Advertisement

ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ: ಬಾಲಕೃಷ್ಣ

02:21 PM May 21, 2023 | Team Udayavani |

ಮಾಗಡಿ: ಅಧಿಕಾರಕ್ಕಿಂತ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಬಹಳ ಮುಖ್ಯ ಎಂದು ಶಾಸಕ ಎಚ್‌ .ಸಿ.ಬಾಲಕೃಷ್ಣ ತಿಳಿಸಿದರು.

Advertisement

ತಾಲೂಕಿನ ತಿಪ್ಪಸಂದ್ರ ಹೋಬಳಿ ನೇರಳೆಕೆರೆ ಗ್ರಾಮದಲ್ಲಿ ತಮ್ಮ ಮನೆ ದೇವರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಆಡಳಿತರೂಢ ಪಕ್ಷದಲ್ಲಿ ಶಾಸಕರಾ ದರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸ ಬಹುದು ಎಂದು ಕನಸು ಕಂಡು ದೇವರಲ್ಲಿ ಸಂಕಲ್ಪ ಮಾಡಿಕೊಂಡಿದ್ದೆನು. ದೇವರ ದಯೆಯಿಂದ ಆಡಳಿತರೂಢ ಪಕ್ಷದ ಶಾಸಕನಾಗಿದ್ದೇನೆ. ನನಗೆ ಮಂತ್ರಿಮಂಡಲದಲ್ಲಿ ಯಾವುದೇ ಖಾತೆ ಕೊಟ್ಟರು ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ. ಮಂತ್ರಿಯಾಗುವ ಸುಯೋಗ ಒದಗಿದ್ದು, ಮನೆ ದೇವರು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಗಿ ತಿಳಿಸಿದರು.

ಜನರ ಋಣ ತೀರಿಸುವೆ: ಕ್ಷೇತ್ರದ ಮತದಾರ ಪ್ರಭುಗಳು ನನಗೆ ಬಹುಮತ ಕೊಟ್ಟು ಜಯಶೀಲರಾಗಿಸಿದ್ದಾರೆ. ಅವರ ಋಣ ನನ್ನ ಮೇಲಿದ್ದು, ಋಣ ತೀರಿಸುವ ಕೆಲಸ ಮಾಡುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ನನಗೆ ಆಶೀರ್ವದಿಸಿದ ಎಲ್ಲ ಮತದಾರರಿಗೂ ಹಗಲಿರುಳು ನನ್ನ ಗೆಲುವಿಗೆ ದುಡಿದ ಮುಖಂಡರಿಗೂ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ: ಸ್ಪಷ್ಟ ಬಹುಮತವಿರುವ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಶಕ್ತಿಮೀರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಹಿಂದುಳಿದ ಮಾಗಡಿ ಎಂಬ ಹಣೆಪಟ್ಟಿಯನ್ನು ಅಳಿಸಿ ಮುಂದುವರಿದ ಮಾಗಡಿಯನ್ನಾಗಿಸುವ ಮೂಲಕ ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಇದನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇನೆ ಎಂಬ ದೃಢವಾದ ನಂಬಿಕೆಯಿದೆ ಎಂದು ತಿಳಿಸಿದರು.

ನೀರಾವರಿ ಯೋಜನೆಗೆ ಅಸ್ತು: ಮಾಗಡಿ ತಾಲೂಕಿನ ರೈತರ ಬದುಕು ಹಸನಾಗಿಸಲು ಎಲ್ಲ ಕೆರೆಕಟ್ಟೆಗಳಿಗೂ ಹೇಮಾವತಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲು ಮೊದಲ ಆದ್ಯತೆ ಕೊಡಲಾಗುವುದು. ಅಪೂರ್ಣ ಕೆಂಪೇಗೌಡ ಕೋಟೆ ಜೀರ್ಣೋದ್ಧಾರ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಕೆಂಪೇಗೌಡರ ತವರು ಮಾಗಡಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

Advertisement

ಮುಖಂಡ ನೇರಳೆಕೆರೆ ಗಂಗಾಧರಯ್ಯ, ಶಿವಪ್ರಸಾದ್‌, ಶ್ರೀನಿವಾಸ್‌ಮೂರ್ತಿ, ಗಂಗಾಧರ್‌, ವಿನಯ್‌, ಶಶಾಂಕ್‌, ರಮೇಶ್‌, ಶಿವರಾಜು ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next