ವೈದ್ಯರನ್ನು ನಿರ್ದಿಷ್ಟ ದಿನಗಳಲ್ಲಿ ನಿಯೋಜಿಸುವುದಾಗಿ ತಿಳಿಸಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
Advertisement
ಹೊರ ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ವೇತನ ಬರುತ್ತಿಲ್ಲ ಎಂದು ನಿಯೋಗ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ದಾಗ, ಸರಿಯಾಗಿ ವೇತನ ಬರುವಂತೆ ಕ್ರಮ ಮಾಡಿದೆ. ಮುಂದಕ್ಕೆ ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಾ| ವೈದ್ಯಾಧಿಕಾರಿ ಡಾ| ದೀಪಾ ಪ್ರಭು ಉಪಸ್ಥಿತರಿದ್ದರು. ಬಳಿಕ ಅವರು ಮಂಚಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ, ಹೊಸ ಕಟ್ಟಡ ಪ್ರಗತಿ ಬಗ್ಗೆ ಪರಿಶೀಲನೆ ಮಾಡಿದರು.
ವೈದ್ಯರ ನೇಮಕಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎರವಲು ಕ್ರಮದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಒಬ್ಬರು ವೈದ್ಯರನ್ನು ಕಳುಹಿಸುವಲ್ಲಿ ಮನವಿಯಂತೆ ವ್ಯವಸ್ಥೆ ಆಗಲಿದೆ. – ರಾಜೇಶ್ ನಾೖಕ್, ಶಾಸಕರು