Advertisement

ಪುನರ್ವಸತಿ ಕೇಂದ್ರಕ್ಕೆ ಶಾಸಕ ಮಹೇಶ್‌ ಭೇಟಿ

09:13 PM Aug 13, 2019 | Lakshmi GovindaRaj |

ಕೊಳ್ಳೇಗಾಲ: ಪ್ರವಾಹದಿಂದ ರಕ್ಷಣೆ ಮಾಡಿ ಗ್ರಾಮಸ್ಥರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿದ್ದ ಗ್ರಾಮಸ್ಥರನ್ನು ಶಾಸಕ ಎನ್‌.ಮಹೇಶ್‌ ಭೇಟಿ ನೀಡಿ ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದರು. ಮಂಗಳವಾರ ಪಟ್ಟಣದ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯದ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಶಾಸಕರು ಗ್ರಾಮಸ್ಥರಿಂದ ಕುಂದು-ಕೊರತೆಯನ್ನು ಆಲಿಸಿ, ಊಟ, ಉಪಚಾರದ ಬಗ್ಗೆ ವಿಚಾರಣೆ ಮಾಡಿದರು.

Advertisement

ಬೆಳ ಗ್ಗೆ ಪುನರ್ವಸತಿ ಕೇಂದ್ರದಲ್ಲಿ ಉಪಹಾರವನ್ನು ಸೇವಿಸಿದ ಶಾಸಕರು ಉಪಹಾರ ಚೆನ್ನಾಗಿ ತಯಾರಿಸಿದ್ದು, ಅಧಿಕಾರಿಗಳ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಬಿಸಿಎಂ ವಿದ್ಯಾರ್ಥಿ ನಿಲಯ, ಮುಳ್ಳೂರು ಸರ್ಕಾರಿ ಶಾಲೆ, ಮಹದೇಶ್ವರ ಕಲ್ಯಾಣ ಮಂಟಪಗಳಲ್ಲಿ ಸ್ಥಾಪಿತ ಗೊಂಡಿರುವ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ನೀರು ಸಂಪೂರ್ಣ ಕಡಿಮೆಯಾದ ಬಳಿಕ ಗ್ರಾಮಕ್ಕೆ ಸುರಕ್ಷಿತವಾಗಿ ಹೋಗಬೇಕು.

ಅಲ್ಲಿಯವರೆಗೆ ಪುನರ್ವಸತಿ ಕೇಂದ್ರದಲ್ಲಿ ಇದ್ದು, ಊಟ, ಉಪಚಾರವನ್ನು ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರು ಪ್ರವಾಹ ನುಗ್ಗಿದ ನಂಜನಗೂಡಿಗೆ ಭೇಟಿ ನೀಡಿ ಪರಿಶೀಲನೆಯ ಬಳಿಕ ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆ ನವೀಕರಣಕ್ಕೆ ಒಂದು ಲಕ್ಷ, ನೊಂದವರಿಗೆ 10 ಸಾವಿರ ಪರಿಹಾರ ಘೋಷಣೆ ಮಾಡಿದ್ದು, ಮುಖ್ಯಮಂತ್ರಿಗಳ ಘೋಷಣೆ ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಅನ್ವಯವಾಗಿರುವುದರಿಂದ ನಿರಾಶಿತ್ರರಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಕಾವೇರಿ ನದಿಯ ತೀರದ ಗ್ರಾಮಗಳಿಗೆ ಪ್ರವಾಹ ನುಗ್ಗದಂತೆ ತಡೆಗೋಡೆ ಹಾಕಿ ಶಾಶ್ವತ ಪರಿಹಾರ ಕಂಡು ಹಿಡಿಯುವ ಸಲುವಾಗಿ ಅದರ ಅಂದಾಜು ವೆಚ್ಚ ತಯಾರಿಸಿ ಮುಖ್ಯಮಂತ್ರಿಗಳ ಗಮನ ಸೆಳೆದು ಕೂಡಲೇ ತಡೆಗೋಡೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.

ಪ್ರವಾಹದಿಂದ ವಿದ್ಯುತ್‌ ಸಂಪೂರ್ಣ ಕಡಿತ ಮಾಡಲಾಗಿದೆ. ಇದರಿಂದ ಪಟ್ಟಣ ಪ್ರದೇಶಗಳಿಗೂ ಕುಡಿಯುವ ನೀರಿನ ತೊಂದರೆಯಾಗಿದ್ದು, ಕಾವೇರಿ ನೀರು ಇಳಿಮುಖವಾಗಿದ್ದು, ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನಲ್ಲಿ ಯಾವುದೆ ತರಹದ ಆಡಚಣೆ ಉಂಟಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಯಳಂದೂರು ತಹಶೀಲ್ದಾರ್‌ ವರ್ಷ, ಸಮಾಜ ಕಲ್ಯಾಣಾಧಿಕಾರಿ ಜಯಕಾಂತ ಮತ್ತು ಮುಖಂಡರು, ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next