Advertisement
46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಪ್ರಸಕ್ತ 624 ಸ್ಥಾನಗಳಿಗೆ ರವಿವಾರ ಮತದಾನ ಆರಂಭಗೊಂಡಿದೆ.
Related Articles
Advertisement
ಒಟ್ಟು 1605 ಮಂದಿ ಮತಗಟ್ಟೆ ಸಿಬಂದಿಗಳನ್ನು ನೇಮಿಸಲಾಗಿದೆ. ಮತಗಟ್ಟೆ ಅಧಿಕಾರಿ-321 (ಪಿಆರ್‌ಒ), ಒಂದನೇ ಮತಗಟ್ಟೆ ಅಧಿಕಾರಿ-321 (ಎಪಿಆರ್‌ಒ), 2ನೇ, 3ನೇ ಮತಗಟ್ಟೆ ಅಧಿಕಾರಿ- 642, ಡಿ ಗ್ರೂಪ್ ಸಿಬಂದಿ- 321 ಒಟ್ಟು 1605 ಮಂದಿ ನೇಮಿಸಲಾಗಿದೆ.
ಚುನಾವಣೆಗೆ 46 ಗ್ರಾಮ ಪಂಚಾಯಿತಿಗಳನ್ನು 20 ಸೆಕ್ಟರ್ ಆಗಿ ವಿಂಗಡಿಸಲಾಗಿದೆ. ಈಗಾಗಲೇ ಅತೀ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಿವೆ. ವೇಣೂರು ಹಾಗೂ ಬೆಳ್ತಂಗಡಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಎನ್‌ಎಫ್ 2 ತಂಡ ಕಾರ್ಯಾಚರಣೆ ನಡೆಸಿದೆ. ಇದನ್ನೂ ಓದಿ:ಗ್ರಾ.ಪಂ. ಚುನಾವಣೆ: ಎರಡನೇ ಹಂತದ ಮತದಾನ ಆರಂಭ 1 ಡಿವೈಎಸ್ಪಿ, 2 ಸಿಪಿಐ, 8 ಪಿಎಸ್‌ಐ, 12 ಎಎಸ್‌ಐ, 22 ಮಂದಿ ಎಚ್‌ಸಿ ಮತ್ತು ಪಿಸಿಗಳು 92 ಹಾಗೂ 170 ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್ ಪಿ ಒಂದು ತಂಡ ಮತ್ತು ಜಿಲ್ಲಾ ಸಶಸ್ತ್ರ ಪಡೆಗಳು 4 ತಂಡಗಳು ಚುನಾವಣೆಗೆ ನಿಯೋಜಿಸಲಾಗಿದೆ. ಮದುವೆ ಸಂಭ್ರಮದ ಮಧ್ಯೆ ಬಂದು ಮತಹಾಕಿದ ಸಹೋದರಿಯರು
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಇಬ್ರಾಹಿಂ ಕೂಳೂರು ಅವರ ಇಬ್ಬರು ಮಕ್ಕಳಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆ ಮುಂಡಾಜೆ ಗ್ರಾಮದ 103 ಭಾಗ ಸಂಖ್ಯೆಯ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆದರು.