Advertisement
ಕೆಲಸ-ಕಾರ್ಯವಿಲ್ಲದೆ, ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದುವ ಒಳ್ಳೆ ಹುಡ್ಗ ಪ್ರಥಮ್‌ಗೆ ಒಂದಷ್ಟು ತರಲೆ ಸ್ನೇಹಿತರು. ಹೀಗೆ ಒಂದಷ್ಟು ತರಲೆ ಕೆಲಸಗಳನ್ನು ಮಾಡಿಕೊಂಡಿರುವಾಗಲೇ ನಡುವೆ ಸಿಗುವ ಹುಡುಗಿಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಇದೇ ಹೊತ್ತಿಗೆ ಚುನಾವಣೆ ಕೂಡ ಘೋಷಣೆಯಾಗುತ್ತದೆ. ಅಚಾನಕ್ ಆಗಿ ನಡೆಯುವ ಸನ್ನಿವೇಶದಲ್ಲಿ ಒಳ್ಳೆ ಹುಡ್ಗ ಪ್ರಥಮ್ ಹಾಲಿ ನಗರಾಭಿವೃದ್ಧಿ ಸಚಿವರ ವಿರುದ್ದ ಚುನಾವಣೆಗೆ ನಿಲ್ಲಬೇಕಾಗುತ್ತದೆ.
Related Articles
Advertisement
ಅದನ್ನೂ ಹೊರತುಪಡಿಸಿದರೆ, ಚಿತ್ರದ ಬೇರಾವ ಸಂಗತಿಗಳು ಗಮನ ಸೆಳೆಯುವುದಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಪ್ರಥಮ್ ಬಿಗ್‌ಬಾಸ್ ಮನೆಯೊಳಗೆ-ಹೊರಗೆ ಹೇಗೆ ವರ್ತಿಸುತ್ತಿದ್ದರೊ ಅದೇ ವರ್ತನೆ ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ನಾಯಕಿ ಸೋನಾಲ್ ಮೊಂತೆರೋ ಮತ್ತು ರೇಖಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಪ್ರೇಕ್ಷಕರನ್ನು ನಗಿಸುವ ಸಲುವಾಗಿಯೇ ಸೃಷ್ಟಿಸಿದ ಕುರಿ ಪ್ರತಾಪ್ ಮತ್ತಿತರ ಪಾತ್ರಗಳು ಅಲ್ಲಲ್ಲಿ ಒಂದಷ್ಟು ನಗುತರಿಸುತ್ತವೆ.
ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ವಿಕ್ರಮ್ ಸುಬ್ರಮಣ್ಯ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿವೆ. ಕೃಷ್ಣ ಸಾರಥಿ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಕೆ.ಆರ್ ಲಿಂಗರಾಜು ಸಂಕಲನ ಕೆಲವು ಕಡೆಗಳಲ್ಲಿ ಇನ್ನಷ್ಟು ಮೊನಚಾಗಿದ್ದರೆ, ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗುವವರಿಗೆ “ಎಂ.ಎಲ್.ಎ’ ಹಿಡಿಸುವುದು ತುಸು ಕಷ್ಟ ಎನ್ನಬಹುದು.
ಚಿತ್ರ: ಎಂಎಲ್ಎನಿರ್ಮಾಣ: ವೆಂಕಟೇಶ್ ರೆಡ್ಡಿ
ನಿರ್ದೇಶನ: ಮೌರ್ಯ
ತಾರಾಗಣ: ಪ್ರಥಮ್, ಸೋನಾಲ್ ಮಂತೇರೋ, ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್ ಪಡೀಲ್, ಚಂದ್ರಕಲಾ ಮೋಹನ್, ಕುರಿರಂಗ, ಹೆಚ್.ಎಂ ರೇವಣ್ಣ ಮತ್ತಿತರರು. * ಜಿ.ಎಸ್.ಕಾರ್ತಿಕ ಸುಧನ್