ಬೆಳಗಾವಿ: ಕರ್ನಾಟಕ ರಾಜ್ಯದಲ್ಲೇ ಬೆಳಗಾವಿ ಇರೋದು, ಪಾಲಿಕೆ ಬೆಳಗಾವಿದು, ಇಲ್ಲಿ ರಾಜ್ಯ ಧ್ವಜ ಬಿಟ್ಟು ಬೇರೆ ಧ್ವಜ ಬರಲು ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.
ಬೆಳಗಾವಿ ಪಾಲಿಕೆ ಮೇಲೆ ನಾಡ ಧ್ವಜ ತೆಗೆಯಬೇಕು ಎಂಬ ಎಂಇಎಸ್ ಮುಖಂಡನ ಹೇಳಿಕೆಗೆ ತಿರುಗೇಟು ನೀಡಿರುವ ಹೆಬ್ಬಾಳ್ಕರ್, ಎಂಇಸಿ ಒಂದಾಗಲಿ ನೋಡೋಣ. ಅದರ ಬಗ್ಗೆ ನನ್ನ ವಿರೋಧವಿಲ್ಲ. ಮೂರನೇ ತಾರೀಖು ರಿಸಲ್ಟ್ ಬರುತ್ತದೆ. ಒಳ್ಳೆಯ ಸುದ್ದಿ ಕೊಡುತ್ತೇವೆ ಎಂದರು.
ಮೊದಲಿಂದಲೂ ಎಂಇಎಸ್ ನವರು ರಾಜಕೀಯ ಮಾಡ್ತಾ ಬಂದಿದ್ದಾರೆ. ಮರಾಠಿಗರು ತುಂಬ ಒಳ್ಳೆಯ ಜನ. ಅವರಿಗೆ ರಾಜಕೀಯ ಬೇಡ. ನನ್ನ ಕ್ಷೇತ್ರದಲ್ಲೇ ಒಂದು ಲಕ್ಷ ಮರಾಠಿ ಮತದಾರು ಇದ್ದಾರೆ. ಅವರಿಗೆ ರಾಜಕೀಯ ಬೇಡ. ಅದರ ಬಗ್ಗೆ ಆಸಕ್ತಿ ಇಲ್ಲವೇ ಇಲ್ಲ. ಆದ್ರೆ ಎಂಇಎಸ್ ಮುಖಂಡ ಬೆಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇದು ಎಲ್ಲಾ ಮರಾಠಿಗರಿಗೆ ಗೊತ್ತಿದೆ ಎಂದರು.
ಅವರು ಈ ಪಕ್ಷ ಮತ್ತು ಆ ಪಕ್ಷದಿಂದ ಲಾಭ ತೆಗೆದುಕೊಳ್ಳುತ್ತಿದ್ದಾರೆ. ಎಲೆಕ್ಷನ್ ಬರಲಿ ಯಾವ ರೀತಿ ಲಾಭ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತೇನೆ. ಫಸ್ಟ್ ಟೈಮ್ ಬೆಳಗಾವಿ ಪಾಲಿಕೆ ಎಲೆಕ್ಷನ್ ಪಕ್ಷದ ಸಿಂಬಲ್ ಮೇಲೆ ನಡೆಯುತ್ತಿದೆ. ಇದು ಇತಿಹಾಸವಾಗಿದೆ, ಹಾಗಾಗಿ ಖುಷಿಯಿದೆ. ಚಿಹ್ನೆ ಮೇಲೆ ಮತದಾನ ನಡೆಯುತ್ತಿದೆ. ಮೊದಲು ಭಾಷೆಯ ಮೇಲೆ ಎಲೆಕ್ಷನ್ ನಡೆಯುತ್ತಿತ್ತು. ಆದ್ರೆ ಬಿಜೆಪಿಯಿಂದ ಜನ ಬೇಸತ್ತು ಹೋಗಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ನಾವು ತಯಾರಿ ಆಗಿದ್ದೇವೆ. ಎಂಇಎಸ್ ಯಾರನ್ನು ಟಾರ್ಗೆಟ್ ಮಾಡ್ತಾರೆ ಅಂತ ಮಾತಾಡಲ್ಲ. ಅವರದ್ದು ಎಲೆಕ್ಷನ್ ಅಜೆಂಡಾ ಮಾತ್ರ, ಎಲೆಕ್ಷನ್ ಮುಗಿದ ಮೇಲೆ ಎಂಇಎಸ್ ಮುಖಂಡ ಅಂಡರ್ ಗ್ರೌಂಡ್ ಆಗುತ್ತಾರೆ ಎಂದರು.