Advertisement

ಸಂತ್ರಸ್ತರ ಅಹವಾಲಿಗೆ ರಘುಮೂರ್ತಿ ಸ್ಪಂದನೆ

02:41 PM Oct 16, 2021 | Team Udayavani |

ಚಳ್ಳಕೆರೆ: ತಾಲೂಕಿನ ನಗರಂಗೆರೆ ಕೆರೆಯಂಗಳದಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಸರೆ ಪಡೆದಿದ್ದಾರೆ. ಶಾಸಕ ಟಿ. ರಘುಮೂರ್ತಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.

Advertisement

ನಿವೃತ್ತ ದೈಹಿಕ ಶಿಕ್ಷಕ ಸಿ.ಬಿ. ಬಾಲರಾಜು ಮಾತನಾಡಿ, ಹಲವಾರು ವರ್ಷಗಳಿಂದ ಬಡ ಕುಟುಂಬಗಳು ಕೆರೆಯಂಗಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿವೆ. ಗ್ರಾಮ ಪಂಚಾಯಿತಿ ಈ ಹಿಂದೆ ಅವರಿಗೆ ಕೆರೆಯಂಗಳದಲ್ಲಿ ಮನೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಪ್ರಕೃತಿ ವಿಕೋಪದಿಂದ ಕುಟುಂಬಗಳು ಬೀದಿಪಾಲಾಗುವ ಸಂದರ್ಭದ ಬಂದಿದೆ. ಶಾಸಕರು ಎಲ್ಲಾ ಕುಟುಂಬಗಳಿಗೆ ಭದ್ರವಾದ ನೆಲೆ ಒದಗಿಸಬೇಕು ಹಾಗೂ ಕುಟುಂಬ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಟಿ. ರಘುಮೂರ್ತಿ ಗ್ರಾಮದ ಗೋಮಾಳದಲ್ಲಿ ನೀರಿನಿಂದ ಆವೃತ್ತವಾದ ಕುಟುಂಬಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕು. ಅನಗತ್ಯವಾಗಿ ಬೇರೆ ಕಡೆ ಮನೆ ಇದ್ದರೂ ಇಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಪಟ್ಟಿಯಿಂದ ಹೊರಗಿಟ್ಟು ಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವು ನೀಡಬೇಕು. ಕೆರೆಯಂಗಳದಲ್ಲಿನ ಗುಡಿಸಲು ವಾಸಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ ಎನ್‌. ರಘುಮೂರ್ತಿ ಹಾಗೂ ಕಂದಾಯಾಧಿಕಾರಿ ರಾಮಲಿಂಗೇಗೌಡ ಅವರಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾತಲಿಂಗಪ್ಪ ಮಾತನಾಡಿ, ಗುಡಿಸಲಲ್ಲಿ ನೀರು ಬಂದ ಕೂಡಲೇ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಅಧಿ ಕಾರಿ ವರ್ಗ ಅವರ ನೆರವಿಗೆ ದಾವಿಸಿದೆ. ಪ್ರಾಣಾಪಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಶಾಲೆಯನ್ನೇ ನಿರಾಶ್ರಿತರ ಕೇಂದ್ರವಾಗಿಸಿ ಆಹಾರ ಪದಾರ್ಥಗಳನ್ನು ನೀಡಲಾಗಿದೆ ಎಂದರು.

ನಗರಂಗೆರೆ ಗ್ರಾಮದ ಕೆರೆ ವೀಕ್ಷಿಸಿದ ಶಾಸಕ ಟಿ. ರಘುಮೂರ್ತಿ, ಕೆಲವೇ ಅಡಿ ನೀರು ಬಂದರೆ ಕೆರೆ ಕೋಡಿ ಬೀಳುವ ಸಂಭವವಿದೆ. ಕಳೆದ ಸುಮಾರು ಐದು ದಶಕಗಳಿಂದ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿಲ್ಲ. ಈ ವರ್ಷವಾದರೂ ಕೋಡಿ ಬೀಳುವಂತಾಗಲಿ ಎಂದು ಆಶಿಸಿದರು.

Advertisement

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಲಿಂಗಮ್ಮ, ಸದಸ್ಯರಾದ ಯರ್ರಮ್ಮ ಓಬಯ್ಯ, ಎಂ. ಕುಮಾರಸ್ವಾಮಿ, ಅಂಗಡಿ ರಮೇಶ್‌, ಹಿದಾಯತ್‌ವುಲ್ಲಾ, ರಾಜು, ಓಬಣ್ಣ, ಷಣ್ಮುಖ, ಮಂಜುಳಾ, ರೇಣುಕಮ್ಮ, ಲಕ್ಷ್ಮಿದೇವಿ, ಗ್ರಾಮದ ಮುಖಂಡ ಸಿ. ಓಬಣ್ಣ, ತಾಪಂ ಮಾಜಿ ಸದಸ್ಯ ಟಿ. ಗಿರಿಯಪ್ಪ, ಗದ್ದಿಗೆ ತಿಪ್ಪೇಸ್ವಾಮಿ, ಕಾರ್ಯದರ್ಶಿ ಹನುಮಂತರಾಜು, ಗ್ರಾಮಲೆಕ್ಕಿಗ ರಘುನಾಥಸಿಂಗ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next