Advertisement

ಪಕ್ಷ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ ಅನಿವಾರ್ಯ

05:43 PM Nov 12, 2020 | Suhan S |

ಸೊರಬ: ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದ್ದು, ಅಭಿವೃದ್ಧಿ ಹಾಗೂ ಸಂಘಟನೆ ದೃಷ್ಟಿಯಿಂದ ಪಕ್ಷಕ್ಕೆ ನೂತನ ಪದಾ ಧಿಕಾರಿಗಳ ಆಯ್ಕೆ ಅನಿವಾರ್ಯವಾಗಿದೆ ಎಂದು ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಆಂತರಿಕ ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಸೇರಿದಂತೆ 239 ಬೂತ್‌ ಮಟ್ಟದ ಪ್ರಮುಖರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಸಂಪೂರ್ಣ ಸಹಮತವಿದೆ ಎಂದರು.

ಈ ಹಿಂದೆ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಪಕ್ಷದ ರಾಜ್ಯಾಧ್ಯಕ್ಷರು ಕಳೆದ ಏಳೆಂಟು ತಿಂಗಳು ತಡೆ ಹಿಡಿದಿದ್ದರು. ಪ್ರಸ್ತುತ ರಾಜ್ಯಾಧ್ಯಕ್ಷರ ಮತ್ತು ಪಕ್ಷದ ವರಿಷ್ಠರ ಗಮನಕ್ಕೆ ತಂದು ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ಆಂತರಿಕ ಸಂವಿಧಾನ ಬದ್ಧವಾಗಿ ತಾಲೂಕು ಮಂಡಲದ ಆಯ್ಕೆ ನಡೆದಿರುವುದು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಎಂದು ಹರ್ಷವ್ಯಕ್ತಪಡಿಸಿದ ಅವರು, ಗ್ರಾಪಂ ಚುನಾವಣೆಗಳು ಸಮೀಪಿಸುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಗೆಲ್ಲಿಸುವ ನಾಯಕತ್ವದ ಅಗತ್ಯವಿದೆ. ಮೂರ್‍ನಾಲ್ಕು ಜನರಿಗೆ ತೃಪ್ತಿ ಪಡಿಸುವ ಬದಲು, ತಾಲ್ಲೂಕಿನ ಎಲ್ಲಾ ಬೂತ್‌ನ ಪ್ರಮುಖರು ತಗೆದುಕೊಂಡ ನಿರ್ಧಾರವವನ್ನು ಒಪ್ಪಲೇಬೇಕು. ಕಾರ್ಯಕರ್ತರ ತೀರ್ಮಾನವೇಅಂತಿಮವಾಗಿದ್ದು, ಈ ನಿಟ್ಟಿನಲ್ಲಿ ಕ್ರಮಬದ್ಧವಾಗಿ ಸಮಿತಿ ರಚಿಸಲಾಗಿದೆ ಎಂದರು.

Advertisement

ಈ ಹಿಂದೆ ತಾಲೂಕಿನಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಹರತಾಳು ಹಾಲಪ್ಪ ಅವರಿಗೆ ಕೆಲವರು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದ್ದರು. ಹಾಲಪ್ಪ ಅವರು ನನ್ನೊಂದಿಗೆ ವಿಷಯವನ್ನು ನೋವಿನಿಂದ ಪ್ರಸ್ತಾಪಿಸಿದ್ದರು. ಈಗಲೂ ಅದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಪಕ್ಷದಬಲವರ್ಧನೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಧ್ಯೇಯ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಕಳೆದ ವರ್ಷ ಸುಮಾರು ಒಂದು ಸಾವಿರ ಕೋಟಿ ರೂ. ಅನುದಾನತರಲಾಗಿತ್ತು. ಮುಂದಿನ ಸಾಲಿಗೆ 1200 ಕೋಟಿ ರೂ., ಅನುದಾನ ತರುವ ಗುರಿ ಹೊಂದಲಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವೇ ನಡೆಯುತ್ತಿದೆ ಎಂದರು.

ಅಧ್ಯಕ್ಷರಾಗಿ ಸಿ.ಎನ್‌. ಕೊಟ್ರೇಶ್‌ಗೌಡ, ಉಪಾಧ್ಯಕ್ಷರಾಗಿ ಮೋಹನ್‌ ಶೇಟ್‌, ವಿನಾಯಕ ಎಚ್ಚೆ, ಮಹೇಶ್‌ ಮೂಡಿ, ದೇವಕಿ ಪಾಣಿರಾಜಪ್ಪ, ಉಮಾ ಸಕ್ರೆ, ನಾಗರಾಜ ಗೌಡ, ರಾಜಣ್ಣ ನಡಹಳ್ಳಿ, ಯಂಕೇನ್‌ ಹೂವಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಶಿವಕುಮಾರ ಕಡಸೂರು ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಘೋಷಿಸಲಾಯಿತು.

ಪಪಂ ಅಧ್ಯಕ್ಷ ಎಂ.ಡಿ. ಉಮೇಶ್‌, ಉಪಾಧ್ಯಕ್ಷ ಮಧುರಾಯ್‌ ಜಿ.ಶೇಟ್‌, ಸದಸ್ಯರಾದ ಯು. ನಟರಾಜ, ಅನ್ಸರ್‌ ಆಹ್ಮದ್‌, ಪ್ರಭು ಮೇಸ್ತ್ರಿ,

ಪ್ರೇಮಾ ಟೋಕಪ್ಪ, ಜಯಲಕ್ಷ್ಮೀ, ಪ್ರಮುಖರಾದ ಭೋಗೇಶ್‌ ಶಿಗ್ಗಾ, ಟಿ.ಆರ್‌. ಸುರೇಶ್‌, ಹಾಲಾನಾಯ್ಕ ಕುಪ್ಪಗಡ್ಡೆ, ನಂದೀಶ್‌ ಗೌಡ, ಆಶೀಕ್‌ ನಾಗಪ್ಪ, ಸುಧೀರ್‌ ಪೈ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next