Advertisement

ಶಾಸಕ ನಾಗೇಶ್‌ ವರ್ತನೆಗೆ ಆಕ್ರೋಶ

07:19 AM Jul 08, 2020 | Lakshmi GovindaRaj |

ತಿಪಟೂರು: ಎಷ್ಟೇ ದೊಡ್ಡ ಜನಪ್ರತಿನಿಧಿಯಾದವರು ಮತ್ತೂಬ್ಬ ಜನಪ್ರತಿನಿಧಿ ಯೊಂದಿಗೆ ಸರಕಾರಿ ಕಾರ್ಯ ಕ್ರಮಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನು ಶಾಸಕ ನಾಗೇಶ್‌ ಕಲಿತುಕೊಳ್ಳಬೇಕು ಎಂದು ಜೆಡಿಎಸ್‌  ತಾ. ಕಾರ್ಯಾಧ್ಯಕ್ಷ ಎಂ.ಎಸ್‌. ಶಿವಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ನಗರದ ವಿದ್ಯಾನಗರದಲ್ಲಿ ಕಾಮಗಾರಿ ವೇಳೆ ಶಾಸಕ ಬಿ.ಸಿ.ನಾಗೇಶ್‌ ನಗರಸಭಾ ಸದಸ್ಯ ಯೋಗೇಶ್‌ ಜೊತೆ ನಡೆದು ಕೊಂಡ  ರೀತಿ ಸರಿಯಿಲ್ಲ. ಯಾವುದೇ ಸರಕಾರಿ ಅಭಿವೃದ್ಧಿ ಕಾಮಗಾರಿಗಳು, ಕೆಲಸಕಾರ್ಯಗಳು ಜನತೆಯ ತೆರಿಗೆ ಹಣದಿಂದ ಮಾತ್ರ ನಡೆಯುತ್ತಿರುತ್ತವೆ. ಸರ್ಕಾರಿ ಖಜಾನೆಯ ಹಣ ಸಾರ್ವ ಜನಿಕರಿಗೆ ಸೇರಿದ್ದು, ಪ್ರತಿಯೊಬ್ಬ ಪ್ರಜಾ ಪ್ರತಿನಿಧಿಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಕ್ಕಿದೆ.

ಶಾಸಕರು, ಸಂಸದರು ಸಂಬಂಧಪಟ್ಟ ಜನಪ್ರತಿನಿಧಿಯ ಕ್ಷೇತ್ರದಲ್ಲಿ ಅಥವಾ ವಾರ್ಡ್‌ ನಲ್ಲಿ ಅಭಿವೃದ್ಧಿ ಕೆಲಸ ಮಾಡ ಬೇಕಾದರೆ ಸ್ಥಳೀಯ ಪ್ರತಿನಿಧಿಗೆ  ತಿಳಿಸುವುದು ಸಂವಿ ಧಾನದ ನೀತಿಯಾಗಿದೆ. ಆದರೆ ಇಲ್ಲಿನ ಶಾಸಕರು 14ನೇ ವಾರ್ಡ್‌ನಲ್ಲಿ ಕಾಮಗಾರಿ ಪೂಜೆಗೆ ಸ್ಥಳೀಯ ನಗರಸಭಾ ಸದಸ್ಯ ವಿ. ಯೋಗೀಶ್‌ ಗಮನಕ್ಕೆ ತಾರದೇ, ಕರೆಯದೇ ಮಾಡಿರುವುದಲ್ಲದೇ ಇದನ್ನು ಪ್ರಶ್ನಿಸಿ ಯೋಗೀಶ್‌  ಮೇಲೆ ಅಮಾನವೀಯವಾಗಿ ನಡೆದು ಕೊಂಡಿರುವುದು ಸರಿಯಲ್ಲ.

ಶಾಸಕ ನಾಗೇಶ್‌ ಅವರ ಸ್ವಂತ ದುಡ್ಡಿನಿಂದ ರಸ್ತೆ ಕಾಮಗಾರಿ ಆರಂಭಿ ಸುವಂತೆ ದುರ್ವರ್ತನೆ ಮಾಡಿರು ವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ  ಶಾಸಕರ ವರ್ತನೆ ಮುಂದುವರಿದರೆ ಜೆಡಿಎಸ್‌ ನಿಂದ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next