Advertisement
ನಗರದ ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಅತಿವೃಷ್ಟಿ ಹಾನಿಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ನೀವು ನೀಡುವ ವರದಿ ಆಧಾರಿಸಿ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನಿಸುವೆ ಎಂದು ಹೇಳಿದರು.
Related Articles
Advertisement
ದುರಸ್ತಿಗೆ ಅಂದಾಜು ವೆಚ್ಚ: ಸಣ್ಣ ನೀರಾವರಿ ಇಲಾಖೆ ಅಭಿಯಂತರರಾದ ಸುಂದರ ರಾಜು ತಮ್ಮ ಇಲಾಖೆ ವ್ಯಾಪ್ತಿಯ 35 ಕೆರೆಗಳ ಪೈಕಿ 28 ಕೆರೆಗಳು ಭರ್ತಿಯಾಗಿದ್ದು ಕೆರೆಗಳ ದುರಸ್ತಿ ಕಾರ್ಯಕ್ಕೆ ತಲಾ 5 ಲಕ್ಷ ರೂ ಅಂದಾಜು ವೆಚ್ಚ ಬೇಕಾಗುತ್ತದೆ ಎಂದರು.
ಜಿಪಂ ವ್ಯಾಪ್ತಿಯ 126 ಕೆರೆಗಳ ಪೈಕಿ 19 ಕೆರೆಗಳು ಭರ್ತಿಯಾಗಿದ್ದು ದುರಸ್ತಿ ಕಾರ್ಯಕ್ಕೆ 290 ಲಕ್ಷ ರೂ ಬೇಕಾಗುತ್ತದೆ. 110 ಕಿ. ಮಿ ರಸ್ತೆ ಹಾಳಾಗಿದ್ದು ರಸ್ತೆ ರೀಪೇರಿಗಾಗಿ 5 ಕೋಟಿ ಹಣ ಬೇಕಾಗಿದೆ ಎಂದು ಜಿಪಂ ಎಂಜೀನಿಯರ್ ವಿಭಾಗದ ಅಭಿಯಂತರರಾದ ಬಸವರಾಜು ಮಾಹಿತಿ ನೀಡಿದರು.
ಬಿಇಒ ಮೋಹನ್ ಕುಮಾರ್ ಮಾಹಿತಿ ನೀಡಿ, ತಾಲೂಕಿನಲ್ಲಿ 119 ಶಾಲಾ ಕೊಠಡಿಗಳು ಸಂಪೂರ್ಣ ಹಾಳಾಗಿವೆ. 168 ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕಾಗಿದೆ ಒಟ್ಟು 23.50 ಕೋಟಿ ಅನುದಾನ ಬೇಕಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಂಕರಮೂರ್ತಿ ಮಾಹಿತಿ ನೀಡಿ 36 ಅಂಗನವಾಡಿ ಕಟ್ಟಡಗಳು ಶಿಥಿಲಾ ವಸ್ಥೆಯಲ್ಲಿದೆ. 67 ಕಟ್ಟಡಗಳನ್ನು ರಿಪೇರಿ ಮಾಡಿಸ ಬೇಕಾಗಿದೆ 7.31 ಕೋಟಿ ಅನುದಾನ ಬೇಕಾಗಿದೆ ಎಂದು ತಿಳಿಸಿದರು.
ಪಶುವೈದ್ಯ ಆಸ್ಪತ್ರೆ 8 ಕಟ್ಟಡ ಗಳು ಶಿಥಿಲಗೊಂಡಿದ್ದು ದುರಸ್ತಿ ಕಾರ್ಯ ಮಾಡಬೇಕಾಗಿದೆ ಎಂದು ಪಶು ವೈದ್ಯ ಇಲಾಖೆ ಡಾ. ಮಂಜುನಾಥ್ ಮಾಹಿತಿ ನೀಡಿದರು. ಸಭೆ ಯಲ್ಲಿ ಗ್ರೇಡ್-2 ತಹಶೀಲ್ದಾರ್ ಪಾಲಾಕ್ಷ ಶಿರಸ್ತೇ ದಾರ್ ತಾಪಂ ಇಒ ನಾಗರಾಜು, ಶಿವಶಂಕರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.