Advertisement

ಎತ್ತುಗಳ ಪ್ರದರ್ಶನಕ್ಕೆ ಮಾಜಿ ಶಾಸಕ ಕೆ.ವೆಂಕಟೇಶ್ ಚಾಲನೆ

09:14 PM Feb 09, 2022 | Team Udayavani |

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಗ್ರಾಮದ ದನಗಳ ಜಾತ್ರೆಯಲ್ಲಿ ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಸುಮಾರು 1 5 ಲಕ್ಷ ಮೌಲ್ಯದ ಹೋರಿಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆಯಲ್ಲಿ ಪ್ರದರ್ಶನ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ರೈತರು ಕೃಷಿ ಚಟುವಟಿಕೆಗೆ ಬೇಕಾದ ತಮಗೆ ಇಷ್ಟವಾದ ರಾಸುಗಳನ್ನು ಕೊಳ್ಳಲು ದನದ ಜಾತ್ರೆಗಳು ುಪಯುಕ್ತವಾಗಿದ್ದು ಪ್ರತಿ ವರ್ಷ ದನಗಳ ಜಾತ್ರೆಯಲ್ಲಿ ಪಿರಿಯಾಪಟ್ಟಣ, ಕೆ.ಆರ್.ನಗರ, ಅರಕಲಗೂಡು, ಹೊಳೆ ನರಸಿಪುರ, ಚನ್ನರಾಯಪಟ್ಟಣ, ಕೆ.ಆರ.ಪೇಟೆ ಸೇರಿದಂತೆ ಮತ್ತಿತರ ಭಾಗಗಳಿಂದ ಎತ್ತುಗಳನ್ನು (ರಾಸುಗಳನ್ನು) ಮಾರಾಟ ಮತ್ತು ಕೊಳ್ಳುವ ಚಟುವಟಿಕೆ ನಡೆಯುತ್ತಿರುತ್ತದೆ ಇಲ್ಲಿ ರೈತರು ತಮಗೆ ಬೇಕಾದ ರಾಸುಗಳನ್ನು ಕೊಂಡುಕೊಳ್ಳಲು ಈ ಜಾತ್ರೆ ಸಹಾಯಕವಾಗುತ್ತದೆ ಎಂದರು.

ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಮಾತನಾಡಿ ಕಳೆದ 8 ವರ್ಷಗಳಿಂದ ಹೋರಿಗಳನ್ನು ಸಾಕುತ್ತಾ ಬಂದಿದ್ದೇವೆ. ಸರ್ಕಾರವು ಮೂಲಭೂತ ಸೌಕರ್ಯ ಒದಗಿಸಿ ದನಗಳ ಜಾತ್ರೆ ಆಯೋಜನೆ ಮಾಡಬೇಕು ಕೊರೋನಾ ಇರುವುದರಿಂದ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದರು.

ಕೃಷಿಕರಾದ ಜಾನುವಾರು ಪ್ರಿಯರು ಭಾರೀ ಕುತೂಹಲದಿಂದ ಪ್ರದರ್ಶನ ವೀಕ್ಷಿಸಿದರು.

ಈ ಸಂದರ್ಭದಲ್ಲಿ ರೈತರಾದ ಮೈಲಾರಿಗೌಡ, ಗೋವಿಂದೇಗೌಡ, ಸಣ್ಣ ಕಾಳೇಗೌಡ, ಮಲ್ಲೇಶ್, ಪುಟ್ಟರಾಜು, ಅನಿತಾ ತೋಟಪ್ಪಶೆಟ್ಟಿ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next