ಚನ್ನಪಟ್ಟಣ: ಸಮುದಾಯದ ಅಭಿವೃದ್ಧಿ ಸರ್ಕಾರ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ, ಈ ಯೋಜನೆಗಳ ಸದುಪ ಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಕುಡಚಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹೇಳಿದರು.
ತಾಲೂಕಿನ ಕಣ್ವಾರಸ್ತೆಯಲ್ಲಿರುವ ಲಂಬಾಣಿಯಾಂಡ್ಯದಲ್ಲಿ ಆಯೋಜನೆ ಮಾಡಲಾಗಿದ್ದ ಲಂಬಾಣಿ ಸಮುದಾಯದ ಸಮಸ್ಯೆ ಹಾಗೂ ಕುಂದು-ಕೊರತೆಗಳ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಗಣನೀಯವಾದ ಸಂಖ್ಯೆಯಲ್ಲಿರುವ ಹಾಗೂ ಕಷ್ಟದ ಜೀವನವನ್ನು ನಡೆಸುತ್ತಿರುವ ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯದ ಬಿಜೆಪಿ ಸರ್ಕಾರ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿದೆ, ಈ ಯೋಜನೆಗಳು ಫಲಪ್ರದ ವಾಗಬೇಕಾದರೆ ಅರ್ಹ ಫಲಾನುಭವಿಗಳು ಯೋಜನೆಯ ಉಪಯೋಗವನ್ನು ಸಗುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ಹಸನು ಮಾಡಿಕೊಳ್ಳಬೇಕು ಎಂದರು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ರಾಜ್ಯ ಕೆಳವರ್ಗದ ಸಮುದಾಯಗಳ ಅಭಿವೃದ್ಧಿ ಹಲವಾರು ರೀತಿಯ ನಿಗಮಮಂಡಳಿಯನ್ನು ರಚನೆ ಮಾಡಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಿಗಮಮಂಡಳಿಗೆ ಕೋಟ್ಯಂತರ ರೂ. ಗಳ ಅನುದಾನ ನೀಡಿರುವುದು ಸಾಮಾನ್ಯದ ವಿಚಾರವಲ್ಲ ಎಂದರು.
ಕುಡಚಿ ಕ್ಷೇತ್ರದ ಶಾಸಕ ರಾಜೀವರವರು ಸಮುದಾಯದ ಮಂಡಳಿ ಅಧ್ಯಕ್ಷರಾಗಿ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಲಂಬಾಣಿ ಸಮುದಾಯದವರು ನಿಗಮ ಮಂಡಳಿಯಿಂದ ದೊರೆಯುವ ಪ್ರತಿಯೊಂದು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
ಜಿಲ್ಲಾ ಲಂಬಾಣಿ ಸಂಘದ ಜಿಲ್ಲಾಧ್ಯಕ್ಷ ಲಂಬಾಣಿತಾಂಡದ ಚಂದ್ರನಾಯಕ ಮಾತನಾಡಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಹಾಗೂ ಅಭಿವೃದ್ಧಿ ನಿಗಮದ ನಿರ್ದೇಶಕ ಹಾಗೂ ಮಾಜಿ ಸಚಿವ, ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಜಯರಾಮು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸಮುದಾಯದ ಮುಖಂಡರಾದ ಸಿದ್ದರಾಜನಾಯ್ಕ, ಮಾದೇವನಾಯ್ಕ, ಬಾಲಜಿನಾಯ್ಕ, ಗುರುರಾಜ ಶಂಕರ್ ನಾಯ್ಕ, ರಮೇಶ್‌ನಾಯಕ್, ಬಾಲುನಾಯ್ಕ, ನಂದೀಶ್‌ನಾಯ್ಕ ಇದ್ದರು.