Advertisement
ನಿಮ್ಮ ಕನಸಿನ ಮಂಡ್ಯ ನಗರ ಹೇಗಿರಬೇಕು?
Related Articles
Advertisement
ಶಾಸಕರಾದ ನಂತರ ನಿಮ್ಮ ಸರ್ಕಾರದಿಂದ ಎಷ್ಟು ಅನುದಾನ ತಂದಿದ್ದೀರಾ?
ರಾಜ್ಯದ 224 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ನನ್ನ ಕ್ಷೇತ್ರದ ಮೈಷುಗರ್ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡಿದ್ದಾರೆ. ಈಗಾಗಲೇ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಎಸ್‌ಟಿಪಿ ಕೆಲಸಗಳು ನಡೆಯುತ್ತಿದೆ. ಸುಮಾರು 700 ರಿಂದ 800 ಕೋಟಿ ರೂ. ಅನುದಾನದ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಚಾಲನೆಗೊಂಡಿದ್ದು, ಇನ್ನೂ ಕೆಲವು ಕಾಮಗಾರಿಗಳಿಗೆ ಇನ್ನು 75 ದಿನಗಳಲ್ಲಿ ಚಾಲನೆ ನೀಡಲಾಗುವುದು.
ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ಏನು?
ಬಸರಾಳು ಹೋಬಳಿಯ ಬೇಬಿ ಗ್ರಾಮದ ಬಳಿ ಕೈಗಾರಿಕಾ ವಲಯ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ನಾನು ಶಾಸಕನಾದ 15 ದಿನಗಳಲ್ಲೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರ ದಲ್ಲಿಯೇ ಆರಂಭಿಸಲಾಗುವುದು. ಅಲ್ಲದೆ, ಮಂಡ್ಯ ಹೊರ ವಲಯದಲ್ಲಿ ಬೈಪಾಸ್‌ನಂತೆಯೇ ರಿಂಗ್ ರಸ್ತೆ ಸ್ಥಾಪನೆ ಮಾಡಲಾಗುವುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಯಾ ಗಲಿದ್ದು, ಉದ್ಯೋಗ ಸಿಗಲಿದೆ. ದೊಡ್ಡಹಳ್ಳಿಯಂತಿ ರುವ ಮಂಡ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು.
ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಏನು?
ಬಸರಾಳು ಬಳಿ 250 ಕೋಟಿ ರೂ. ವೆಚ್ಚದ ಹೇಮಾವತಿ ನಾಲೆ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಪ್ರಸ್ತಾವನೆ ಕಳುಹಿಸಲಾಗಿದ್ದು, 30 ವರ್ಷಗಳಿಂದ ಹಾಗೆ ಇದೆ. ಈ ವರ್ಷವೇ ಅನುದಾನ ಬಿಡು ಗಡೆಯಾದರೆ ಕಾಮಗಾರಿ ಆರಂಭವಾಗಲಿದೆ. ಇದರಿಂದ ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲ ತಾಲೂಕುಗಳಿಗೂ ಅನುಕೂಲ ವಾಗಲಿದೆ. ಮಂಡ್ಯ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ರಿಟರ್ನಿಂಗ್ ವಾಲ್Ì ಅಳವಡಿಸುವ ಮೂಲಕ ಶಾಶ್ವತ ಪರಿಹಾರ ನೀಡಲಾಗುವುದು. ಅದಕ್ಕಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.
ಹಕ್ಕುಪತ್ರಗಳ ವಿತರಣೆ ಯಾವಾಗ?
ನಗರದಲ್ಲಿ ಕಳೆದ 75 ವರ್ಷಗಳಿಂದ ಕೆಲವು ಕಡೆ ಹಕ್ಕುಪತ್ರಗಳನ್ನು ವಿತರಣೆ ಮಾಡಿಲ್ಲ. ಆದರೆ ಈ ಬಾರಿ ಎಲ್ಲರಿಗೂ ಹಕ್ಕುಪತ್ರಗಳ ವಿತರಣೆಗೆ ಕ್ರಮ ವಹಿಸಲಾ ಗುವುದು. ಶೇ.90ರಷ್ಟು ಕೆಲಸ ಮುಗಿದಿದೆ. ಮುಖ್ಯ ಮಂತ್ರಿಗಳ ಬಳಿ ಸಮಯ ಕೇಳಿದ್ದೇನೆ. ಹೊಸ ಸಕ್ಕರೆ ಕಾರ್ಖಾನೆ, 400 ಕೆವಿ ವಿದ್ಯುತ್ ಸ್ಟೇಷನ್ ಶಂಕುಸ್ಥಾಪನೆ ಹಾಗೂ ಹಕ್ಕುಪತ್ರಗಳ ವಿತರಣೆ ಮಾಡಲಾಗುವುದು.
ಮಂಡ್ಯ ಮಹಾನಗರ ಪಾಲಿಕೆ ಯಾವಾಗ ಆಗಲಿದೆ?:
ಮಹಾನಗರ ಪಾಲಿಕೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಇದುವರೆಗೂ ಪ್ರಸ್ತಾವನೆ ಹೋಗಿಲ್ಲ. ಮಂಡ್ಯ ಮಹಾನಗರ ಪಾಲಿಕೆ ಮಾಡಲು 3 ಲಕ್ಷದಷ್ಟು ಜನಸಂಖ್ಯೆ ಇರಬೇಕು. ಆದರೆ ಪ್ರಸ್ತುತ 2 ಲಕ್ಷ ಇದೆ. ಸುತ್ತಮುತ್ತ ಗ್ರಾಮಗಳನ್ನು ಸೇರಿಸಿಕೊಂಡು ಮಾಡಬೇಕಾ ಗಿದೆ. ಇದರ ಸಾಧಕ-ಬಾಧಕಗಳ ಚರ್ಚೆ ಮಾಡಬೇಕು. ಈ ಬಾರಿ ಪ್ರಸ್ತಾವನೆ ಸಲ್ಲಿಸುವಾಗ ಸರ್ವೆ ನಡೆಸಿ ಯಾವ ಗ್ರಾಮಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಭೌಗೋಳಿಕ ವರದಿ ತಯಾರಿಸಿ ನಂತರ ಕಳುಹಿಸಲಾಗುವುದು. ಅಲ್ಲದೆ, ಯತ್ತಗದಹಳ್ಳಿ ಹಾಗೂ ಕೋಣನಹಳ್ಳಿ ಕೆರೆಗಳಲ್ಲಿ ಬೋಟಿಂಗ್ ವಿಹಾರ ವ್ಯವಸ್ಥೆ ಹಾಗೂ ಗಾಂ ಧಿನಗರದಲ್ಲಿರುವ 7 ಎಕರೆ ಜಮೀನಿನಿದ್ದು, ಅಲ್ಲಿ ಏನು ಮಾಡಬೇಕು ಎಂಬುದರ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು.
ಹೊಸ ಯೋಜನೆಗಳು :
ಬಸರಾಳು ಬಳಿ ಕೈಗಾರಿಕೆಗಳ ಸ್ಥಾಪನೆ
ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ
ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರಗಳ ವಿತರಣೆ
ಮಹಾನಗರ ಪಾಲಿಕೆ ಮಾಡಲು ಸಾಧಕ-ಬಾಧಕಗಳ ಚರ್ಚೆ
ಗುಣಮಟ್ಟದ ರಸ್ತೆ, ಫುಟ್‌ಬಾತ್, ಸೈಕಲ್ ಪಾತ್ ನಿರ್ಮಾಣ
– ಎಚ್.ಶಿವರಾಜು