Advertisement

ತಾಲೂಕಿನ ವಿವಿಧೆಡೆ 1.16 ಕೋಟಿ ರೂ. ಕಾಮಗಾರಿಗೆ ಶಾಸಕ ಮಂಜುನಾಥ್ ಚಾಲನೆ

08:50 PM Feb 02, 2022 | Team Udayavani |

ಹುಣಸೂರು : ತಾಲೂಕಿನ ಮೂರು ಗ್ರಾಮಗಳ ಅಭಿವೃದ್ದಿಗೆ ಎಸ್‌ಇಪಿ-ಟಿಎಸ್‌ಪಿ ಯೋಜನೆಯಡಿ 1.16 ಕೋಟಿರೂ ಮಂಜೂರಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಸ್ಥಳೀಯರು ಒತ್ತವರಿ ತೆರವುಗೊಳಿಸಿ ಸಹಕಾರ ನೀಡಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಮನವಿ ಮಾಡಿದರು.

Advertisement

ಬುಧವಾರ ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರದ ಪರಿಶಿಷ್ಟ ಪಂಗಡ ಕಾಲೋನಿಗೆ 35 ಲಕ್ಷ ರೂ ಹಾಗೂ ಹೊಸ ಬಡಾವಣೆಗೆ 26.11 ಲಕ್ಷ, ದೇವಗಳ್ಳಿ ಬೋವಿ ಕಾಲೋನಿಗೆ 15 ಲಕ್ಷ, ಗೌರಿಪುರ ಪರಿಶಿಷ್ಟ ಜಾತಿ ಕಾಲೋನಿಗೆ 20 ಲಕ್ಷ, ಪರಿಶಿಷ್ಟ ಪಂಗಡ ಕಾಲೋನಿಗೆ 20 ಲಕ್ಷರೂ ಸೇರಿದಂತೆ 1.16 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.

ಗೌರಿಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕರು ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯನವರ ಸಹಕಾರದಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಕೆಲ ಹಳ್ಳಿಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಹ ಹಂತಹಂತವಾಗಿ ಕೈಗೊಳ್ಳುವುದಾಗಿ ತಿಳಿಸಿದರು.

ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರ ವಿವೇಕ್ ಹಾಗೂ ಇಲಾಖೆಯ ಎಇಇ ಭೋಜರಾಜ್‌ರಿಗೆ ಸೂಚಿಸಿ ಗ್ರಾಮಸ್ಥರು ಕೂಡ ಕಾಮಗಾರಿ ನಡೆಸಲು ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿ, ಕಾಮಗಾರಿ ನಡೆಯುವ ವೇಳೆ ಹಳ್ಳಿಗರು ಉಸ್ತುವಾರಿ ವಹಿಸುವಂತೆ ಸೂಚಿಸಿದರು.

ಇದನ್ನೂ ಓದಿ : ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್

Advertisement

ಇದೇ ವೇಳೆ ದೇವಗಳ್ಳಿ ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆಗೆ ಶಾಸಕರ ನಿಧಿಯಿಂದ ೬ ಲಕ್ಷ ರೂ ಅನುದಾನ ನೀಡುವುದಾಗಿ ಪ್ರಕಟಿಸಿ, ಈ ಕಾಮಗಾರಿ ಜೊತೆಗೆ ಗ್ರಾಮದಲ್ಲಿ ಉಳಿದ ಕಾಮಗಾರಿಯನ್ನು ಸಹ ಮುಗಿಸಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ನಂದೀಶ್, ಉಪಧ್ಯಕ್ಷೆ ಗೌರಮ್ಮ, ಸದಸ್ಯರಾದ ವೀರಭದ್ರಸ್ವಾಮಿ, ಗೋವಿಂದಶೆಟ್ಟಿ, ವಿಜೇಂದ್ರಕುಮಾರ್, ಮನುಕುಮಾರ್, ರಾಮಬೋವಿ, ಶಾಂತಿ, ಉದ್ದೂರು ಕಾವಲ್ ಗ್ರಾ.ಪಂ.ಅಧ್ಯಕ್ಷೆ ಸಿಂಗರಮಾರನಹಳ್ಳಿ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀ ಸುರೇಶ್, ಮಾಜಿ ಸದಸ್ಯರಾದ ಮುಖಂಡರಾದ ಮಂಜು, ಧರ್ಮಪುರ ಮಹದೇವ್, ಶೇಖರ್ ಕುಮಾರಸ್ವಾಮಿ, ಪಳನಿ, ಬಿಇಓ ನಾಗರಾಜ್, ಎಇಇಗಳಾದ ಭೋಜರಾಜ್, ಪ್ರಭಾಕರ್, ಇಂಜಿನಿಯರ್ ಚಂದ್ರಶೇಖರ್‌ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಮುಖಂಡರಾದ ಜವರನಾಯಕ, ಮಾ.ತಾ.ಪಂ.ಸದಸ್ಯ ದೇವರಾಜ್, ಅಜ್ಗರ್‌ಪಾಷ ಸೇರಿದಂತೆ ಮುಖಂಡರು, ಆಯಾ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next