Advertisement
– ಹೀಗೆ ಹೇಳಿದ್ದು, “ಯರ್ರಾಬಿರ್ರಿ ಸ್ಟಾರ್’ ಅಂತಿಟ್ಟುಕೊಂಡಿರುವ ಪ್ರಥಮ್. ಅವರು ಹಾಗೆ ಹೇಳಿದ್ದು, “ಎಂಎಲ್‌ಎ’ ಚಿತ್ರದ ನಿರ್ಮಾಪಕ ವೆಂಕಟೇಶ್ ರೆಡ್ಡಿ ಬಗ್ಗೆ. ಅಂದು ಚಿತ್ರದ ವಿಡೀಯೋ ಸಾಂಗ್ ಬಿಡುಗಡೆ ಮಾಡೋಕೆ ಧ್ರುವ ಸರ್ಜಾ ಬಂದಿದ್ದರು. ವಿಡೀಯೋ ಸಾಂಗ್ ರಿಲೀಸ್ ಬಳಿಕ ವೇದಿಕೆಯೇರಿದ ಪ್ರಥಮ್, ಬೇರೆಯವರು ಮಾತಾಡುವಾಗ ಮಾತು ತೂರಿಸುತ್ತಲೇ ಇದ್ದರು. ಕೊನೆಗೆ ತಮ್ಮ ಕೈಗೆ ಮೈಕ್ ಬಂದಾಗ ಮಾತಿಗಿಳಿದರು.
Related Articles
Advertisement
ನಿರ್ದೇಶಕ ಮೌರ್ಯ, “ಪ್ರಥಮ್‌ನಂತಹ ವಿಶಿಷ್ಟ ಮ್ಯಾನರಿಸಂ ವ್ಯಕ್ತಿ ಇಟ್ಟುಕೊಂಡು ಚಿತ್ರ ಮಾಡಿದ್ದೇನೆ. ಮನರಂಜನೆ ಜೊತೆಗೆ ಎಮೋಷನ್ಸ್ ಇದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗೋ ಕಥೆ ಇಲ್ಲಿದೆ. “ಎಂಎಲ್‌ಎ’ ಅಂದರೆ, ಮದರ್ ಪ್ರಾಮೀಸ್ ಲೆಕ್ಕಕ್ಕೆ ಸಿಗದ ಆಸಾಮಿ ಎಂದರ್ಥ. ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರನ್ನು ಕೂರಿಸಿ,”ಮನುಷ್ಯರಿಗೆ ಆಸೆ ಇದ್ದರೆ ಏನೆಲ್ಲಾ ಆಗುತ್ತೆ ಎಂಬ ಕಥೆ’ ಹೇಳಿರುತ್ತಾರೆ. ಆ ಕಥೆಯ ಎಳೆ ಇಟ್ಟು ಮಾಡಿದ ನೀಟ್ ಫನ್ ಸಿನಿಮಾವಿದು’ ಅಂದರು ಮೌರ್ಯ.
ರೇಖಾ ಅವರದು ನೆಗೆಟಿವ್ ಪಾತ್ರ ಅಂತ ಮೊದಲು ನಿರ್ದೇಶಕರು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ರೇಖಾ, “ನಾನು ಇಲ್ಲಿ ವಿಲನ್ ಅಲ್ಲ. ಒಂದು ಸ್ಟ್ರಾಂಗ್ ಪಾತ್ರ ಮಾಡಿದ್ದೇನೆ’ಎಂದು ಸ್ಪಷ್ಟಪಡಿಸಿದರು. ಒಂದು ಸಂದೇಶ ಸಾರುವ ಚಿತ್ರವಿದು ಅಂತ ಹೇಳಿ ನಾಯಕಿ ಕೈಗೆ ಮೈಕ್ ಕೊಟ್ಟರು.
ಸೋನಾಲ್‌ಗೆ ನಿರ್ದೇಶಕರು ಐದು ವರ್ಷದಿಂದ ಪರಿಚಯವಂತೆ. ನಾನು ನಿರ್ದೇಶಕನಾದರೆ, ನೀನೇ ನಾಯಕಿ ಅಂದಿದ್ದರಂತೆ. ಅದರ ಪ್ರಕಾರ ನಾಯಕಿಯನ್ನಾಗಿಸಿದ್ದಾರೆ ಅಂತ ಖುಷಿಗೊಂಡರು ಸೋನಾಲ್. ಛಾಯಾಗ್ರಾಹಕ ಕೃಷ್ಣಸಾರಥಿ, ಸಂಗೀತ ನಿರ್ದೇಶಕ ವಿಕ್ರಮ್ ಸುಬ್ರಹ್ಮಣ್ಯ, ನಾಗೇಂದ್ರ ಪ್ರಸಾದ್, ಕೆ.ಪಿ.ಶ್ರೀಕಾಂತ್ ನಿರ್ಮಾಪಕದ್ವಯರಾದ ವೆಂಕಟೇಶ್‌ರೆಡ್ಡಿ, ವೆಂಕಿ ಇತರರು ಇದ್ದರು.
– ವಿಜಯ್ ಭರಮಸಾಗರ