Advertisement

ರಮೇಶ್‌ಗೆ ಸಚಿವ ಸ್ಥಾನದ ಭರವಸೆ: ವರಿಷ್ಠರಿಂದ ಈಡೇರಿಕೆ; ಶಾಸಕ ಮಹೇಶ್‌ ಕುಮಟಹಳ್ಳಿ

08:11 PM Dec 29, 2022 | Team Udayavani |

ಸುವರ್ಣ ವಿಧಾನಸೌಧ: ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಆ ಭರವಸೆ ಈಡೇರಿಸುತ್ತಾರೆಂದು ಅಥಣಿ ಶಾಸಕ ಮಹೇಶ್‌ ಕುಮಟಹಳ್ಳಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಅದನ್ನು  ಈಡೇರಿಸುತ್ತಾರೆ. ತಾನೂ ಕೂಡ ಸುಮ್ಮನೆ ಕುಳಿತಿಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.

ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನೀಡುವ ಸಂಬಂಧ ಪ್ರತಿಕ್ರಿಯಿಸಿ, ಅವರು ಎಂಎಲ್ಸಿ, ನಾನು ಎಂಎಲ್ಸ್‌ ಎ ಇದ್ದೇನೆ. ಇಬ್ಬರೂ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಟಿಕೆಟ್‌ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ಒಬ್ಬರಿಗೆ ಎಂಎಲ್ಸಿ, ಎಂಎಲ್ಸ್‌ ಎ ಟಿಕೆಟ್‌ ಕೊಡುತ್ತಾರೆ. ವರಿಷ್ಠರು ಏನು ಹೇಳುತ್ತಾರೊ ಅದರಂತೆ ನಡೆದುಕೊಳ್ತೇವೆ. ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

ಅಧಿವೇಶನ ಮೊಟಕು ಬೇಡ- ಪ್ರಿಯಾಂಕ್‌ ಖರ್ಗೆ:

ಸುವರ್ಣ ವಿಧಾನಸೌಧ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಸದನ ಮೊಟಕು ಮಾಡಬೇಡಿ ಎಂದು ಸ್ಪೀಕರ್‌ ಅವರಿಗೆ  ಮನವಿ ಮಾಡಿದ್ದೆವು. ಆದರೂ, ಮೊಟಕುಗೊಳಿಸಿದ್ದಾರೆಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸದನ ಮೊಟಕು ಮಾಡುವುದು ಬೇಡವೆಂದು ಹೇಳಿದ್ದೆವು. ಉತ್ತರ ಕರ್ನಾಟಕದ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆಯಾಗಬೇಕು ಅಂತ ಒತ್ತಾಯಿಸಿದ್ದೆವು. ಮೊನ್ನೆ ಸಿಎಂ ದೆಹಲಿಗೆ ಹೋದರು, ಈಗ ಸದನ ಮೊಟಕು ಮಾಡಿದರು ಎಂದರು.

ಕಾಂಗ್ರೆಸ್‌ನವರು ಧ್ವನಿ ಎತ್ತಲಿಲ್ಲ ಎಂದು ಹೇಳುತ್ತೀರ. ಅಜೆಂಡಾದಲ್ಲಿ ಮೊದಲ ಪ್ರಶ್ನೆಯೇ ರೈತರ ವಿಚಾರವಿತ್ತು. ರೈತರ ಸಮಸ್ಯೆ, ಪಶು ರೋಗಗಳ ಬಗ್ಗೆ ಇತ್ತು. ಅದರ ಮಧ್ಯೆ ಸ್ಪೀಕರ್‌ ಪೂರಕ ಕಾರ್ಯಸೂಚಿ ತಂದು, ರೈತರ ವಿಷಯ ಮುಂದಕ್ಕೆ ಹಾಕಿದರು. ಕುಕ್ಕರ್‌ ಬ್ಲಾಸ್ಟ್‌ ಚರ್ಚೆ ಬೇಕಿತ್ತಾ? ಆ ವಿಚಾರ ಮೊದಲಿಗೆ ತಂದರು. ಸದನ ನಡೆಸುವ ಪ್ರಾಥಮಿಕ ಜವಾಬ್ದಾರಿ ಸ್ಪೀಕರ್‌ ಅವರದ್ದು, ರೈತರ, ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ. ಚಿಲುಮೆ ಸಂಸ್ಥೆ ಹಗರಣ, ಮಹದಾಯಿ ವಿಚಾರ ಚರ್ಚೆ ಆಗಲಿಲ್ಲ. ಪಿಎಸ್‌ಐ ಹಗರಣ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಅಸಮಾಧಾನ ಹೊರಹಾಕಿದರು.

ಮಂಡ್ಯ ಎಚ್‌ಡಿಡಿ-ಎಚ್‌ಡಿಕೆ ಭದ್ರಕೋಟೆ: ಅನ್ನದಾನಿ:

ಸುವರ್ಣ ವಿಧಾನಸೌಧ: ಮಂಡ್ಯ ಜೆಡಿಎಸ್‌ ಭದ್ರಕೋಟೆ. ಅಷ್ಟೇ ಅಲ್ಲ, ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಭದ್ರಕೋಟೆಯೂ ಹೌದು. ಯಾರೇ ದಂಡೆತ್ತಿ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂದು ಜೆಡಿಎಸ್‌ ಶಾಸಕ ಅನ್ನದಾನಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಯವರನ್ನು ಬಿಜೆಪಿಯವರು ನೆನೆಯಬೇಕು. ಎಲ್ಲೋ ಇದ್ದವರನ್ನ ಅಧಿಕಾರಕ್ಕೆ ತಂದವರು ಕುಮಾರಸ್ವಾಮಿ. ಯಾರೇ ದಂಡೆತ್ತಿ ಬರಲಿ ರಾಮನಗರ, ಮಂಡ್ಯ ದೇವೇಗೌಡರ ಭದ್ರಕೋಟೆ. ಗೌಡರ ಭದ್ರಕೋಟೆ ಅಲ್ಲಾಡಿಸೋಕೆ ಆಗಲ್ಲ. ಯೋಗಿನಾದ್ರೂ ಕರೆತನ್ನಿ, ಜೋಗಿಯನ್ನಾದ್ರೂ ಕರೆತನ್ನಿ. ಅದಕ್ಕೆಲ್ಲ ದೇವೇಗೌಡರು ಸೊಪ್ಪು ಹಾಕಲ್ಲ. ಇಲ್ಲಿರುವವರಿಗೆ ಕಿತ್ತು ಹಾಕೋಕೆ ಆಗಲಿಲ್ಲ. ಇನ್ನು ಅಲ್ಲಿಂದ ಬಂದು ಏನು ಅಲ್ಲಾಡಿಸುತ್ತಾರೆ ಎಂದರು

ಬಿಜೆಪಿಯವರು ಮಾತೆತ್ತಿದರೆ ಹಿಂದೂ, ಹಿಂದುತ್ವ ಅಂತ ಹೇಳುತ್ತಾರೆ. ನಾವೇನು ಕ್ರಿಶ್ವಿ‌ಯನ್ನರಾ? ಮುಸ್ಲಿಂರಾ?. ನಾವು ಹಿಂದೂಗಳೇ, ಗೌಡರು ಹಿಂದೂಗಳೇ ಬಿಜೆಪಿಯವರೇನು  ಪದೇ ಪದೇ ಹಿಂದು ಅಂತ ಹೇಳ್ಳೋದು. ಸಂವಿಧಾನವನ್ನ ಯಥಾವತ್‌ ಅಳವಡಿಸಿಕೊಳ್ಳಬೇಕು

ಅದರಂತೆ ಆಡಳಿತ ನಡೆಸಬೇಕು. ಅಮೆರಿಕಾ ಕ್ರಿಶ್ವಯನ್ನರ ದೇಶ, ದುಬೈ ಮುಸ್ಲಿಂರ ದೇಶ ಅಲ್ಲವೇ. ಅÇÉೆಲ್ಲ ಹಿಂದುಗಳು ಇಲ್ಲವೇ ಅವರ ಪರಿಸ್ಥಿತಿ ಏನಾಗಬೇಕು. ಮೊದಲು ಇಲ್ಲಿನ  ಜಾತಿವ್ಯವಸ್ಥೆ ಕಿತ್ತು ಹಾಕಿ. ನಿಮ್ಮ ಕೆಲಸ ಮಾಡೋಕೆ ದಲಿತರು ಬೇಕು. ಕುಂಬಾರ, ಚಮ್ಮಾರರು ನಿಮಗೆ ಬೇಕು. ಅವರ ಸಾಮಾಜಿಕ ನ್ಯಾಯ ಕೊಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next