Advertisement

ಜೆಡಿಎಸ್‌ ಅಭ್ಯರ್ಥಿ ಬಗ್ಗೆ ಯಾವುದೇ ಬದಲಾವಣೆ ಇಲ್ಲ

02:33 PM Mar 04, 2023 | Team Udayavani |

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ನಾಯಕರು ಘೋಷಣೆ ಮಾಡಿರುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನನಗೆ ಸಿಗಲಿದೆ ಎಂದು ಶಾಸಕ ಎಂ.ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

Advertisement

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಜೆಡಿಎಸ್‌ ಸಹಯೋಗದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿವಿಗೊಡಬೇಡಿ: ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಖುದ್ದು ಅವರೇ ಮಂಡ್ಯ ವಿಧಾನ ಸಭಾ ಕ್ಷೇತ್ರದ ಅ ಧಿಕೃತ ಅಭ್ಯರ್ಥಿ ನೀನೇ ಎಂಬ ಮಾತು ಹೇಳಿದ್ದಾರೆ. ಇದರಿಂದ ಅಭ್ಯರ್ಥಿ ಬದಲಾ ವಣೆ ಬಗ್ಗೆ ಯಾವುದೇ ಗೊಂದಲ ಬೇಡ. ಕೆಲವರು ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸಿ ಪ್ರತ್ಯೇಕ ಸಭೆ ಮತ್ತು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಒಗ್ಗೂಡಿಸಿ: ಈ ಬಾರಿ ಚುನಾವಣೆ ಅಷ್ಟು ಸುಲಭವಲ್ಲ. ಎದುರಾಳಿಗಳು ಎಲ್ಲರೂ ಹಣವಂತರೇ. ಹೀಗಾಗಿ ಜಾಗೃತವಾಗಿ ಚುನಾವಣೆ ಎದುರಿಸ ಬೇಕು. ಹಿಂದೆ ನಾವು ಎಲ್ಲೆಲ್ಲಿ ಕಡಿಮೆ ಲೀಡ್‌ ಬಂದಿದೆ. ಅಲ್ಲಿ ನಾವು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ, ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲಾ ವಾರ್ಡಿನ ಮನೆಗೂ ಜೆಡಿಎಸ್‌ ಸಾಧನೆ ತಿಳಿಸಲು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡ ಬೇಕು. ಕ್ಷೇತ್ರದಲ್ಲಿ ಎಂ.ಶ್ರೀನಿವಾಸ್‌ ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. 3 ಬಾರಿ ಶಾಸಕರಾಗಿ ಹೆಸರು ಮಾಡಿದ್ದಾರೆ. ಇವರ ಕಾರ್ಯವನ್ನು ಮತದಾರರಿಗೆ ತಿಳಿಸಬೇಕೆಂದರು.

Advertisement

ಜವಾಬ್ದಾರಿ ನಮ್ಮದು: ಕಳೆದ ವಿಧಾನಸಭೆ ಚುನಾ ವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಕೇವಲ 8 ಸಾವಿರ ಮತಗಳ ಅಂತರದ ಲೀಡ್‌ ಸಿಕ್ಕಿದೆ. ಈ ಬಾರಿ ಆ ಸಂಖ್ಯೆ 50 ಸಾವಿರ ಮತಗಳ ಅಂತರಕ್ಕೇರ ಬೇಕು. ಇದು ಒಬ್ಬರು ಇಬ್ಬರಿಂದ ಆಗುವ ಕೆಲಸ ವಲ್ಲ. ಎಲ್ಲರೂ ಒಗ್ಗೂಡಿದಾಗ ಮಾತ್ರ ನಾವು ಗೆಲ್ಲಲು ಸಾಧ್ಯ. ಸತತ ಮೂರು ಬಾರಿ ಜಯಭೇರಿ ಬಾರಿಸಿರುವ ಶಾಸಕ ಎಂ.ಶ್ರೀನಿವಾಸ್‌ ಜನಾನುರಾಗಿ ಕೆಲಸ ನಿರ್ವಹಿಸಿರುವ ಅವರನ್ನು ನಾಲ್ಕನೇ ಬಾರಿಯೂ ಗೆಲ್ಲಿಸುವ ಮೂಲಕ ಸಚಿವರ ನ್ನಾಗಿ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಜೆಡಿಎಸ್‌ ಮಹಿ ಳಾಧ್ಯಕ್ಷೆ ಮಂಜುಳಾ ಉದಯ ಶಂಕರ್‌, ನಗರ ಘಟ ಕದ ಅಧ್ಯಕ್ಷ ಎಸ್‌.ಪಿ.ಗೌರೀಶ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ನಗರಸಭೆ ಸದಸ್ಯರಾದ ನಾರಾಯಣ್‌, ನಾಗೇಶ್‌, ಮುಖಂಡ ರಾದ ಲೋಕೇಶ್‌, ಎಚ್‌.ಎನ್‌.ಯೋಗೇಶ್‌, ಗೌರೀಶ್‌, ಜಯರಾಂ, ವಿಶಾಲರಘು ಇದ್ದರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್‌ ಅಭ್ಯರ್ಥಿಯಾಗಿದ್ದು, ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಮುಂದಿನ ಒಂದು ವಾರದೊಳಗೆ ವರಿಷ್ಠರೇ ಎಲ್ಲರನ್ನು ಸಭೆಗೆ ಕರೆದು ಗೊಂದಲ ನಿವಾರಣೆ ಮಾಡಲಿದ್ದಾರೆ. -ಎಚ್‌.ಎನ್‌.ಯೋಗೇಶ್‌, ಜಿಪಂ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next