Advertisement
ಪಟ್ಟಣದ ಶಾಸಕರ ಜನ ಸಂಪರ್ಕ ನಿಲಯದಲ್ಲಿ ಕರೆಯಲಾಗಿದ್ದ ಪತ್ರಿಕೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಲುವೆಗಳ ಮೇಲೆ ಹೋಗಿ ರೈತರಿಗೆ ನೀರು ಬಿಡುವುದಕ್ಕೆ ಹೋದ್ರೆ ನಮ್ಮನ್ನು ನೋಡಿ ಕಾಲುವೆ ಮೇಲೆ ಬರೋದು. ಕಾರ್ಯಕರ್ತರ ಮದುವೆಗೆ ಹೋದ್ರೆ ಬರೋದು, ಕ್ಷೇತ್ರದಲ್ಲಿ ಮನೆ ಮಾಡಿದ್ರೂ ತಾನು ಮನೆ ಮಾಡುವುದು ಅದಕ್ಕಾಗಿ ಸುರೇಶ್ ಬಾಬು ಕಾಪಿ ರಾಜಕೀಯ ಮಾಡುವುದು ಕೈ ಬಿಡಲಿ ಎಂದರು.
Related Articles
Advertisement
ಇದನ್ನೂ ಓದಿ: ಕ್ಲಸ್ಟರ್ ಮಟ್ಟದ ಶಾಲೆ ಕ್ರೀಡಾಕೂಟದಲ್ಲಿ ಗಲಾಟೆ : ಕಲ್ಲು ತೂರಾಟ, ಹಲವರಿಗೆ ಗಾಯ
ಕುರುಗೋಡು ಮತ್ತು ಕಂಪ್ಲಿ ಗೆ ಮಂಜೂರಾದ 100 ಹಾಸಿಗೆವುಳ್ಳ ಆಸ್ಪತ್ರೆ ಸಚಿವ ಬಿ. ಶ್ರೀರಾಮುಲು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆಗೊಳಿಸಿ ಅನುದಾನ ಬಿಡುಗಡೆ ಗೊಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ, ಅದು ಡಿ. ಕೆ. ಶಿವುಕುಮಾರ್ ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದಾಗ ಆಗಿರೋದು ಅದಕ್ಕೆ ಸುಮಾರು 2 ವರ್ಷಗಳ ಕಾಲ ಶ್ರಮ ಪಟ್ಟಿದ್ದೇವೆ. 3 ರಿಂದ 4 ಕೋಟಿ ವೆಚ್ಚದ ಅನುದಾನ ಆದ್ರೆ ಜಿಲ್ಲಾಧಿಕಾರಿಯಿಂದ ಅನುಮೋದನೆಗೊಳ್ಳಿಸಬಹುದಿತ್ತು, ಆದ್ರೆ 20 ಕೋಟಿ ಆಗಿರುವುದರಿಂದ ಕ್ಯಾಬಿನೆಟ್ ನಲ್ಲಿ ಅನುಮೋದನೆ ಗೊಳ್ಳಬೇಕು ಅದಕ್ಕಿಂತ ಮುಂಚಿತವಾಗಿ ವಾಣಿಜ್ಯ, ಕೈಗಾರಿಕೆ, ಅರೋಗ್ಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಅನುಮತಿ ಸಿಗಬೇಕು ಇದಕ್ಕಾಗಿ 2 ವರ್ಷ ಶ್ರಮ ಪಟ್ಟು ಇಲಾಖೆವಾರು ತೆರಳಿದ್ದೇವೆ ಕ್ಷೇತ್ರದ ಜನರ ಅನುಕೂಲಕ್ಕೆ ಅಲ್ಲದೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ದಾನಿ ಮಾಡಿರುವ ಸ್ವಾಮೀಜಿಗಳ ಹತ್ತಿರ ಸುಮಾರು ಬಾರಿ ಹೋದಾಗ 6 ಎಕರೆ ನೀಡಿದ್ದಾರೆ ಇಲ್ಲ ಅಂದ್ರೆ ಕುರುಗೋಡಲ್ಲಿ ಆಸ್ಪತ್ರೆ ಆಗುತ್ತಿರಲಿಲ್ಲ ಇವಾಗ ಸುರೇಶ್ ಬಾಬು ಅವರು ಸಚಿವ ರಾಮುಲು ಮಂಜೂರು ಮಾಡಿಸಿದ್ದಾರೆ ಎಂದು ಕ್ಷೇತ್ರದ ಜನರಿಗೆ ತಿಳಿಸಲು ಹೊರಟಿರುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.
ಕಂಪ್ಲಿ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಕೊಡುಗೆ ಶೂನ್ಯ, ಕಂಪ್ಲಿ ಸೇತುವೆ ನಿರ್ಮಾಣಕ್ಕೆ ವಿಧಾನಸಭೆಯಲ್ಲಿ 3 ಬಾರಿ ದ್ವನಿ ಎತ್ತಿ ಮಾತಾಡಿದ್ದೇನೆ ಎಂದರು.
ಸುರೇಶ್ ಬಾಬು ಅವರು ನನ್ನ ತಾಕತ್ತು ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ತಾಕತ್ತು ಏನು ಅಂತ ಕ್ಷೇತ್ರದ ಜನರು ವೋಟು ಹಾಕಿ ಗೆಲ್ಲುಸಿದವರಿಗೆ ಗೊತ್ತಿದೆ. ಅಲ್ಲದೆ ಬಹಿರಂಗ ಚರ್ಚೆಗೆ ಕರೆಯುತ್ತಿದ್ದಾರೆ ಸುರೇಶ್ ಬಾಬು ಕೆಳಮಟ್ಟದ ರಾಜಕಾರಣಿ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲ್ಲ ಅವರ ಸಹೋದರ ಮಾವ ಸಚಿವ ಬಿ. ಶ್ರೀರಾಮುಲು ಅವರ ಜೊತೆಗೆ ಬಹಿರಂಗ ಚರ್ಚೆಗೆ ಬರಲು ಸಿದ್ದ ಎಂದು ಸವಾಲು ಹೊಡ್ದಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್. ನಾಗರಾಜ್, ಚನ್ನಪಟ್ಟಣ ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ,ಮುಖಂಡರಾದ ವೆಂಕಟೇಶ್ ಗೌಡ, ಜೋಗಿ ಸುಂಕಪ್ಪ, ಒಂಕಾರಪ್ಪ ಸೇರಿದಂತೆ ಇತರರು ಇದ್ದರು.