ಮಾಸ್ತಿ: ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಹಲವು ರೀತಿಯ ಪ್ರಯತ್ನದಲ್ಲಿ ಬಿಜೆಪಿಯವರು ನಿರತರಾಗಿದ್ದು, ಅದು ಫಲ ನೀಡುವುದಿಲ್ಲ. ನಾವು ಎಚ್ಚರಿಕೆಯಿಂದ ಇದ್ದೇವೆ ಎಂದು ಶಾಸಕ ಕೆ. ವೈ.ನಂಜೇಗೌಡ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮಾಸ್ತಿ ಗ್ರಾಮದ ಮುಖಂಡರೊಬ್ಬರ ಮನೆಯಲ್ಲಿ ಆಕಾಂಕ್ಷಿಗಳು ಹಾಗೂ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರಿಗೆ ಆಸೆ, ಆಮಿಷವೊಡ್ಡಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ತಾಲೂಕಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ. 9 ರಿಂದ ಪ್ರಾರಂಭವಾಗಿ 12 ರವರೆಗೆಚುನಾವಣೆ ನಡೆಯಲಿದೆ ಎಂದರು.
29 ಸ್ಥಾನವಿರುವ ಚಿಕ್ಕತಿರುಪತಿ ಬಿಟ್ಟರೆ, 24 ಸ್ಥಾನವಿರುವ ಮಾಸ್ತಿ ಗ್ರಾಪಂ ಎರಡನೇ ದೊಡ್ಡ ಗ್ರಾಪಂ ಆಗಿದೆ. 24 ಸ್ಥಾನ ಪೈಕಿ 22 ಮಂದಿ ಕಾಂಗ್ರೆಸ್ ಬೆಂಬಲಿತರಿದ್ದಾರೆ. ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಎಸ್ಟಿ ಮಹಿಳೆಗೆ ಮೀಸಲಿದೆ. ಸಾಮಾನ್ಯ ಇದ್ದಾಗ ಆಕಾಂಕ್ಷಿಗಳು ಹೆಚ್ಚಾಗಿರುವುದು ಸಹಜ ಎಂದರು.
ಇದನ್ನೂ ಓದಿ : ರಾಜ್ಯದ ಸಂಸದರು ಬಾಯಿಗೆ ಬೀಗ ಹಾಕಿದ ಕಾರಣ ಸತತ ಅನ್ಯಾಯವಾಗುತ್ತಿದೆ: ಖಾದರ್
ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಎಪಿಎಂಸಿ ನಿರ್ದೇಶಕರಾದ ಸಬ್ದರ್ ಬೇಗ್, ಕೆ.ಎಚ್.ಕೃಷ್ಣ ಕುಮಾರ್, ಕೆಡಿಪಿ ಮಾಜಿ ಸದಸ್ಯ ವಿಜಯನರಸಿಂಹ, ಎಂ.ಎನ್.ಮೋಹನ್‌ರಾವ್, ಎಂ.ಎಸ್.ಶೌಕತ್‌ಉಲ್ಲಾ ಬೇಗ್, ಬೆಡಿಶೆಟ್ಟಹಳ್ಳಿ ರಮೇಶ್, ಜೆಸಿಬಿ ನಾಗರಾಜ್, ಚೇತನ್ ಕುಮಾರ್, ರಾಜಕುಮಾರ್, ಮುಖಂಡರು,ನೂತನವಾಗಿ ಆಯ್ಕೆಯಾಗಿರುವ ಪಕ್ಷದ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.