Advertisement

ಪ್ರತಾಪ್‌ ಸಿಂಹ ಸಾಧನೆ ಏನೆಂದು ತಿಳಿಸಲಿ

11:13 AM Dec 04, 2020 | Suhan S |

ಹುಣಸೂರು: ತಮ್ಮ ಹಾಗೂ ಜಿಲ್ಲಾಧಿಕಾರಿಗಳ ನಡುವಿನ ವಿವಾದವನ್ನು ಸರ್ಕಾರವೇ ಇತ್ಯರ್ಥಪಡಿಸಿದೆ. ಈ ಬಗ್ಗೆ ಅರಿವಿದ್ದರೂ ಪ್ರಚಾರಕ್ಕಾಗಿ ಅನಾವಶ್ಯಕವಾಗಿ ಹೇಳಿಕೆ ನೀಡುವುದು ಸಂಸದ ಪ್ರತಾಪ್‌ ಸಿಂಹ ಅವರಿಗೆ ಶೋಭೆ ತರುವುದಿಲ್ಲ. ನನ್ನ ಸಾಧನೆ ಬಗ್ಗೆ ಪ್ರಶ್ನಿಸುವ ಮೊದಲು ನೀವು ಈ ಹತ್ತು ತಿಂಗಳಿನಲ್ಲಿ ನಿಮ್ಮ ಸಾಧನೆ ಏನೆಂಬುದನ್ನು ಜನರಿಗೆ ತಿಳಿಸಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸವಾಲು ಹಾಕಿದರು.

Advertisement

ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜನರ ಸಮಸ್ಯೆ ಆಲಿಸಲು ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ ಎಂಬಬಾಲಿಶತನದ ಹೇಳಿಕೆ ನೀಡಿರುವ ಪ್ರತಾಪ್‌ ಸಿಂಹ ತಮ್ಮ ಹತ್ತು ತಿಂಗಳಲ್ಲಿ ನೀವೇನುಮಾಡಿದ್ದೀರೆಂಬುದನ್ನುಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ ಅವರನ್ನು ನಾವು ಪ್ರಶ್ನಿಸಿದರೆ,ಅವರಪರವಾಗಿಸಂಸದರುವಕಾಲತ್ತುವಹಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಸಂಘರ್ಷಕ್ಕೆ ನೀವೇ ಎಡೆಮಾಡಿ ಕೊಡುತ್ತಿದ್ದೀರಿ.ನಾನುನಿಮ್ಮಹಾಗೆಜನಪ್ರತಿನಿಧಿಯಾಗಿದ್ದೇನೆ. ಈಗಾಗಲೆ ನೀವು ನಿಮ್ಮ ಪಕ್ಷದ ಶಾಸಕರು, ಸಂಸದರು ಮೈಸೂರಿನಲ್ಲಿ ಕಾರ್ಪೋರೆಟರ್‌ಗಳಿಗೆ ಅವಮಾನಿಸಿದ್ದೀರಾ, ನನ್ನಕೆಲಸದ ಬಗ್ಗೆ ಪ್ರಶ್ನಿಸಿದ್ದೀರಾ ಎಂದು ಹರಿಹಾಯ್ದರು.

ಜಿಲ್ಲಾಧಿಕಾರಿಗಳು ಜನಸ್ಪಂದನ ಮಾಡಲು ದೊಣ್ಣೆ ನಾಯಕನ ಅಪ್ಪಣೆಬೇಕಿಲ್ಲ ಎಂದಿದ್ದೀರಿ. ವಾಸ್ತವಾಂಶ ತಿಳಿಯದೆ ಮಾತನಾಡುತ್ತಿದ್ದೀರಾ. ಜನಸ್ಪಂದನದಲ್ಲಿ ಸ್ಥಳೀಯ ಜನಪ್ರತಿ ನಿಧಿಗಳಿದ್ದರೆ ಸುಲಲಿತವಾಗಿರುತ್ತದೆ. ವಾಸ್ತವಾಂಶ ಅರಿಯದೆ ಮಾಧ್ಯಮದ ಮುಂದೆ ಪ್ರಚಾರ ಪಡೆಯುವ ಚಟ ನಿಮಗಿದೆ ಎನಿಸುತ್ತದೆ ಎಂದರು. ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಅನುಷಾ ರಘು,ಕಾಂಗ್ರೆಸ್‌ ಅಧ್ಯಕ್ಷ ಬಸವರಾಜೇಗೌಡ ಇದ್ದರು.

ಸಂಸದರು ಮೊದಲು ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಿ :  ಹಕ್ಕುಚ್ಯುತಿ ಬಗ್ಗೆ ನಿಮ್ಮಿಂದ ಪಾಠಕಲಿಯಬೇಕಿಲ್ಲ, ಮೊದಲು ಒಬ್ಬ ಪಬ್ಲಿಕ್‌ ಸವೆಂಟ್‌ಗೂ ಜನಪ್ರತಿನಿಧಿಗೂ ಇರುವ ವ್ಯತ್ಯಾಸ ಅರಿಯಿರಿ. ಸಂಘರ್ಷಕ್ಕೆ ಎಡೆಮಾಡುವುದಾದರೆ ವೇದಿಕೆಸೃಷ್ಟಿಸೋಣ ಅಲ್ಲೇ ಚರ್ಚೆ ನಡೆಸೋಣ ಎಂದು ಎಂದು ಮಂಜುನಾಥ್‌ ತಿಳಿಸಿದರು. ನಾನು ಉಪಚುನಾವಣೆಯಲ್ಲಿ ಗೆದ್ದ ಎರಡೇ ತಿಂಗಳಿನಲ್ಲಿ ರಾಜ್ಯಕ್ಕೆ ಮಾದರಿಯಾದ ಗ್ರಾಪಂ ಕೇಂದ್ರಗಳಲ್ಲಿ ಮನೆ ಬಾಗಿಲಿಗೆ ತಾಲೂಕು ಆಡಳಿತ ಎಂಬ ವಿಶಿಷ್ಟಕಾರ್ಯಕ್ರಮ ಆಯೋಜಿಸಿ, ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವಕೆಲಸ ಮಾಡಿರುವ ಹೆಮ್ಮೆ ಇದೆ. ಆದರೆ, ಆ ಕಾರ್ಯಕ್ರಮಕೊರೊನಾದಿಂದಾಗಿ ಸ್ಥಗಿತವಾಯಿತು. ಈ ಭಾಗದಲ್ಲಿ ತಂಬಾಕು ಬೆಳೆಗಾರರು ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಮೊದಲು ಅವರ ಬಗ್ಗೆ ಗಮನಹರಿಸಿ ಎಂದು ಆಗ್ರಹಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next