Advertisement
2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್. ಎಸ್.ಪ್ರಕಾಶ್ ಅವರು ಪ್ರೀತಂಗೌಡ ಅವರೆದುರು ಸೋಲು ಅನುಭವಿಸಿದ್ದರು. ಅನಾರೋಗ್ಯದಿಂದ ಪ್ರಕಾಶ್ ಅವರು ಚೇತರಿಸಿ ಕೊಳ್ಳುತ್ತಿದ್ದ ಸಂದರ್ಭ ದಲ್ಲಿಯೇ ಪ್ರಕಾಶ್ ಅವರಿಗೆ ಸೋಲು ತೀವ್ರ ಆಘಾತವ ನ್ನುಂಟು ಮಾಡಿತ್ತು. ಹ್ಯಾಟ್ರಕ್ ಗೆಲುವು ಸೇರಿ 4 ಬಾರಿ ಗೆದ್ದು ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದು, ಹಾಸನ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದ ಸಂದರ್ಭ, ಅದೂ ಆಲ್ಲದೇ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸುಸಂದರ್ಭದಲ್ಲಿ ಹಾಸನ ಕ್ಷೇತ್ರದ ರಾಜಕಾ ರಣದಲ್ಲಿ ಅಂಬೆಗಾಲಿಟ್ಟಿದ್ದ ಯುವಕ ಪ್ರೀತಂಗೌಡ ಅವರೆದುರು ಸೋತು ಹೋದ ನೋವಿನಿಂದ ಪ್ರಕಾಶ್ ಅವರು ಇಹಲೋಕ ತ್ಯಜಿಸಿದರು.
Related Articles
Advertisement
ಹಾಸನ ನಗರಸಭೆಗೆ ಸುತ್ತಮುತ್ತಲಿನ 25 ಗ್ರಾಮಗಳ ಅಧಿಕೃತವಾಗಿ ಸೇರ್ಪಡೆಯಾಗಿದೆ. ಆ ಗ್ರಾಮಗಳಲ್ಲಿ ನಾಗರಿಕ ಸೌಲಭ್ಯ ಕಲ್ಪಿಸುವ ಯೋಜನೆ ರೂಪುಗೊಂಡು ಅನುಷ್ಠಾನ ಆಗಬೇಕಾಗಿದೆ. ಹಾಸನ ನಗರಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಪೂರೈಕೆಯ 3ನೇ ಹಂತದ ಅಮೃತ್ ಯೋಜನೆಯಡಿ ನಗರದ ಎಲ್ಲ ವಾರ್ಡ್‌ಗಳು ಹಾಗೂ ಹೊಸದಾಗಿ ಹಾಸನ ನಗರಸಭೆಗೆ ಸೇರ್ಪಡೆಯಾದ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಕೆ ಮಾಡ ಬೇಕಾಗಿದೆ. ಬಹುಮುಖ್ಯವಾಗಿ ಕಸ ವಿಲೇವಾರಿ ಕೆಲಸ ಸಗಮವಾಗಬೇಕಾಗಿದೆ.
ಶಾಸಕರಿಗೆ ಸಮರ್ಪಣ ಮನೋಭಾವಬೇಕು: ಎಚ್ .ಡಿ.ರೇವಣ್ಣ ಅವರ ಕನಸಿನ ಯೋಜನೆಗಗಳ ಮೂಲ ಸ್ವರೂಪವನ್ನೇ ಶಾಸಕರಾಗಿದ್ದ ಪ್ರೀತಂಗೌಡ ಬದಲಾಯಿಸಿ ಯೋಜನೆಗಗಳು ಹಳ್ಳ ಹಿಡಿಯುಂತೆ ಮಾಡಿದ್ದರು. ಬಹು ಮುಖ್ಯ ವಾಗಿ ಹಾಸನ ಬಸ್ ನಿಲ್ದಾಣ ಎದುರಿನ ಚನ್ನಪಟ್ಟಣ ಕೆರೆ ಸೌಂದರ್ಯಿಕರಣ ಯೋಜನೆ ಮೂಲ ಯೋಜನೆಯಂತೆ ಅನುಷ್ಠಾನವಾಗಬೇಕಾಗಿದೆ. ಹಾಗೆಯೇ ಹಾಸನ ವಿಮಾನ ನಿಲ್ದಾಣ ಯೋಜನೆ ಮೂಲ ಯೋಜನೆಯಂತೆ , ಶಿವಮೊಗ್ಗದ ವಿಮಾನ ನಿಲ್ದಾಣದಂತೆ ಬೃಹತ್ ವಿಮಾನ ನಿಲ್ದಾಣವಾಗಿ ನಿರ್ಮಾಣವಾಗಬೇಕಾಗಿದೆ. ಈ ಯೋಜನೆಗಳಿಗೆ ಭೂ ಸ್ವಾಧೀನದ ಸಮಸ್ಯೆ ಹಾಗೂ ಅನುದಾನ ತರುವ ಬಹು ದೊಡ್ಡ ಸವಾಲನ್ನು ಸ್ವರೂಪ್ ನಿಭಾಯಿಸಬೇಕಾಗಿದೆ. ಎಚ್.ಡಿ.ರೇವಣ್ಣ ಅವರ ಸಹಾಯ, ಸಹಕಾರ ಪಡೆದರೆ ಅದು ಕಷ್ಟದ ಕೆಲಸವೇನೂ ಆಗಲಾರ ದು.ಆದರೆ, ಸ್ವರೂಪ್ ಅವರಿಗೆ ಇಚ್ಛಾಶಕ್ತಿ, ಅಭಿವೃದ್ಧಿ ದೃಷ್ಟಿಕೋನದ ಅಗತ್ಯವಿದೆ.
ಐಐಟಿ ಸ್ಥಳ ಉಳಿಸಿಕೊಳ್ಳಬೇಕು: ಹಾಸನ ವಿವಿ ಮಂಜೂರಾಗಿ ಕುಲಪತಿಗಳೂ ನೇಮಕವಾಗಿದ್ದಾರೆ. ಹೇಮ ಗಂಗೋತ್ರಿ ಎದುರು ಟ್ರಕ್ ಟರ್ಮಿನಲ್ ನಿರ್ಮಾಣದ ವಿವಾದ ಅಂತ್ಯವಾಗಿ ವಿವಿಯ ಹೊಸ ಕ್ಯಾಂಪಸ್ ನಿರ್ಮಾಣ ಆಗಬೇಕಾಗಿದೆ. ಹಾಗೆಯೇ ಐಐಟಿಗೆ ಸ್ವಾಧೀನವಾಗಿದ್ದ 1057ಎಕರೆ ಉಳಿಸಿಕೊಳ್ಳುವ ಭಾರೀ ದೊಡ್ಡ ಜವಾಬ್ದಾರಿಯೂ ನೂತನ ಶಾಸಕರ ಮೇಲಿದೆ. ಈ ಎಲ್ಲ ಯೋಜನೆಗಳ ಭವಿ ಷ್ಯದ ಬಗ್ಗೆ ಹಾಸನ ಕ್ಷೇತ್ರದ ಜನರ ಬಹಳ ನಿರೀಕ್ಷೆಯಿದೆ. ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜೊತೆಗೆ ಸೆಪ್ಟಂಬರ್‌ನಲ್ಲಿ ಹಾಸನ ನಗರ ಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರನ್ನು ಹಿಡಿದಿಟ್ಟುಕೊಂಡು ಹಾಸನ ನಗರ ಸಭೆ ಅಧಿಕಾರ ಹಿಡಿಯುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹಾಸನ ಕ್ಷೇತ್ರದಲ್ಲಿ ಭಾರೀ ಬಹುಮತ ಕೊಡಿಸಿ ತಮ್ಮ ರಾಜಕೀಯ ಸಾಮರ್ಥಯ ಪ್ರದರ್ಶಿಸುವ ಅನಿವಾರ್ಯತೆ ಸವಾಲೂ ಕೂಡ ಎಚ್.ಪಿ.ಸ್ವರೂಪ್ ಅವರಿಗಿದೆ.
ಲೋಕ ಸಮರಕ್ಕೆ ಮಾಜಿ ಶಾಸಕ ಪ್ರೀತಂಗೌಡ ಅಣಿ?:
ಹಾಸನ: ಅನಿರೀಕ್ಷಿತ ಸೋಲಿನಿಂದ ಮಾಜಿ ಶಾಸಕ ಪ್ರೀತಂಗೌಡ ಅವರು ಗಾಯಗೊಂಡ ಹುಲಿಯಂತಾಗಿದ್ದಾರೆ. ಸೋಲು ಸಹಿಸಿಕೊಂಡು ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವೂ ಅವರದಲ್ಲ. ಮುಂದಿನ ಐದು ವರ್ಷ ವಿಧಾನಸಭೆ ಚುನಾವಣೆವರೆಗೆ ನಿರುದ್ಯೋಗಿಯಾಗಿ ಕುಳಿತುಕೊಳ್ಳುವ ಮನಸ್ಥಿಯೂ ಪ್ರೀತಂಗೌಡ ಅವರದಲ್ಲ. ಅವರು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದ ಪ್ರೀತಂಗೌಡ ಅವರ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ವಿಧಾನಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅದಕ್ಕೂ ಮೊದಲು ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿಯೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್‌ಗೆ ಠಕ್ಕರ್ ಕೊಡಲು ಪ್ರೀತಂಗೌಡ ಅವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎನ್. ನಂಜುಂಡೇಗೌv